Sunday, May 19, 2024

Hassan Lok Sabha Election Survey 2024 : ಹಾಸನದಲ್ಲಿ ಯಾರಿಗೆ ಜಯ? ಯಾರಿಗೆ ಸೋಲು?

ಲೋಕಸಭಾ ಚುನಾವಣೆ ಹಿನ್ನೆಲೆ ನಿಮ್ಮ ಪವರ್ ಟಿವಿ ರಾಜ್ಯದ 28 ಕ್ಷೇತ್ರಗಳಲ್ಲಿನ ಜನರಿಗಾಗಿ ಅವರ ನೆಚ್ಚಿನ ಪಕ್ಷ ಅಥವ ಅಭ್ಯರ್ಥಿಯ ಪರ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಲು ಕಾಲ್ ಮಾಡಿ ಓಟ್​ ಮಾಡಿ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಸಮೀಕ್ಷೆಯನ್ನು ನಡೆಸುತ್ತಿದ್ದು ಈ ಕಾರ್ಯಕ್ರಮಕ್ಕೆ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹಾಸನ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಹಮ್ಮಿಕೊಳ್ಳಲಾಗಿದ್ದ ‘ಕಾಲ್​ ಮಾಡಿ ಓಟ್ ಮಾಡಿ’ ಕಾರ್ಯಕ್ರಮದಲ್ಲಿ ಬೆಳಗ್ಗೆ 9.30 ರಿಂದ  ಮಧ್ಯಾಹ್ನ 1.30ರ ವರೆಗೆ ನಡೆದ ಸಮೀಕ್ಷೆಯಲ್ಲಿ ಸಾವಿರಾರು ಕರೆಗಳನ್ನು ಮಾಡುವ ಮೂಲಕ ಮತದಾರರು ಪಾಲ್ಗೊಂಡರು.

ಕ್ಷೇತ್ರ ಪರಿಚಯ

ಲೋಕಸಭಾ ಕ್ಷೇತ್ರ: ಹಾಸನ

ಹಾಲಿ ಸಂಸದ: ಪ್ರಜ್ವಲ್ ರೇವಣ್ಣ

=======================

2024 ರ ಹಾಸನ ಲೋಕಸಭಾ ಅಭ್ಯರ್ಥಿಗಳು:

ಜೆಡಿಎಸ್​ ಅಭ್ಯರ್ಥಿ : ಪ್ರಜ್ವಲ್ ರೇವಣ್ಣ

ಕಾಂಗ್ರೆಸ್ ಅಭ್ಯರ್ಥಿ : ಶ್ರೇಯಸ್​ ಪಟೇಲ್​

 2019 ಬಲಾಬಲ

ಪ್ರಜ್ವಲ್ ರೇವಣ್ಣ : ಜೆಡಿಎಸ್ : 6,76,606 : ಶೇ. 52.91

ಎ. ಮಂಜು  : ಬಿಜೆಪಿ : 5,35,382 :  ಶೇ. 41.87

ವಿನೋದ್ರಾಜ್ : ಬಿಎಸ್ಪಿ : 38,761 : ಶೇ. 03.03

ಚಲಾವಣೆಯಾದ ಒಟ್ಟು ಮತಗಳು : 12,78,653 :  ಶೇ. 77.35

ಗೆಲುವಿನ ಅಂತರ  :  1,41,224 : ಶೇ. 11.04

ಮತದಾರರ ವಿವರ :

ಪುರುಷರು          :             8,58,661

ಮಹಿಳೆಯರು    :               8,66,206

ಒಟ್ಟು ಮತದಾರರ ಸಂಖ್ಯೆ  :  17,24,908

(ತೃತೀಯ ಲಿಂಗಿಗಳು : 41)

 

ಜಾತಿವಾರು ಲೆಕ್ಕಾಚಾರ :

