Sunday, May 12, 2024

ಮತ್ತೆ ಸೋತ ಗುಜರಾತ್.. ಗಿಲ್ ಪಡೆ ಮಣಿಸಿ ಹ್ಯಾಟ್ರಿಕ್ ಜಯ ಸಾಧಿಸಿದ ಕನ್ನಡಿಗ ರಾಹುಲ್ ಪಡೆ

ಬೆಂಗಳೂರು : ಗುಜರಾತ್ ಟೈಟಾನ್ಸ್ ವಿರುದ್ಧ ಕನ್ನಡಿಗ ಕೆ.ಎಲ್. ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ 33 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು.

ಲಕ್ನೋನಾ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್​ ಗಳಿಸಿತು. ಈ ಕಠಿಣ ಗುರಿ ಬೆನ್ನಟ್ಟಿದ ಗುಜರಾತ್ ತಂಡ 18.5 ಓವರ್​ಗಳಲ್ಲಿ 130 ರನ್​ಗಳಿಗೆ ಆಲೌಟ್​ ಆಯಿತು.

ಈ ಗೆಲುವಿನ ಮೂಲಕ ಲಕ್ನೋ ಅಂಕಪಟ್ಟಿಯಲ್ಲಿ ಚೆನ್ನೈ ತಂಡವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿತು. ಅಲ್ಲದೆ, ಗುಜರಾತ್ ವಿರುದ್ಧ ಲಕ್ನೋ ಮೊದಲ ಗೆಲುವು ದಾಖಲಿಸಿತು. ಐಪಿಎಲ್‌ನಲ್ಲಿ ಈವರೆಗೆ ಲಕ್ನೋ ಮತ್ತು ಗುಜರಾತ್ ನಡುವೆ 5 ಪಂದ್ಯಗಳು ನಡೆದಿವೆ. ಈ ಪೈಕಿ ಗುಜರಾತ್ ತಂಡ 4 ಪಂದ್ಯಗಳನ್ನು ಗೆದ್ದಿದೆ. ಲಕ್ನೋ ಒಂದು ಪಂದ್ಯ ಗೆದ್ದಿದೆ. ಅದು ತವರು ಅಂಗಳದಲ್ಲಿ ಎಂಬುದು ವಿಶೇಷ.

ಗುಜರಾತ್ ಪರ ಸಾಯಿ ಸುದರ್ಶನ್ 31, ರಾಹುಲ್ ತೆವಾಟಿಯಾ 30, ನಾಯಕ ಶುಭ್​ಮನ ಗಿಲ್ 19, ವಿಜಯ್ ಶಂಕರ್ 17, ದರ್ಶನ್ 12 ರನ್ ಗಳಿಸಿದರು. ಉಳಿದಂತೆ ಯಾವೊಬ್ಬ ಬ್ಯಾಟರ್ ಸಹ ಎರಡಂಕಿ ದಾಟಲಿಲ್ಲ. ವಿಲಿಯಮ್ಸ್​, ರಶೀದ್ ಖಾನ್ ಹಾಗೂ ಶರತ್ ಬಿ.ಆರ್ ಉತ್ತಮ ಪ್ರದರ್ಶನ ನೀಡಲಿಲ್ಲ. ಇದೇ ಗುಜರಾತ್ ಸೋಲಿಗೆ ಕಾರಣವಾಯಿತು.

ಯಶ್ ಠಾಕೂರ್ 5 ವಿಕೆಟ್

ಲಕ್ನೋ ಸೂಪರ್ ಜೈಂಟ್ಸ್ ಯಶ್ ಠಾಕೂರ್ 5 ವಿಕೆಟ್ ಪಡೆದು ಮಿಂಚಿದರು. ಕೃನಾಲ್ ಪಾಂಡ್ಯ 3, ರವಿ ಬಿಷ್ಣೋಯ್, ನವೀನ್-ಉಲ್-ಹಕ್ ತಲಾ ಒಂದು ವಿಕೆಟ್ ಪಡೆದರು. ಯಶ್ ಠಾಕೂರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮಾರ್ಕಸ್ ಸ್ಟೋನಿಸ್ ಅದ್ಭುತ ಆಟ

ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಪರ ಲಕ್ನೋ ಪರ ಮಾರ್ಕಸ್ ಸ್ಟೋನಿಸ್ 58, ಕೆ.ಎಲ್. ರಾಹುಲ್ 33, ನಿಕೋಲಸ್ ಪೂರನ್ ಅಜೇಯ 32, ಆಯುಷ್ ಬಡೋನಿ 20, ಕೃನಾಲ್ ಪಾಂಡ್ಯ ಅಜೇಯ 2 ರನ್ ಗಳಿಸಿದರು. ಗುಜರಾತ್ ಪರ ಉಮೇಶ್ ಯಾದವ್ ಹಾಗೂ ದರ್ಶನ್ ನಲ್ಕಂಡೆ ತಲಾ 2 ವಿಕೆಟ್, ರಶೀದ್ ಖಾನ್ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES