Friday, May 3, 2024

ಮೋದಿ ಬಡವರಿಗೆ ಶಾಸ್ವತ ಗ್ಯಾರೆಂಟಿ ಯೋಜನೆಗಳನ್ನು ಕೊಟ್ಟಿದ್ದಾರೆ ; ಬಸವರಾಜ ಬೊಮ್ಮಾಯಿ

ಗದಗ: ಪ್ರಧಾನಿ ನರೇಂದ್ರ ಮೋದಿಯವರು ಗ್ರಾಮೀಣ ಮಹಿಳೆಯರಿಗೆ, ಬಡವರಿಗೆ ಮನೆ, ಕುಡಿಯಲು ನೀರು, ಶೌಚಾಲಯ, ಉಜ್ವಲ ಗ್ಯಾಸ್, ಅಕ್ಕಿ ಸೇರಿದಂತೆ ಶಾಸ್ವತ ಗ್ಯಾರೆಂಟಿಗಳನ್ನು ಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಇಂದು ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಸಾಪುರ, ರಾಮಗಿರಿ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿ ಮಾತನಾಡಿದರು. ದೇಶ ಕಂಡ ದಿಟ್ಟ ಧಿಮಂತ ನಾಯಕ ನರೇಂದ್ರ ಮೋದಿಯವರು, ಅವರು ದೇಶದ ಎಲ್ಲರಿಗೂ ಶಾಸ್ವತ ಗ್ಯಾರೆಂಟಿಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಪಿಎಂ ಅವಾಸ ಯೊಜನೆ ಅಡಿಯಲ್ಲಿ 8 ಲಕ್ಷ ಮನೆ, 12 ಲಕ್ಷ ಶೌಚಾಲಯ ಕೊಟ್ಟಿದ್ದಾರೆ. ಮನೆ ಮನೆಗೆ ನಳದ ಮೂಲಕ ನೀರು ನೀಡುತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 1300 ಕೊಟಿ ರೂ. ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆ ಜಾರಿಯಾಗುತ್ತಿದೆ. ಶಿರಹಟ್ಟಿ ಭಾಗದಲ್ಲಿಯೂ ಯೋಜನೆ ಅನಷ್ಠಾನವಾಗಲಿದ್ದು, ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಸ್ವಲ್ಪ ವಿಳಂಬವಾಗಿದೆ. ಮಳೆಗಾಲಕ್ಕೆ ಯೋಜನೆ ಜಾರಿಯಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಡ್ರಗ್​ ಸಪ್ಲೈ ಮಾಡುತ್ತಿದ್ದ ವಿದೇಶಿ ಪ್ರಜೆ ಬಂಧನ

ನಾನು ಸಿಎಂ ಆದ ತಕ್ಷಣ ರೈತರ ಮಕ್ಕಳಿಗೆ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇನೆ. ಆದರೆ, ಕಾಂಗ್ರೆಸ್ ಸರ್ಕಾರ ಈಗ ಆ ಯೋಜನೆಯನ್ನು ನಿಲ್ಲಿಸಿದೆ. ರೈತರಿಗೆ ರಾಜ್ಯ ಸರ್ಕಾರದಿಂದ ವಾರ್ಷಿಕ 4000 ರೂ. ನೀಡುವ ಕಿಸಾನ್ ಸಮ್ಮಾನ್ ಯೋಜ‌ನೆ ನಿಲ್ಲಿಸಿದ್ದಾರೆ. ಕಳೆದ ವರ್ಷದ ಸೆಪ್ಟಂಬರ್ ನಿಂದ ರೈತರಿಗೆ ಹಾಲಿನ ಪ್ರೋತ್ಸಾಹಧನ ನಿಲ್ಲಿಸಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಹಿರಿಯ ತಾಯಂದರಿಗೆ, ವಿಧವೆಯರಿಗೆ 200 ಪಿಂಚಣಿ ಹೆಚ್ಚಳ ಮಾಡಿದ್ದೇವೆ‌ ಅಂಗವಿಕಲರಿಗೆ 400 ರೂ. ಹೆಚ್ಚಳ ಮಾಡಿದ್ದೇನೆ. ರಾಜ್ಯ ಸರ್ಕಾರದ ಗ್ಯಾರೆಂಟಿಗಳು ಎಲ್ಲರಿಗೂ ತಲುಪಿಲ್ಲ‌ ಜನರು ತಿರುಗಾಡಿ ಚಪ್ಪಲಿ ಸವೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರಗಾಲ ಗ್ಯಾರೆಂಟಿ ನಾವು ಅಧಿಕಾರದಲ್ಲಿದ್ದಾಗ ಪ್ರವಾಹ ಬಂದಿತ್ತು. ಇವರು ಬಂದರೆ ಬರ ಗ್ಯಾರೆಂಟಿ ಆಗಿದೆ. ಇದು ರೈತರು ಮತ್ತು ಬಡವರ ವಿರೋಧಿ ಸರ್ಕಾರವಾಗಿದೆ.

ಮೋದಿಯವರು ನಮಗೆ ಅನ್ನ ನೀರು, ಗ್ಯಾಸ್ ಕೊಡುವ ಕೆಲಸ ಮಾಡಿದ್ದಾರೆ. ಅವರಿಗೆ ಮತ ನೀಡುವ ಮೂಲಕ ಕೃತಜ್ಞತೆ ಸಲ್ಲಿಸುವ ಕೆಲಸ ನಾವು ಮಾಡಬೇಕು. ಲಕ್ಚ್ಮೇಶ್ವರ ಶಿರಹಟ್ಟಿ ನನಗೆ ಹೊಸದಲ್ಲ. ನಾನು ಸಂಸದನಾಗಿ ಶಾಸಕನಾಗಿ ನಿಮ್ಮ ಸೇವೆ ಮಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಸಿ ಪಾಟೀಲ್, ಶಾಸಕ ಚಂದ್ರು ಲಮಾಣಿ ಹಾಜರಿದ್ದರು.

RELATED ARTICLES

Related Articles

TRENDING ARTICLES