ಒಕ್ಕಲಿಗರು   : 5,46,000

ಲಿಂಗಾಯುತರು : 2,86,000

ಎಸ್ಸಿ ಎಸ್ಟಿ    : 3,25,000

ಮುಸ್ಲಿಂ        : 1,16,000

ಕುರುಬರು    : 1,65,000

ಇತರರು        : 2,63,100

ಜೆಡಿಎಸ್ ಪ್ಲಸ್ :

ದೇವೇಗೌಡರ ಕುಟುಂಬಕ್ಕೆ ಇರುವ ವರ್ಚಸ್ಸು, ಪ್ರಜ್ವಲ್ ಪ್ರಭಾವ

ಹಾಸನ ಕ್ಷೇತ್ರದಲ್ಲಿ ಜೆಡಿಎಸ್​ಗೆ ತಳಮಟ್ಟದಿಂದ ಕಾರ್ಯಕರ್ತರ ಪಡೆ

ಜೆಡಿಎಸ್ ಜೊತೆ ಈ ಬಾರಿ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದು

ದೇವೇಗೌಡರ ಬಗ್ಗೆ ಪ್ರಧಾನಿ ಮೋದಿ ಸಹ ಗೌರವ ತೋರಿರುವುದು

 ಜೆಡಿಎಸ್ ಮೈನಸ್ :

ಸಂಸದ ಪ್ರಜ್ವಲ್ ಮತ್ತು ತಾಯಿ ಭವಾನಿ ಮೇಲಿನ ಆರೋಪಗಳು

ಗೌಡರ ಕುಟುಂಬ ರಾಜಕಾರಣದ ಬಗ್ಗೆ ಜನರಲ್ಲಿ ಇರುವ ಆಕ್ರೋಶ

ಬಿಜೆಪಿ, ಜೆಡಿಎಸ್ ಮೈತ್ರಿಯಿಂದ ಸ್ಥಳೀಯ ಕಾರ್ಯಕರ್ತರಲ್ಲಿ ಗೊಂದಲ

ಪ್ರೀತಂ ಗೌಡ ಸೇರಿ ಸ್ಥಳೀಯ ಮೈತ್ರಿ ಮುಖಂಡರ ಮಧ್ಯೆ ಇರುವ ವೈಷಮ್ಯ

ಕಾಂಗ್ರೆಸ್ ಪ್ಲಸ್ :

ಕಾಂಗ್ರೆಸ್​ ಅಭ್ಯರ್ಥಿ ಶ್ರೇಯಸ್​ ಪಟೇಲ್​​ ಬಗ್ಗೆ ಇರುವ ಅನುಕಂಪ

ಪಕ್ಷದ ಕಾರ್ಯಕರ್ತರಲ್ಲಿ ಗೆಲ್ಲಬೇಕೆಂಬ ಹೋರಾಟದ ಮನೋಭಾವ

ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಪ್ರಚಾರದಿಂದ 3 ಕ್ಷೇತ್ರ ಗೆಲುವು

ಜೆಡಿಎಸ್, ಬಿಜೆಪಿ ಮುಖಂಡರ ಮಧ್ಯೆ ವೈಷಮ್ಯದಿಂದ ಲಾಭ ಸಾಧ್ಯತೆ

ಗ್ಯಾರಂಟಿ ಯೋಜನೆಗಳ ಜಾರಿಯಿಂದ ಜನರಲ್ಲಿ ಇರುವ ವಿಶ್ವಾಸ

ಕಾಂಗ್ರೆಸ್ ಮೈನಸ್ 

ಜೆಡಿಎಸ್ ಜೊತೆಗೆ ಮೋದಿ ಅಲೆಯ ಬಲ ಕೂಡ ಇರುವುದು

ದೇವೇಗೌಡರ ಬಗ್ಗೆ ಜನರಲ್ಲಿ ಇರುವ ಭಾವನಾತ್ಮಕ ಪ್ರೀತಿ

ಗ್ಯಾರಂಟಿ ಜಾರಿಯ ಗುಂಗಿನಲ್ಲಿ ಅಭಿವೃದ್ಧಿ ಕಾಮಗಾರಿ ಕಡೆಗಣನೆ

ಪವರ್ ಟಿವಿ ಸರ್ವೆ ರಿಸಲ್ಟ್​​ :

