Saturday, July 27, 2024

ಮೋದಿ 10 ಪರ್ಸೆಂಟ್ ಅಭಿವೃದ್ಧಿ ಮಾಡಿದ್ರೆ ನಾನು ಕ್ಷಮೆ ಕೇಳುತ್ತೇನೆ : ಮಲ್ಲಿಕಾರ್ಜುನ ಖರ್ಗೆ ಸವಾಲ್

ಕಲಬುರಗಿ : ಪ್ರಧಾನಿ ಮೋದಿ ಪದೇ ಪದೆ ಕಲಬುರಗಿಗೆ ಬಂದು ಹೋಗಿದ್ದಾರೆ. ಆದ್ರೆ, ಬಂದು ಈ ಭಾಗಕ್ಕೆ ಏನು ಕೊಟ್ಟಿದ್ದಾರೆ? 10 ವರ್ಷ ಆಡಳಿತ ಮಾಡಿದ್ರು? ಏನು ಮಾಡಿದ್ದಾರೆ? ಈ ಭಾಗಕ್ಕೆ ಏನು ಕೊಟ್ಟಿದ್ದಾರೆ ಅಂತ ಅವರು ತೊರಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.

ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿ, ಮೋದಿ 10 ಪರ್ಸೆಂಟ್ ಅಭಿವೃದ್ಧಿ ಮಾಡಿದ್ರೆ ನಾನು ಕ್ಷಮೆ ಕೇಳುತ್ತೇನೆ ಎಂದು ಸವಾಲ್ ಹಾಕಿದರು.

ಕಲಬುರಗಿಯಲ್ಲಿ ಏಮ್ಸ್ ಮಾಡಿ ಅಂತ ಕೇಳಿದ್ರು, ಅದನ್ನು ಮಾಡಿಲ್ಲ. ನನ್ನ ಮೇಲೆ ಏನು ಸಿಟ್ಟಿದೆಯೋ ಗೊತ್ತಿಲ್ಲ ಅಥವಾ ಯಾರಾದರೂ ಕಿವಿಗೆ ತುಂಬಿದ್ದಾರೋ ಗೊತ್ತಿಲ್ಲ‌. ಕಲ್ಯಾಣ ಕರ್ನಾಟಕಕ್ಕೆ ಏನೂ ಕೆಲಸ ಮಾಡಿಲ್ಲ‌, ನಾನು ಐದು ವರ್ಷ ಕೇಂದ್ರ ಮಂತ್ರಿ ಇದ್ದೆ. ಆವಾಗ ರಾಜ್ಯಕ್ಕೆ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ನಾನು ಮೋದಿ ಅವರಿಗೆ ಚಾಲೆಂಜ್ ಮಾಡ್ತೇನೆ. ಅದರಲ್ಲಿ ಕೇವಲ 10 ಪರ್ಸೆಂಟ್ ನೀವು ಮಾಡಿದ್ರೆ, ನಾನು ಕ್ಷಮೆ ಕೇಳುತ್ತೇನೆ‌ ಎಂದು ಗುಡುಗಿದರು.

ಯಾರು ಸುಳ್ಳು, ಮೋದಿನಾ ನಾನಾ?

ಎಲ್ಲಾ ಕಡೆ ಹೇಳ್ತಾರೆ ಮೋದಿ ಗ್ಯಾರಂಟಿ. ನಮ್ಮ ರಾಜ್ಯದ ಐದು ಗ್ಯಾರಂಟಿ ಹೇಳಿದ್ದೇವೆ, ಅದನ್ನ ನಾವು ಕೊಟ್ಟಿದ್ದೇವೆ. ನಮ್ಮ ಗ್ಯಾರಂಟಿ ನೋಡಿ ಮೋದಿ ಗ್ಯಾರಂಟಿ ಅಂತಿದ್ದಾರೆ. ಅಪ್ಪಾ, ನೀನು 10 ವರ್ಷದಲ್ಲಿ ವರ್ಷಕ್ಕೆ ಎರಡೆರಡು ಕೋಟಿ ನೌಕರಿ ಕೊಡ್ತಿನಿ ಅಂದ್ರು ಕೊಟ್ಟರಾ? ಹಾಗಾದ್ರೆ ಯಾರು ಸುಳ್ಳು, ಮೋದಿನಾ ಅಥವಾ ನಾನಾ? ವಿದೇಶದಿಂದ ಹಣ ತರುತ್ತೇವೆ 15 ಲಕ್ಷ ಕೊಡ್ತಿನಿ ಅಂತ ಹೇಳಿದ್ರಿ, ಎಲ್ಲಿದೆ ಅದು? ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES