Monday, May 13, 2024

ಈಗ.. ಗಂಡಸರೆಲ್ಲಾ ಕೆಳಗಡೆ, ಹೆಂಗಸ್ರೆಲ್ಲಾ ಮೇಲ್ಗಡೆ : ಡಿ.ಕೆ. ಶಿವಕುಮಾರ್

ಬೆಂಗಳೂರು : ಮಹಿಳಾ‌‌ ನಾಯಕಿಯರನ್ನ ವೇದಿಕೆ‌ ಮೇಲೆ‌ ತಂದಿದ್ದು ನಾನು. ಯಾರಾದರೂ ಮಹಿಳಾ ಅಧ್ಯಕ್ಷರನ್ನ ವೇದಿಕೆ‌ ಮೇಲೆ‌ ಕೂರಿಸಿದ್ರಾ..? ಈಗ ಗಂಡಸರೆಲ್ಲಾ ಕೆಳಗಡೆ, ಹೆಂಗಸರೆಲ್ಲಾ‌‌ ಮೇಲ್ಗಡೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರಿನ ಇಂದಿರಾ ಭವನದಲ್ಲಿ ನಡೆದ ಕಾಂಗ್ರೆಸ್ ಮಹಿಳಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ 33% ಮೀಸಲಾತಿ ಆಗುತ್ತೆ. ಮೀಸಲಾತಿಯನ್ನ ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಭರವಸೆ ನೀಡಿದರು.

ಮಹಿಳಾ ಸಂಘಟನೆ ಮಾಡುವುದು ಕಷ್ಟ ಅಲ್ಲ. ನಾನು ಹಲವಾರು ಬಾರಿ ಹೇಳಿದ್ದೇನೆ. ರಾಣಿ ಸತೀಶ್ ಅವರಿಗೆ ಸೇರಿದಂತೆ ಹಲವರಿಗೆ ಹೇಳಿದ್ದೇನೆ. ಮಹಿಳೆಯರು ಲೀಡರ್ ಗಳಿಂದ ದೂರ ಇಡುವ ಪ್ರಯತ್ನ ಮಾಡುತ್ತಾರೆ. ಈ ಹಿನ್ನಲೆ ಈ‌ ಸಂಘಟನೆಯಲ್ಲಿ ಕುಂಠಿತವಾಗುತ್ತಿದೆ. ಹೆಣ್ಣು ಕುಟುಂಬದ ಕಣ್ಣು ಎಂದು ನಾವು ತಿಳಿದುಕೊಂಡವರು. ಕೆಲವರು ಕ್ಯಾರೆಕ್ಟರ್ ಹಾಳು ಮಾಡುವ ಕೆಲಸ ಮಾಡ್ತಾರೆ. ನಿಮ್ಮ ಜೊತೆಯಲ್ಲಿ ಇದ್ದವರೇ ಮಾಡ್ತಾರೆ, ಎಲ್ಲರೂ ಅಂತ ನಾನು ಹೇಳಲ್ಲ ಎಂದು ಎಚ್ಚರಿಕೆ ನೀಡಿದರು.

ಲಾಯಲ್ ಆಗಿ ಇರಬೇಡಿ, ಪಕ್ಷಕ್ಕೆ ಲಾಯಲ್ ಆಗಿ ಇರಿ

ರಾಜ್ಯದ ಆರು ಮಹಿಳೆಯರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವಕಾಶ ಕೊಟ್ಟಿದ್ದೇವೆ. ಯಾವ ಪಕ್ಷ ಕೊಟ್ಟಿದೆ ನೀವು ಕೇಳಬೇಕು. ಎಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನನಗೆ ಲಾಯಲ್ ಆಗಿ ಇರಬೇಡಿ, ಪಕ್ಷಕ್ಕೆ ಲಾಯಲ್ ಆಗಿ ಇರಿ. ನಾನು ಯಾರು ಫಾಲೋವರ್​ಗಳಿಲ್ಲದೇ ಹಾಗೆಯೇ ಬೆಳೆದಿದ್ದೇನೆ ಎಂದು ಮಹಿಳಾ ಪದಾಧಿಕಾರಿಗಳನ್ನು ಡಿ.ಕೆ. ಶಿವಕುಮಾರ್ ಹುರಿದುಂಬಿಸಿದರು.

RELATED ARTICLES

Related Articles

TRENDING ARTICLES