Thursday, May 16, 2024

ಮತ್ತೆ ಸೋತ RCB.. ತವರಲ್ಲಿ ಗೆದ್ದು ಬೀಗಿದ ಮುಂಬೈ, RCBಗೆ 5ನೇ ಸೋಲು

ಬೆಂಗಳೂರು : ಗೆದ್ದ ಮುಂಬೈ, ಸೋತ RCB. ಆರ್​ಸಿಬಿಗೆ ಸತತ ನಾಲ್ಕನೇ ಹಾಗೂ ಟೂರ್ನಿಯಲ್ಲಿ 5ನೇ ಸೋಲು. ಬ್ಯಾಕ್​ ಟು ಬ್ಯಾಕ್ ಪಂದ್ಯ ಗೆದ್ದು ಗೆಲುವಿನ ಹಳಿಗೆ ಮರಳಿದ ಮುಂಬೈ ಇಂಡಿಯನ್ಸ್​.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್ ತಂಡ ಹೀನಾಯ ಸೋಲು ಅನುಭವಿಸಿತು. ಮುಂಬೈ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ 197 ರನ್​ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಉತ್ತಮ ಆರಂಭ  ಪಡೆಯಿತು. ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ 101 ರನ್​ಗಳ ಅದ್ಭುತ ಜೊತೆಯಾಟ ನೀಡಿದರು. ಇಶಾನ್ ಕಿಶನ್ 34 ಎಸೆತಗಳಲ್ಲಿ 69 ರನ್​ ಸಿಡಿಸಿದರು. ರೋಹಿತ್ ಶರ್ಮಾ 38 ರನ್​ ಗಳಿಸಿದರು.

ಸೂರ್ಯ ವಿಧ್ವಂಸಕ ಬ್ಯಾಟಿಂಗ್

ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಸೂರ್ಯಕುಮಾರ್ ಯಾದವ್ ಅಬ್ಬರಿಸಿದರು. ಕೇವಲ 17 ಬಾಲ್​ಗಳಲ್ಲಿ ಯಾದವ್ ಸ್ಫೋಟಕ ಅರ್ಧಶತಕ (52) ಸಿಡಿಸಿದರು. ಇದರಲ್ಲಿ 5 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸ್​ ಇದ್ದವು. ನಾಯಕ ಹಾರ್ದಿಕ್ ಪಾಂಡ್ಯ ಅಜೇಯ 21, ತಿಲಕ್ ವರ್ಮಾ ಅಜೇಯ 16 ರನ್​ ಸಿಡಿಸಿದರು. RCB ಪರ ಆಕಾಶ್ ದೀಪ್, ವೈಶಾಕ್ ವಿಜಯ್​ಕುಮಾರ್ ಹಾಗೂ ವಿಲ್ ಜಾಕ್ಸ್ ತಲಾ ಒಂದು ವಿಕೆಟ್ ಪಡೆದರು.​

ರಜತ್, ಡಿಕೆ, ಡುಪ್ಲಿಸಿಸಿ ಅರ್ಧಶತಕ

ಆರ್​ಸಿಬಿ ಪರ ಡುಪ್ಲೆಸಿಸ್ 61, ರಜತ್ ಪಾಟೀದಾರ್ 50, ದಿನೇಶ್ ಕಾರ್ತಿಕ್ ಅಜೇಯ 53 ರನ್​ ಸಿಡಿಸಿದರು. ವಿರಾಟ್ ಕೊಹ್ಲಿ 3, ವಿಲ್ ಜಾಕ್ಸ್​ 8, ಮ್ಯಾಕ್ಸ್​ವೆಲ್ ಹಾಗೂ ಲೊಮ್ರೋರ್ ಶೂನ್ಯಕ್ಕೆ ಔಟಾದರು. ಮುಂಬೈ ಪರ ಬುಮ್ರಾ 5, ಕೋಟ್ಜಿ, ಆಕಾಶ್ ಮದ್ವಾಲ್ ಹಾಗೂ ಶ್ರೇಯಸ್​ ಗೋಪಾಲ್ ತಲಾ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES