Monday, May 20, 2024

ಕ್ರಿಕೆಟಿಗ ದೊಡ್ಡ ಗಣೇಶ ಬಿಜೆಪಿ ಸೇರ್ಪಡೆ

ಬೆಂಗಳೂರು: 90ರ ದಶಕದ ಕ್ರಿಕೆಟ್​ ಪ್ರೇಮಿಗಳು ಎಂದೂ ಮರೆಯದ ಭಾರತ ತಂಡದ ಮಾಜಿ ಆಟಗಾರ ಕಿಕೆಟಿಗ ದೊಡ್ಡ ಗಣೇಶ (ದೊಡ್ಡನರಸಯ್ಯ ಗಣೇಶ್)ಇವರು ಇಂದು ಸುಮಲತಾ ಜೊತೆ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಬಿಎಸ್​ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲಿ ಕ್ರಿಕೆಟಿಗ ದೊಡ್ಡ ಗಣೇಶ ಮತ್ತು ಕೊಪ್ಪಳ ಮಾಜಿ ಸಂಸದ ಶಿವರಾಮಗೌಡ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಪಕ್ಷ ಸೇರಿದ್ದರು.

ಕಿಕೆಟಿಗ ದೊಡ್ಡ ಗಣೇಶ ಕರ್ನಾಟಕ ರಣಜಿ ತಂಡದ ಪರವಾಗಿ ಮತ್ತು ಭಾರತ ತಂಡದ ಪರವಾಗಿ 1997 ರಲ್ಲಿ 4 ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಅವರು ಬೌಲರ್ ಮತ್ತು ಬ್ಯಾಟ್ಸ್‌ಮನ್ ಆಗಿದ್ದರು. ಇದೀಗ ಇವರು ಬಿಜೆಪಿಗೆ ಸೇರುವ ಮೂಲಕ ರಾಜಕೀಯ ಕ್ಷೇತ್ರದಲ್ಲೂ ಕಾಲಿಟ್ಟಿದ್ದಾರೆ.

RELATED ARTICLES

Related Articles

TRENDING ARTICLES