ಹಾಸನ ಲೋಕಸಭಾ ಕ್ಷೇತ್ರದಿಂದ ಕಾಲ್ ಮಾಡಿ ವೋಟ್ ಮಾಡಿ ಸಮೀಕ್ಷೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಹಾಸನದಲ್ಲಿ ಯಾವ ಪಕ್ಷಕ್ಕೆ ಹೆಚ್ಚು ವೋಟ್ ಬಿದ್ದಿದೆ? ಈ ಬಾರಿ ಜೆಡಿಎಸ್ ಓಟಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್​? ಹಾಸನ ಕ್ಷೇತ್ರ ಉಳಿಸಿಕೊಳ್ಳುತ್ತಾರಾ ಪ್ರಜ್ವಲ್ ರೇವಣ್ಣ? ಗೆಲುವಿನ ಪತಾಕೆ ಹಾರಿಸುತ್ತಾರಾ ಶ್ರೇಯಸ್ ಪಟೇಲ್​​? ಇವೆಲ್ಲದಕ್ಕು ಉತ್ತರ ಇಲ್ಲಿದೆ.

ಹಾಸನ ಅಸೆಂಬ್ಲಿ ಕ್ಷೇತ್ರದಿಂದ ಒಟ್ಟು ಕರೆಗಳು – 9083

ಪುರುಷ ಮತದಾರರಿಂದ 8500,  ಮಹಿಳಾ ಮತದಾರರಿಂದ 583 ಕರೆಗಳು

ಜೆಡಿಎಸ್ ಅಭ್ಯರ್ಥಿಗೆ ಮತಗಳು – 4432, ಕಾಂಗ್ರೆಸ್ ಅಭ್ಯರ್ಥಿಗೆ ವೋಟ್ಸ್​ – 4651

ಹಾಸನ ಕ್ಷೇತ್ರದಿಂದ ಇತರರಿಗೆ ಬಂದ ಮತಗಳು – 0

ಜೆಡಿಎಸ್​​ಗೆ ಬಂದ ಶೇಕಡಾವಾರು ಮತಗಳು – 49%

ಕಾಂಗ್ರೆಸ್ ಪಕ್ಷಕ್ಕೆ ಬಂದ ಶೇಕಡಾವಾರು ಮತಗಳು – 51%

ಇತರರಿಗೆ ಬಂದ ಶೇಕಡಾವಾರು ಮತಗಳು – 0

ಜೆಡಿಎಸ್ ವಿರುದ್ಧ ಕಾಂಗ್ರೆಸ್​​​​ಗೆ 219 ಮತಗಳ ಮುನ್ನಡೆ

ಸದ್ಯದ ಟ್ರೆಂಡ್​ :

ಹಾಸನ ಲೋಕಸಭಾ ಫೈಟ್​ನಲ್ಲಿ ಸಮಬಲದ ಹೋರಾಟ

ಜೆಡಿಎಸ್​​-ಕಾಂಗ್ರೆಸ್​ ಹಣಾಹಣಿಯಲ್ಲಿ ಕಾಂಗ್ರೆಸ್​ಗೆ ಅಲ್ಪ ಮುನ್ನಡೆ

ಪ್ರಜ್ವಲ್​ ರೇವಣ್ಣಗೆ ಶಾಕ್ ಕೊಡ್ತಾರಾ ಕಾಂಗ್ರೆಸ್​ನ ಶ್ರೇಯಸ್ ಪಟೇಲ್?

ಯಾರೇ ಗೆದ್ರೂ ಫೋಟೋ ಫಿನಿಶ್ ಫಲಿತಾಂಶದ ಸಾಧ್ಯತೆ

ಇದು ಪವರ್ ಟಿವಿ ಸರ್ವೆಯಲ್ಲಿ ಮತದಾರರು ನೀಡಿರುವ ಸಂದೇಶ

 

 

RELATED ARTICLES

Related Articles

TRENDING ARTICLES