Sunday, May 12, 2024

ಇಲ್ಲಿ ಬಿಜೆಪಿ ಅಭ್ಯರ್ಥಿ ‘ಸೂರ್ಯ’.. ಆದ್ರೆ ನಾನು ‘ಅಮಾವಾಸ್ಯೆ’ ಅಂತ ಕರಿತೀನಿ : ಸಿದ್ದರಾಮಯ್ಯ

ಬೆಂಗಳೂರು : ಇಲ್ಲಿ ಬಿಜೆಪಿ ಅಭ್ಯರ್ಥಿ ‘ಸೂರ್ಯ’.. ಆದ್ರೆ ಸೂರ್ಯನಿಗೆ ನಾನು ‘ಅಮಾವಾಸ್ಯೆ’ ಅಂತ ಕರೆಯುತ್ತೇನೆ. ಸಂವಿಧಾನದ ಬದಲಾವಣೆ ಮಾಡ್ತಿವೆ ಅಂತ ಗಿರಾಕಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಹೊಸಕೆರೆಹಳ್ಳಿಯಲ್ಲಿ ಮಾತನಾಡಿದ ಅವರು, ಗಿಮಿಕ್ ಮಾಡಿಕೊಂಡು ಅಮವಾಸ್ಯೆ ಬರ್ತಾನೆ. ಹೀಗಾಗಿ, ಬಿಜೆಪಿ ಅಭ್ಯರ್ಥಿಯನ್ನು ಸೂರ್ಯನನ್ನ ಸೋಲಿಸಿ, ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸಿ ಎಂದು ಹೇಳಿದರು.

ನಾವು ಸುಮ್ ಸುಮ್ನೆ ಮತ ಕೇಳಲ್ಲ. ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿಯನ್ನು ಕೊಟ್ಟಿದ್ದೇವೆ. ಬಿಜೆಪಿಯವರು ಯಾವ ಭರವಸೆ ನೀಡಿಲ್ಲ. ಬೆಂಗಳೂರು ನಗರಕ್ಕೆ ಯಾವ ಕಾರ್ಯಕ್ರಮ ಕೊಟ್ಟಿಲ್ಲ. ಸೂರ್ಯ ಅವರಿಗೆ ನಾವು ಅಮಾವಾಸ್ಯೆ ಅಂತ ಕರೆಯುತ್ತೇವೆ. ಸೂರ್ಯ ಅವ್ರು ಒಂದು ದಿನ ಕರ್ನಾಟಕಕ್ಕೆ ಆದ ಅನ್ಯಾಯದ ಬಗ್ಗೆ ಮಾತಾಡಿಲ್ಲ. ಕುಡಿಯುವ ನೀರು, ಚರಂಡಿ, ರಸ್ತೆ ಅಭಿವೃದ್ಧಿ ಯಾವುದನ್ನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ನನ್ನ ಬಗ್ಗೆ ಗೌರವವಿದ್ರೆ ವೋಟ್ ಹಾಕಿ

2014ರ ಭರವಸೆಯನ್ನು ಮೋದಿ ಈಡೇರಿಸಿಲ್ಲ. ಹೀಗಾಗಿ, ಕ್ರಿಯಾಶೀಲ ರಾಜಕಾರಣಿಯಾದ ಸೌಮ್ಯರೆಡ್ಡಿ ಅವರಿಗೆ ನೀವು ಮತ ಚಲಾಯಿಸಿ. ನನ್ನ ಬಗ್ಗೆ, ರಾಮಲಿಂಗಾ ರೆಡ್ಡಿಯವರ ಬಗ್ಗೆ ಗೌರವವಿದ್ರೆ ದಯಮಾಡಿ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕಿ. ಕರ್ನಾಟಕಕ್ಕೆ ಆದ ಅನ್ಯಾಯದ ವಿರುದ್ಧ ಹೋರಾಟ ಮಾಡಲು ಸೌಮ್ಯ ರೆಡ್ಡಿಗೆ ಅವಕಾಶ ಮಾಡಿಕೊಡಿ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

ಅಚ್ಛೇ ದಿನ್‌ ಅಂದ್ರು, ಎಲ್ಲಿದೆ ಅಚ್ಛೇ ದಿನ

ಗ್ಯಾರಂಟಿ ಎಲ್ಲಾ ಜಾರಿಯಾಗಿದೆ ಅಲ್ವಾ..? ದುಡ್ಡು, ಕರೆಂಟ್ ಎಲ್ಲಾ ಸಿಕ್ತಿದೆ ಅಲ್ವಾ..? ಇದೆಲ್ಲಾ ನಾವು ಅಧಿಕಾರಕ್ಕೆ ಬಂದ 10 ತಿಂಗಳಲ್ಲಿ ಮಾಡಿದ್ದೇವೆ. ನಾವು ಸತ್ಯ ಹೇಳುತ್ತಿದ್ದೇವೆ. ಬಿಜೆಪಿ ಸುಳ್ಳು ಹೇಳ್ತಿದ್ದಾರೆ. ನರೇಂದ್ರ ಮೋದಿ ಅವ್ರು ಹೇಳಿದ್ರು, 15 ಲಕ್ಷ ‌ಕಪ್ಪು ಹಣ ತಂದು ಕೊಡ್ತೇವೆ ಅಂತ. ಆದ್ರೆ ಇದುವರೆಗೂ ಕೊಡಲಿಲ್ಲ. ರೈತರಿಗೆ ಮೋಸ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್‌ ಜಾಸ್ತಿ ಆಗಿದೆ. ಅಚ್ಛೇ ದಿನ್‌ ಅಂತ ಹೇಳಿದ್ರು, ಎಲ್ಲಿದೆ ಅಚ್ಛೇ ದಿನ ಎಂದು ಮೋದಿ ವಿರುದ್ಧ ಹರಿಹಾಯ್ದರು.

RELATED ARTICLES

Related Articles

TRENDING ARTICLES