Saturday, May 11, 2024

ಮೊದಲ ಪಂದ್ಯದಲ್ಲೇ ಸೂರ್ಯ ಗೋಲ್ಡನ್ ಡಕ್ : 49ಕ್ಕೆ ರೋಹಿತ್ ಶರ್ಮಾ ಔಟ್

ಬೆಂಗಳೂರು : ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಗೋಲ್ಡನ್ ಡಕ್ ಆದರು.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್ ಸೋತಿರುವ ಮುಂಬೈ ಇಂಡಿಯನ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಇಂಜುರಿ ಬಳಿಕ ಈ ಆವೃತ್ತಿಯ ಮೊದಲ ಪಂದ್ಯ ಆಡಿದ ಸೂರ್ಯ ಕುಮಾರ್ ಯಾದವ್ ಶೂನ್ಯಕ್ಕೆ ಔಟಾದರು.

ಇನ್ನಿಂಗ್ಸ್​ ಆರಂಭಿಸಿದ ಮುಂಬೈಗೆ ಆರಂಭಿಕ ಬ್ಯಾಟರ್​ಗಳಾದ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಉತ್ತಮ ಆರಂಭ ನೀಡಿದರು. 42 ಎಸೆತಗಳಲ್ಲಿ 80 ರನ್​ಗಳ ಜೊತೆಯಾಟ ನೀಡಿದರು. ಆದರೆ, 49 ರನ್​ ಗಳಿಸಿದ್ದ ರೋಹಿತ್ ಔಟಾಗಿ ನಿರಾಸೆ ಮೂಡಿಸಿದರು.

ಇನ್ನಿಂಗ್ಸ್​ನ ಏಳನೇ ಓವರ್‌ನಲ್ಲಿ ಮುಂಬೈ ಮೊದಲ ವಿಕೆಟ್ ಕಳೆದುಕೊಂಡಿತು. ಅಕ್ಷರ್ ಪಟೇಲ್ ಅವರು ರೋಹಿತ್ ಶರ್ಮಾ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. 27 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ರೋಹಿತ್ 49 ರನ್ ಗಳಿಸಿ ಔಟಾದರು. ಈ ಮೂಲಕ ಕೇವಲ ಒಂದು ರನ್​ನಿಂದ ಅರ್ಧಶತಕ ವಂಚಿತರಾದರು.

ಉತ್ತಮವಾಗಿ ಆಡುತ್ತಿದ್ದ ಇಶಾನ್ ಕಿಶನ್ 23 ಎಸೆತಗಳಲ್ಲಿ 42 ರನ್​ ಗಳಿಸಿ ಔಟಾದರು. ಬಳಿಕ ಪಂದ ತಿಲಕ್ ವರ್ಮಾ 6 ರನ್​ ಗಳಿಸಿ ಪೆವಿಲಿಯನ್​ ಕಡೆ ಮುಖ ಮಾಡಿದರು. ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ (27) ಹಾಗೂ ಟೀಮ್ ಡೇವಿಡ್ (3) ಕ್ರೀಸ್​ನಲ್ಲಿದ್ದಾರೆ. ಪ್ರಸ್ತುತ ಮುಂಬೈ 15 ಓವರ್​ನಲ್ಲಿ 4 ವಿಕೆಟ್ ಕಳೆದುಕೊಂಡು 132 ರನ್​ ಗಳಿಸಿದೆ.

RELATED ARTICLES

Related Articles

TRENDING ARTICLES