Tuesday, May 14, 2024

KKRಗೆ ಬೇವು, CSKಗೆ ಬೆಲ್ಲ : ಕೋಲ್ಕತ್ತಾ ವಿರುದ್ಧ ಚೆನ್ನೈಗೆ ಅದ್ಭುತ ಗೆಲುವು

ಬೆಂಗಳೂರು : ಬೌಲಿಂಗ್​ನಲ್ಲಿ ಜಡ್ಡು ಜಾದು. ಬ್ಯಾಟಿಂಗ್​ನಲ್ಲಿ ಋತು ರಾಕ್. ಕೆಕೆಆರ್​ ಫ್ಯಾನ್ಸ್​ಗೆ ಬೇವು, ಸಿಎಸ್​ಕೆ ಫ್ಯಾನ್ಸ್​ಗೆ ಬೆಲ್ಲ. ಸೋಲೇ ಕಾಣದ ಕೋಲ್ಕತ್ತಾಗೆ ಸೋಲಿನ ರುಚಿ ತೋರಿಸಿದ ಚೆನ್ನೈ.

ಚೆನ್ನೈನ ಎಂ.ಎ ಚಿದಂಬರಂ ಮೈದಾನದಲ್ಲಿ ನಡೆದ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್​ ಗಳಿಸಿತು. ಈ ಸುಲಭ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್​ ಕಿಂಗ್ಸ್​ 17.4 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಸತತ ಎರಡು ಸೋಲುಗಳ ಬಳಿಕ ಋತುರಾಜ್ ಪಡೆ ಗೆಲುವಿನ ಟ್ರ್ಯಾಕ್​ಗೆ ಮರಳಿತು.

ಸುಲಭ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈಗೆ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ರಚಿನ್ ರವೀಂದ್ರ ಉತ್ತಮ ಆರಂಭ ನೀಡಿದರು. ರಚಿನ್ 15 ರನ್ ಗಳಿಸಿ ಔಟಾದರು. ಬಳಿಕ ಬಂದ ಮಿಚೆಲ್ 25 ರನ್​ಗಳ ಕಾಣಿಕೆ ನೀಡಿದರು. ಶಿವಂ ದುಬೆ 3 ಸಿಕ್ಸ್​ ಹಾಗೂ ಒಂದು ಬೌಂಡರಿ ಸಿಡಿಸಿ (28) ಅಬ್ಬರಿಸಿದರು.

ಋತುರಾಜ್ ಬೊಂಬಾಟ್ ಅರ್ಧಶತಕ

ಕೊನೆಯ ಎಸೆತದ ವರೆಗೂ ನಾಯಕನ ಆಟ ಪ್ರದರ್ಶಿಸಿದ ಋತುರಾಜ್ ಗಾಯಕ್ವಾಡ್ ಅವರು ಚೆನ್ನೈ ತಂಡವನ್ನು ಗೆಲುವಿನ ದಡ ಸೇರಿಸಿದರು. ಗೆಲುವಿಗೆ 3 ರನ್​ ಬೇಕಿದ್ದಾಗ ಮಹೇಂದ್ರ ಸಿಂಗ್​ ಧೋನಿ ಮೈದಾನದಲ್ಲಿ ಫ್ಯಾನ್ಸ್​ಗೆ ದರ್ಶನ ನೀಡಿದರು. ಋತುರಾಜ್ ಅರ್ಧಶತಕ (67) ಸಿಡಿಸಿ ಮಿಂಚಿದರು. ಕೆಕೆಆರ್ ಪರ ವೈಭವ್ ಅರೋರಾ 2 ಹಾಗೂ ಸುನಿಲ್ ನರೈನ್ ಒಂದು ವಿಕೆಟ್ ಪಡೆದರು.

ಬೌಲಿಂಗ್​ನಲ್ಲಿ ಜಡ್ಡು ಜಾದು

ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್​ ಆರಂಭದಿಂದಲೂ ವೈಫಲ್ಯ ಅನುಭವಿಸಿತು. ಫಿಲ್ ಸಾಲ್ಟ್​ ಶೂನ್ಯಕ್ಕೆ ನಿರ್ಗಮಿಸಿದರು. ಚೆನ್ನೈ ಪರ ರವೀಂದ್ರ ಜಡೇಜಾ ಮ್ಯಾಜಿಕ್ ಮಾಡಿದರು. ಜಡೇಜಾ 3, ತುಷಾರ್ ದೇಶಪಾಂಡೆ 3, ರೆಹಮಾನ್ 2 ಹಾಗೂ ಮಹೀಶ್ ತೀಕ್ಷಣ ಒಂದು ವಿಕೆಟ್ ಪಡೆದರು. ಕೆಕೆಆರ್​ ಪರ ನಾಯಕ ಶ್ರೇಯಸ್ ಅಯ್ಯರ್ 34, ನರೈನ್​ 27, ರಘುವಂಶಿ 24 ರನ್​ ಗಳಿಸಿದರು. ಹ್ಯಾಟ್ರಿಕ್ ಗೆಲುವು ಕಂಡಿದ್ದ ಕೊಲ್ಕತ್ತಾ ಮೊದಲ ಸೋಲು ಅನುಭವಿಸಿತು.

RELATED ARTICLES

Related Articles

TRENDING ARTICLES