Sunday, May 19, 2024

ಡಿಕೆಸು ಎದುರಾಳಿ 98 ಕೋಟಿ ಒಡೆಯ : ಡಾಕ್ಟ್ರು ಬಳಿ ಇರುವ ಒಟ್ಟು ಚರಾಸ್ತಿ ಹಾಗೂ ಸ್ಥಿರಾಸ್ತಿ ಎಷ್ಟು ಗೊತ್ತಾ?

ಬೆಂಗಳೂರು ಗ್ರಾಮಾಂತರ : ಡಿಕೆಸು ಎದುರಾಳಿ ಡಾಕ್ಟ್ರು ಆಸ್ತಿ ಮೌಲ್ಯದಲ್ಲಿ ಹಿಂದೆ ಬಿದ್ದಿಲ್ಲ. ಡಾಕ್ಟ್ರು ಬರೋಬ್ಬರಿ 98 ಕೋಟಿ ಒಡೆಯ. ಇವರು 3.74 ಕೋಟಿ ಸಾಲಗಾರ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅಫಿಡೆವಿಟ್​​ನಲ್ಲಿ ತಮ್ಮ ಒಟ್ಟು ಆಸ್ತಿ ಮೌಲ್ಯವನ್ನು ಘೋಷಿಸಿಕೊಂಡಿದ್ದಾರೆ.

ಡಾ. ಮಂಜುನಾಥ್​​ ಅವರ ಒಟ್ಟು ಆಸ್ತಿ ಮೌಲ್ಯ 98.36 ಕೋಟಿ ರೂ. ಇವರ ಬಳಿ 6.98 ಕೋಟಿ ಚರಾಸ್ತಿ ಹಾಗೂ 36.65 ಕೋಟಿ ಸ್ಥಿರಾಸ್ತಿ ಇದೆ. ಡಾಕ್ಟರ್ ಹೆಸರಲ್ಲಿ 55 ಲಕ್ಷ ಮೌಲ್ಯದ ಎರಡು ಕಾರುಗಳಿವೆ. ಇನ್ನು 3.74 ಕೋಟಿ ರೂ. ಸಾಲ ಮಾಡಿದ್ದಾರೆ.

ಪತ್ನಿ ಹೆಸರಲ್ಲಿ 35 ಕೋಟಿ ಸ್ಥಿರಾಸ್ತಿ

ಮಂಜುನಾಥ್ ಅವರ ಪತ್ನಿ ಅನುಸೂಯ ಹೆಸರಲ್ಲಿ 17.36 ಕೋಟಿ ಚರಾಸ್ತಿ ಹಾಗೂ 35.30 ಕೋಟಿ ಸ್ಥಿರಾಸ್ತಿ ಇದೆ. ಪತ್ನಿ ಬಳಿ 13 ಲಕ್ಷ ಬೆಲೆ ಬಾಳುವ ಒಂದು ಕಾರು ಸಹ ಇದೆ. ಗಂಡನಂತೆಯೇ ಅನುಸೂಯ ಒಟ್ಟು 11 ಲಕ್ಷ ಸಾಲ ಮಾಡಿಕೊಂಡಿದ್ದಾರೆ. ಇನ್ನು ಡಾ. ಮಂಜುನಾಥ್ 4 ಕೋಟಿ ಮೌಲ್ಯದ ಒಟ್ಟು 6.79 ಕೆ.ಜಿ ತೂಕದ ಚಿನ್ನ ಹೊಂದಿದ್ದಾರೆ. ಡಾಕ್ಟರ್ ಅವಿಭಕ್ತ ಕುಟುಂಬದ ಹೆಸರಲ್ಲಿ 75 ಲಕ್ಷ ಮೌಲ್ಯದ ಚರಾಸ್ತಿ, 1.32 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.

ಎರಡೂ ಪಕ್ಷದ ಹೃದಯ ಒಂದಾಗಿದೆ

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿರುವ ಡಾ. ಮಂಜುನಾಥ್ ಅವರು, ಕಾರ್ಯಕರ್ತರ ಉತ್ಸಾಹ ನೋಡಿದ್ರೆ ಗೆಲುವು ಖಚಿತ ಅನ್ನಿಸುತ್ತಿದೆ. ಗೃಹ ಸಚಿವ ಅಮಿತ್ ಶಾ ಕೂಡಾ ಆಗಮಿಸಿ ನನ್ನ ಪರ ರೋಡ್ ಶೋ ಮಾಡಿದ್ದಾರೆ. ನಮ್ಮ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ. ಎರಡೂ ಪಕ್ಷದ ಕಾರ್ಯಕರ್ತರ ಹೃದಯ ಒಂದಾಗಿದೆ. ಯಾವುದೇ ತಂತ್ರ, ಕುತಂತ್ರಕ್ಕೆ ಜನ ಮಣೆಹಾಕಲ್ಲ. ಜನ ಬುದ್ಧಿವಂತರಿದ್ದಾರೆ, ಆಮಿಷಗಳಿಗೆ ಬಲಿಯಾಗದೇ ನನ್ನನ್ನ ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES