Saturday, October 5, 2024

PUC ಫಲಿತಾಂಶ ಪ್ರಕಟ : ಈ ಜಿಲ್ಲೆ ಪ್ರಥಮ, ಯಾವ ಜಿಲ್ಲೆಗೆ ಕೊನೆಯ ಸ್ಥಾನ?

ಬೆಂಗಳೂರು : 2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದೆ. 6 ಲಕ್ಷ 81 ಸಾವಿರದ 079 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ರು. ಅವರಲ್ಲಿ ಸುಮಾರು 5 ಲಕ್ಷ 52 ಸಾವಿರದ 690 ಮಂದಿ ತೇರ್ಗಡೆಯಾಗಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇಕಡಾ 97.37ರಷ್ಟು ಸಾಧನೆ ಮಾಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಶೇ 96.80 ರಷ್ಟು ಮಕ್ಕಳು ತೇರ್ಗಡೆಯಾಗುವ ಮೂಲಕ ಉಡುಪಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ರಾಜ್ಯಾದಂತ ಮಾರ್ಚ್​ 1 ರಿಂದ 22 ರವರೆಗೆ ಒಟ್ಟು 1,124 ಪರೀಕ್ಷಾ ಕೇಂದ್ರಗಳಲ್ಲಿ ದ್ವೀತಿಯ ಪಿಯುಸಿ ಪರೀಕ್ಷೇಗಳನ್ನು ನಡೆಸಲಾಗಿತ್ತು. ರಾಜ್ಯದಲ್ಲಿ ಒಟ್ಟಾರೆ 5 ಲಕ್ಷ 52ಸಾವಿರದ 690 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ರಾಜ್ಯದಲ್ಲಿ ಒಟ್ಟಾರೆ ಶೇಕಡಾ 81.15% ರಷ್ಟು ಫಲಿತಾಂಶ ಹೊರಬಂದಿದೆ. ಕಳೆದ ಬಾರಿಗಿಂತ ಈ ಬಾರಿ ಶೇ 6.48% ಏರಿಕೆ ಕಂಡು ಬಂದಿದೆ ಎಂದು ತಿಳಿದು ಬಂದಿದೆ.

ಈ ಸುದ್ದಿ ಓದಿದ್ದೀರಾ? : 5, 8, 9, 11ನೇ ತರಗತಿಗಳ ಫಲಿತಾಂಶಕ್ಕೆ ಸುಪ್ರೀಂಕೋರ್ಟ್ ತಡೆ

ಯಾವ ಜಿಲ್ಲೆ ಫಸ್ಟ್? ಯಾವ ಜಿಲ್ಲೆ ಲಾಸ್ಟ್​?

  • ಪ್ರಥಮ ಸ್ಥಾನ : ದಕ್ಷಿಣ ಕನ್ನಡ (ಶೇ.97)
  • ದ್ವಿತೀಯ ಸ್ಥಾನ : ಉಡುಪಿ (96)
  • ತೃತೀಯ ಸ್ಥಾನ : ವಿಜಯಪುರ (94)
  • 4ನೇ ಸ್ಥಾನ : ಉತ್ತರ ಕನ್ನಡ (92)
  • 5ನೇ ಸ್ಥಾನ : ಕೊಡಗು (92)
  • 6ನೇ ಸ್ಥಾನ : ಬೆಂಗಳೂರು ದಕ್ಷಿಣ (89)
  • 7ನೇ ಸ್ಥಾನ : ಹಾಸನ (85)
  • 8ನೇ ಸ್ಥಾನ : ಚಾಮರಾಜನಗರ (84)
  • ಕೊನೆಯ ಸ್ಥಾನ : ಗದಗ

RELATED ARTICLES

Related Articles

TRENDING ARTICLES