Monday, May 13, 2024

ಯುಗಾದಿ,ರಂಜಾನ್ ರಜೆಗೆ ಊರಿಗೆ ಹೊರಟವರಿಗೆ ಖಾಸಗಿ ಬಸ್‌ ‘ಬಿಸಿ ತುಪ್ಪ’: ಟಿಕೆಟ್‌ ದರದಲ್ಲಿ ಭಾರೀ ಏರಿಕೆ..!  

ಬೆಂಗಳೂರು: ಯುಗಾದಿ ಹಬ್ಬ,ರಂಜಾನ್​ಗೆ ರಜೆಗೆ ಊರಿಗೆ ಹೊಟ್ಟಿರುವ ಪ್ರಯಾಣಿಕರಿಗೇ ಖಾಸಗಿ ಬಸ್​ನ ಮಾಲೀಕರು ಶಾಕ್​ ನೀಡಿದ್ದಾರೆ.

ಹೌದು, ಸಾಲು ಸಾಲು ರಜೆಗಳ ಹಿನ್ನಲೆಯಲ್ಲಿ  ಖಾಸಗಿ ಬಸ್ ಗಳ ಬೆಲೆ ಏರಿಕೆ ಹೆಚ್ಚಳವಾಗಿದ್ದು ಪ್ರಯಾಣಿಕರಿಗೆ ಆಘಾತ ತಂದಿದೆ.ಯುಗಾದಿ ರಜೆ ಒಂದು ದಿನ ಬಿಟ್ಟು ಗುರುವಾರ ರಂಜಾನ್ ರಜೆ ಇರುತ್ತೆ. ಅಲ್ಲದೆ 13 ರಂದು ಎರಡನೇ ಶನಿವಾರ ರಜೆ ಹಾಗೂ 14 ರಂದು ಬರೊಬ್ಬರಿ 5 ರಜೆಗಳು ಇವೆ. ಶೇ 20 ರಿಂದ 25 ರಷ್ಟು ದರ ಹೆಚ್ಚಳ ಟಿಕೆಟ್ ದರ ಖಾಸಗಿ ಬಸ್​ಗಳ ಮಾಲೀಕರು ದರ ಹೆಚ್ಚಳ ಮಾಡಿದೆ.

ಮನಸಿಗೆ ಬಂದಂತೆ ದರ ಏರಿಕೆ‌ ಮಾಡಿದ್ರು ಸಾರಿಗೆ ಇಲಾಖೆಯಿಂದ ಪದೇ ಪದೇ ಇದನ್ನು ನಿರ್ಲಕ್ಷ ಮಾಡುತ್ತಲೇ ಇದೆ.ಟಿಕೆಟ್ ಬುಕ್ಕಿಂಗ್ ವೆಬ್ ಸೈಟ್ ನಲ್ಲಿಯೂ ಮನಸ್ಸಿಗೆ ಬಂದಂತೆ ದರ ಏರಿಕೆ ಮಾಡಿವೆ.

ರಜೆ ಸಿಹಿ ರೇಟ್ ಕಹಿ: ದರ ಹೆಚ್ಚಳದ ವಿವರ ಇಲ್ಲಿದೆ

ಬೆಂಗಳೂರು-ಶಿವಮೊಗ್ಗ
ಸಾಮಾನ್ಯ ದಿನದ ದರ – ₹450-₹600

ಇವತ್ತಿನ ಟಿಕೆಟ್ ದರ ₹950- ₹1250

ಬೆಂಗಳೂರು- ಹುಬ್ಬಳಿ
ಸಾಮಾನ್ಯ ದರ, ₹600- ₹1000
ಇಂದಿನ ಟಿಕೆಟ್ ₹1200-₹1600

ಬೆಂಗಳೂರು-ಮಂಗಳೂರು
ಸಾಮಾನ್ಯ ದಿನದ ದರ ₹500- ₹1000
ಇಂದಿನ ದರ ₹1000- ₹1400

ಬೆಂಗಳೂರು-ಕಲಬುರುಗಿ
ಸಾಮಾನ್ಯ ದಿನದ ದರ ₹900- ₹1300
ಇಂದಿನ ದರ ₹1400-₹1900

ಬೆಂಗಳೂರು-ಮಡಿಕೇರಿ
ಸಾಮಾನ್ಯ ದಿನದ ದರ ₹500- ₹600
ಇಂದಿನ ದರ ₹950- ₹1200

ಬೆಂಗಳೂರು – ಉಡುಪಿ
ಸಾಮಾನ್ಯ ದಿನದ ದರ ₹600- ₹950
ಇಂದಿನ ದರ ₹1700-₹2200

ಬೆಂಗಳೂರು-ಧಾರವಾಡ
ಸಾಮಾನ್ಯ ದಿನದ ದರ ₹650 ₹800
ಇಂದಿನ ದರ ₹1350-₹1750

ಬೆಂಗಳೂರು-ಬೆಳಗಾವಿ
ಸಾಮಾನ್ಯ ದಿನದ ದರ ₹500 ₹800
ಇಂದಿನ ದರ ₹1300-₹1800

ಬೆಂಗಳೂರು – ದಾವಣಗೆರೆ
ಸಾಮಾನ್ಯ ದಿನದ ದರ ₹450 ₹600
ಇಂದಿನ ದರ ₹900-₹1300

ಬೆಂಗಳೂರು – ಚಿಕ್ಕಮಗಳೂರು
ಸಾಮಾನ್ಯ ದಿನದ ದರ ₹550 ₹600
ಇಂದಿನ ದರ ₹1100-₹1300

ಬೆಂಗಳೂರು – ಬೀದರ್
ಸಾಮಾನ್ಯ ದಿನದ ದರ ₹850 ₹1200
ಇಂದಿನ ದರ ₹1600-₹1800

ಬೆಂಗಳೂರು – ರಾಯಚೂರು
ಸಾಮಾನ್ಯ ದಿನದ ದರ ₹600 ₹900
ಇಂದಿನ ದರ. ₹1250-₹1600

 

RELATED ARTICLES

Related Articles

TRENDING ARTICLES