Monday, May 20, 2024

ಕ್ಲರ್ಕ್​ ಹುದ್ದೆಗೆ ನಕಲಿ ಅಭ್ಯರ್ಥಿಗಳಿಂದ ಪರೀಕ್ಷೆ ಬರೆಸಿದ್ದ ಅಸಲಿ ಅಭ್ಯರ್ಥಿಗಳು ಅರೆಸ್ಟ್

ಬೆಂಗಳೂರು : ರಾಷ್ಟ್ರೀಯ ಮಿಲಿಟರಿ ಶಾಲೆ ಪರೀಕ್ಷೆಗೆ ನಕಲಿ ವ್ಯಕ್ತಿಗಳಿಂದ ಪರೀಕ್ಷೆ ಬರೆಸಿದ್ದ ಅಸಲಿ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಅಶೋಕ ನಗರದಲ್ಲಿ ನಡೆದಿದೆ.

ಹರಿಯಾಣ ಮೂಲದ ಅತೀಶ್​ (20) ಮತ್ತು ಅಜಯ್​ ಕುಮಾರ್​ (19) ಬಂಧಿತ ಆರೋಪಿಗಳು, ರಾಷ್ಟ್ರೀಯ ಮಿಲಿಟರಿ ಸ್ಕೂಲ್​ನ ಕ್ಲರ್ಕ್​ ಹುದ್ದೆಗಳಿಗೆ ಅಧಿಸೂಚೆನೆಯನ್ನು ಹೊರಡಿಸಲಾಗಿತ್ತು, ಇದಕ್ಕೆ ಸಂಬಂಧಿಸಿಂತೆ ಮಾರ್ಚ್​ 24 ರಂದು ಲಿಖಿತ ಪರೀಕ್ಷೆ ನಡೆದಿತ್ತು, ಈ ಪರೀಕ್ಷೆಗೆ ನಕಲಿ ಅಭ್ಯರ್ಥಿಗಳಿಂದ ಪರೀಕ್ಷೆ ಬರೆಸಲಾಗಿತ್ತು, ಬಳಿಕ, ಮಾರ್ಚ್​ 30 ರಂದು ನಡೆದ ಸ್ಕಿಲ್​ ಪರೀಕ್ಷೆಗೆ ಖುದ್ದು ಅಸಲಿ ಅಭ್ಯರ್ಥಿಗಳೆ ಹಾಕರಾಗಿದ್ದರು.

ಇನ್ನು, ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಂದ ಫಿಂಗರ್​ ಪ್ರಿಂಟ್​ ಪಡೆಯಲಾಗಿತ್ತು, ಈ ವೇಳೆ ಫಿಂಗರ್​ ಪ್ರಿಂಟ್​ ಮ್ಯಾಚ್​ ಆಗದ ಹಿನ್ನೆಲೆ ಅಭ್ಯರ್ಥಿಗಳನ್ನು ವಿಚಾರಣೆಗೊಳಪಡಿಸಿದ ಬಳಿಕ ಅಸಲಿ ವಿಷಯ ಬೆಳಕಿಗೆ ಬಂದಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿ ನಗರದ ಅಶೋಕ್​ ನಗರ ಪೊಲೀಸ್ ಠಾಣೆಗೆ ಮಿಲಿಟರಿ ಶಾಲೆ ಆಡಳಿತ ವಿಭಾಗದ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.

ದೂರು ಪಡೆದ ಪೊಲೀಸರು ಅಸಲಿ ಅಭ್ಯರ್ಥಿಗಳನ್ನು ಬಂಧಿಸಿದ್ದ ಪರೀಕ್ಷೆಗೆ ಹಾಜರಾಗಿದ್ದ ನಕಲಿ ಅಭ್ಯರ್ಥಿಗಳ ಹುಡುಕಾಟಕ್ಕೆ ಜಾಲ ಬೀಸಿದ್ದಾರೆ.

RELATED ARTICLES

Related Articles

TRENDING ARTICLES