Tuesday, May 14, 2024

ಹಳೆ ಚಾಳಿ ಮುಂದುವರಿಸಿದ CSK : ಚೆನ್ನೈ ವಿರುದ್ಧ ಹೈದರಾಬಾದ್​ಗೆ ಭರ್ಜರಿ ಗೆಲುವು

ಬೆಂಗಳೂರು : ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೆ ತನ್ನ ಹಳೆ ಚಾಳಿ ಮುಂದುವರಿಸಿದೆ. ಕಳೆದ ಆವೃತ್ತಿಗಿಂತಲೂ ಉತ್ತಮ ತಂಡ ಹೊಂದಿದ್ದರೂ ಸತತ ಎರಡನೇ ಸೋಲು ದಾಖಲಿಸಿತು.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಆರಂಭದಿಂದಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ರಚಿನ್ ರವೀಂದ್ರ ಮತ್ತೆ ನಿರಾಸೆ ಮೂಡಿಸಿದರು. ಅಂಜಿಂಕ್ಯಾ ರಹಾನೆ ನಿಧಾನಗತಿಯ ಬ್ಯಾಟಿಂಗ್ ಹೈದರಾಬಾದ್​ಗೆ ವರದಾನವಾಯಿತು.

ಮೊಯಿನ್ ಅಲಿ ತಂಡದಲ್ಲಿದ್ದರೂ ರವೀಂದ್ರ ಜಡೇಜಾಗೆ ಬ್ಯಾಟಿಂಗ್​ನಲ್ಲಿ ಬಡ್ತಿ ನೀಡಿದ್ದು, ಚೆನ್ನೈ ರನ್​ ಗತಿಗೆ ಹಿನ್ನಡೆಯಾಯಿತು. ಮಿಚೆಲ್ ಸಹ ಉತ್ತಮ ಪ್ರದರ್ಶನ ನೀಡಲಿಲ್ಲ. ಕೊನೆಯಲ್ಲಿ ಬಂದ ಮಹೇಂದ್ರ ಸಿಂಗ್ ಧೋನಿ ಎರಡು ಬಾಲ್ ಎದುರಿಸಿ 1 ರನ್ ಸಿಡಿಸಿದರು. ಚೆನ್ನೈ ಪರ ಶಿವಂ ದುಬೆ ಮಾತ್ರ ಉತ್ತಮ ಆಟ ಪ್ರದರ್ಶಿಸಿದರು.

ಟ್ರಾವಿಸ್ ಹೆಡ್, ಮಾರ್ಕ್ರಾಮ್ ಅಬ್ಬರ

ಚೆನ್ನೈ ನೀಡಿದ 166 ರನ್​ಗಳ ಗುರಿಯನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ 18.1 ಓವರ್​ಗಳಲ್ಲಿ ಗೆಲುವಿನ ನಗೆ ಬೀರಿತು. SHR ಪರ ಟ್ರಾವಿಸ್ ಹೆಡ್ 31, ಅಭಿಷೇಕ್ ಶರ್ಮಾ 37, ಮಾರ್ಕ್ರಾಮ್ 50, ಶಹಬಾಜ್ ಅಹ್ಮದ್ 18 ರನ್ ಗಳಿಸಿದರು. ಚೆನ್ನೈ ಪರ ಮೊಯಿನ್ ಅಲಿ 2, ದೀಪಕ್ ಚಹಾರ್ ಹಾಗೂ ಮಹಿಶ್ ತೀಕ್ಷಣ ತಲಾ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES