Friday, May 17, 2024

ಶೋಭಕ್ಕ 16 ಕೋಟಿ ಒಡತಿ, 4 ಕೋಟಿ ‘ಸಾಲಗಾರ್ತಿ’, 4 ಪ್ರಕರಣದಲ್ಲಿ ಆರೋಪಿ! : ಒಟ್ಟು ಆಸ್ತಿ ಎಷ್ಟು ಗೊತ್ತಾ?

ಬೆಂಗಳೂರು : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬರೋಬ್ಬರಿ 16 ಕೋಟಿ ಒಡತಿ. ಆದರೆ, 4 ಕೋಟಿ ರೂ. ಸಾಲಗಾರ್ತಿ. 4 ಪ್ರಕರಣದಲ್ಲಿ ಆರೋಪಿ!

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಇಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ತಮ್ಮ ಬಳಿ 16.02 ಕೋಟಿ ರೂ. ಮೌಲ್ಯದ ಆಸ್ತಿ ಇರುವುದಾಗಿ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.

ಶೋಭಾ ಕರಂದ್ಲಾಜೆ ಆಸ್ತಿಯಲ್ಲಿ ಒಟ್ಟು ಚರಾಸ್ತಿ 9,23,66,909 ರೂ. ಹಾಗೂ ಒಟ್ಟು ಸ್ಥಿರಾಸ್ತಿ ಮೌಲ್ಯ 6,78,97,000 ರೂ. ಇದೆ. ಒಟ್ಟು 16.02 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ನನ್ನ ಬಳಿ 1 ಕೆಜಿ ಚಿನ್ನದ ಬಿಸ್ಕೆಟ್ ಇದೆ

ಶೋಭಾ ಕರಂದ್ಲಾಜೆ ಅವರ ಬಳಿ ಬರೋಬ್ಬರಿ 1 ಕಿಲೋನ ಚಿನ್ನದ ಬಿಸ್ಕೆಟ್ ಇದೆ. ಇದರ ಮೌಲ್ಯ 68.40 ಲಕ್ಷ ರೂ. ಇನ್ನೂ, 650‌ ಗ್ರಾಂ ಚಿನ್ನದ ಆಭರಣಗಳಿವೆ. 1620 ಗ್ರಾಂ ಬೆಳ್ಳಿ ಆಭರಣ ‌ಹಾಗೂ ಬೆಳ್ಳಿ ವಸ್ತುಗಳನ್ನು ಹೊಂದಿದ್ದಾರೆ.

ನಾನು 4 ಕೋಟಿ ರೂ. ಸಾಲಗಾರ್ತಿ!

ಶೋಭಾ ಕರಂದ್ಲಾಜೆ ಅವರು 4 ಕೋಟಿ ರೂ. ಸಾಲ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ 4.06 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಸದ್ಯ ಅವರ ಬಳಿ 1,71,000 ರೂ. ನಗದು ಇದೆ.

ನಾನು 4 ಪ್ರಕರಣದಲ್ಲಿ ಆರೋಪಿ!

ಶೋಭಾ ಕರಂದ್ಲಾಜೆ ವಿರುದ್ಧ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಎರಡು ಕ್ರಿಮಿನಲ್ ಪ್ರಕರಣ ಆಗಿದ್ದರೆ, 1 ಮಾನನಷ್ಟ ಮೊಕದ್ದಮೆ ದಾಖಲಾಗಿದೆ.

RELATED ARTICLES

Related Articles

TRENDING ARTICLES