Friday, May 17, 2024

ಸಂಜು ಸ್ಫೋಟ, ಪರಾಗ್ ಪರಾಕ್ರಮ.. ಗುಜರಾತ್​ಗೆ 197 ರನ್​ಗಳ ಬೃಹತ್ ಟಾರ್ಗೆಟ್

ಬೆಂಗಳೂರು : ಸಂಜು ಸ್ಫೋಟ, ಪರಾಗ್ ಪರಾಕ್ರಮ. ಗುಜರಾತ್ ಟೈಟಾನ್ಸ್ ವಿರುದ್ಧ ಬೃಹತ್‌ ಮೊತ್ತ ಪೇರಿಸಿದ ರಾಜಸ್ಥಾನ್ ರಾಯಲ್ಸ್.

ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡ ಗುಜರಾತ್ ಟೈಟಾನ್ಸ್ ತಂಡಕ್ಕೆ 197 ರನ್​ಗಳ ಬೃಹತ್ ಟಾರ್ಗೆಟ್ ನೀಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 196 ರನ್ ಕಲೆಹಾಕಿತು. ಇನ್ನಿಂಗ್​ ಆರಂಭಿಸಿದ ಆರ್​ಆರ್​ಗೆ ಗುಜರಾತ್ ಆರಂಭಿಕ ಆಘಾತ ನೀಡಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಜೋಸ್ ಬಟ್ಲರ್ 8 ರನ್​ಗೆ ಔಟಾದರು. ಯಶಸ್ವಿ ಜೈಸ್ವಾಲ್ 24 ರನ್​ಗಳಿಗೆ ಆಟ ಮುಗಿಸಿದರು.

ಬಳಿಕ ಒಂದಾರ ನಾಯಕ ಸಂಜು ಸ್ಯಾಮ್ಸನ್​ ಹಾಗೂ ರಿಯಾನ್ ಪರಾಗ್ ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದರು. ಗುಜರಾತ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ತಂಡದ ಮೊತ್ತವನ್ನು 190 ರನ್​ ಗಡಿ ದಾಟಿಸಿದರು. ಕೊನೆಯಲ್ಲಿ ಬಂದ ಶಿಮ್ರೋನ್ ಹೆಟ್ಮಯರ್ ಬಿಗ್ ಹಿಟ್ ಸಿಡಿಸಿ ರಂಜಿಸಿದರು.

ಪರಾಗ್, ಸಂಜು ಅರ್ಧಶಕತ

ರಿಯಾನ್ ಪರಾಗ್ 5 ಸಿಕ್ಸ್ ಹಾಗೂ 3 ಬೌಂಡರಿಗಳೊಂದಿಗೆ 76 ರನ್​ ಚಚ್ಚಿದರು. ನಾಯಕ ಸಂಜು ಸ್ಯಾಮ್ಸನ್ 38 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸ್​ ನೆರವಿನೊಂದಿಗೆ ಅಜೇಯ 68* ರನ್​ ಸಿಡಿಸಿದರು. ಗುಜರಾತ್ ಪರ ಉಮೇಶ್ ಯಾದವ್, ರಶೀದ್ ಖಾನ್ ಹಾಗೂ ಮೋಹಿತ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು. ಗುಜರಾತ್ ಗೆಲ್ಲಲ್ಲು 197 ರನ್​ ಗಳಿಸಿಬೇಕಿದೆ.

RELATED ARTICLES

Related Articles

TRENDING ARTICLES