Sunday, May 12, 2024

ಮತ್ತೆ ಸೋತ RCB.. ಕೊಹ್ಲಿ ಶತಕ ವ್ಯರ್ಥ, ತವರಲ್ಲಿ ಗೆದ್ದು ಬೀಗಿದ ರಾಜಸ್ಥಾನ್ ‘ರಾಜ’ರು

ಬೆಂಗಳೂರು : ಸೋತ RCB, ಗೆದ್ದ RR. ಆರ್​ಸಿಬಿಗೆ ಹ್ಯಾಟ್ರಿಕ್ ಸೋಲು. ಸತತ ನಾಲ್ಕು ಪಂದ್ಯ ಗೆದ್ದು ಬೀಗಿದ ರಾಜಸ್ಥಾನ್ ರಾಯಲ್ಸ್​. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಮುಗ್ಗರಿಸಿದ ಆರ್​ಸಿಬಿ. ಇದೇನಾ ಆರ್​ಸಿಬಿ ಹೊಸ ಅಧ್ಯಾಯ?

ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಭರ್ಜರಿ ಗೆಲುವು ದಾಖಲಿಸಿತು.

ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 6 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು.

ಆರ್​ಸಿಬಿ ನೀಡಿ 184 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್​ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಇನ್ನಿಂಗ್ಸ್​ ಆರಂಭಿಸಿದ ರಾಜಸ್ಥಾನ ಮೊದಲ ಓವರ್​ನಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡು ದೊಡ್ಡ ಆಘಾತ ಅನುಭವಿಸಿತು. ಬಳಿಕ ಮೈದಾನದಲ್ಲಿ ನಡೆದದ್ದು ನಾಯಕ ಸಂಜು ಸ್ಯಾಮನ್ಸ್ ಹಾಗೂ ಬಟ್ಲರ್ ರೌದ್ರಾವತಾರ.

ಆರ್​ಸಿಬಿ ಬೌಲರ್​ಗಳನ್ನು ಮನಬಂದಂತೆ ಚಚ್ಚಿದ ಈ ಜೋಡಿ 86 ಎಸೆತಗಳಲ್ಲಿ 148 ರನ್​ಗಳ ಭರ್ಜರಿ ಜೊತೆಯಾಟ ಆಡಿತು. ನಾಯಕ ಸಂಜು ಸ್ಯಾಮ್ಸನ್​ 8 ಬೌಂಡರಿ ಹಾಗೂ 2 ಸಿಕ್ಸರ್​ ಮೂಲಕ 69 ರನ್​ ಚಚ್ಚಿದರು. ಜೋಸ್​ ಬಟ್ಲರ್ 58 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನೊಂದಿಗೆ ಅಜೇಯ 100 (ಶತಕ) ರನ್ ಸಿಡಿಸಿದರು. ಇದು ಈ ವರ್ಷದ ಐಪಿಎಲ್​ ಟೂರ್ನಿಯಲ್ಲಿ ಎರಡನೇ ಶತಕವಾಗಿದೆ. ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೊದಲ ಶತಕ ಸಿಡಿಸಿದರು.

ಆರ್​ಸಿಬಿಗೆ ಹ್ಯಾಟ್ರಿಕ್ ಸೋಲು

ಅಂತಿಮವಾಗಿ ರಾಜಸ್ಥಾನ 19.1 ಓವರ್​ಗಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಬಟ್ಲರ್ ಕೊನೆಯವರೆಗೂ ಕ್ರೀಸ್​ನಲ್ಲಿ ನಿಂತು ಗೆಲುವು ತಂದುಕೊಂಡರು. ಆರ್​ಸಿಬಿ ಪರ ಟಾಪ್ಲೆ 2, ಯಶ್ ದಯಾಳ್ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ರಾಜಸ್ಥಾನ ಟೂರ್ನಿಯಲ್ಲಿ ಸತತ 4ನೇ ಗೆಲುವು ದಾಖಲಿಸಿತು. ಇತ್ತ ಆರ್​ಸಿಬಿ, ಸತತ 3ನೇ ಸೋಲು ಕಂಡಿತು. ಇನ್ನೂ ಅಂಕಪಟ್ಟಿಯಲ್ಲಿ ಕೆಕೆಆರ್​ ತಂಡವನ್ನು ಹಿಂದಿಕ್ಕಿ ರಾಜಸ್ಥಾನ ಅಗ್ರಸ್ಥಾನ ಅಲಂಕರಿಸಿತು.

ವಿರಾಟ್ ಕೊಹ್ಲಿ ಶತಕ ವ್ಯರ್ಥ

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್​ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಪ್ ಡುಪ್ಲೆಸಿಸ್ ಉತ್ತಮ ಆರಂಭ ನೀಡಿದರು. ವಿರಾಟ್ ಕೊಹ್ಲಿ ಅಜೇಯ 113, ಡುಪ್ಲೆಸಿಸ್ 44, ಕ್ಯಾಮರೂನ್ ಗ್ರೀನ್​ ಅಜೇಯ 5 ರನ್ ಗಳಿಸಿದರು. ಮ್ಯಾಕ್ಸ್​ವೆಲ್ 1 ಹಾಗೂ ಇಂದು ಪದಾರ್ಪಣೆ ಮಾಡಿದ ಸೌರವ್ ಚೌಹಾನ್ 9 ರನ್​ ಗಳಿಸಿ ನಿರಾಸೆ ಮೂಡಿಸಿದರು. ರಾಜಸ್ಥಾನ್ ರಾಯಲ್ಸ್​ ಪರ ಚಹಾಲ್ 2 ಹಾಗೂ ಬರ್ಗರ್ ಒಂದು ವಿಕೆಟ್ ಪಡೆದರು. ಆರ್​ಸಿಬಿ ಪರ ವಿರಾಟ್​ ಕೊಹ್ಲಿ ಸಿಡಿಸಿದ ಶತಕ ವ್ಯರ್ಥವಾಯಿತು.

RELATED ARTICLES

Related Articles

TRENDING ARTICLES