Monday, May 20, 2024

ಅಬ್ಬಬ್ಬಾ ! ಕುಮಾರಸ್ವಾಮಿ ಎದುರಾಳಿ ಸ್ಟಾರ್‌ ಚಂದ್ರು ಆಸ್ತಿ ಬರೋಬ್ಬರಿ ₹600 ಕೋಟಿ ಒಡೆಯ

ಬೆಂಗಳೂರು: ಹೆಚ್​.ಡಿ ಕುಮಾರಸ್ವಾಮಿ ಎದುರಾಳಿ,ಮಂಡ್ಯ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು ಬರೋಬ್ಬರಿ 600 ಕೋಟಿ ರೂ.ಗೂ ಅಧಿಕ ಆಸ್ತಿ ಘೋಷಿಸಿದ್ದಾರೆ. 

2022-23ರಲ್ಲಿ ಬರೋಬ್ಬರಿ 16.28 ಕೋಟಿ ರೂ. ವಾರ್ಷಿಕ ಆದಾಯ ಗಳಿಸಿರುವುದಾಗಿ ಸ್ಟಾರ್​ ಚಂದ್ರು  ತಿಳಿಸಿದ್ದಾರೆ. ಇದೇ ವೇಳೆ ತಮ್ಮ ಪತ್ನಿ ಕುಸುಮ ಕೃಷ್ಣೇಗೌಡ ಆದಾಯ 38.45 ಕೋಟಿ ರೂ. ಇದ್ದುದಾಗಿ ಹೇಳಿದ್ದಾರೆ. ಇನ್ನು ಅವಿಭಜಿತ ಕುಟುಂಬದ ಆದಾಯ 36.11 ಕೋಟಿ ರೂ. ಎಂದು ತಿಳಿಸಿದ್ದಾರೆ.
ಬೆಂಗಳೂರು ಮಹಾಲಕ್ಷ್ಮೀಪುರಂ ನಿವಾಸಿಯಾಗಿದ್ದಾರೆ.

212.77 ಕೋಟಿ ಚರಾಸ್ತಿ

ಕೈಯಲ್ಲಿ 1.8 ಲಕ್ಷ ರೂ., ಪತ್ನಿ ಕೈಯಲ್ಲಿ 1.9 ಲಕ್ಷ ರೂ. ಹಣವಿದೆ. ಅವರ ಬಳಿ 29.94 ಕೋಟಿ ರೂ. ಚರಾಸ್ತಿ ಇದ್ದರೆ, ಪತ್ನಿ ಬಳಿ ಬರೋಬ್ಬರಿ 182.33 ಕೋಟಿ ರೂ. ಮೊತ್ತದ ಚರಾಸ್ತಿ ಇದೆ. ಕುಟುಂಬದ ಹೆಸರಲ್ಲಿ 50.45 ಲಕ್ಷ ರೂ. ಮೌಲ್ಯದ ಆಸ್ತಿಯೂ ಇದೆ.

ಪತ್ನಿ ಕುಸುಮಾ ಅವರು ಸ್ಟಾರ್ ಇನ್ಫ್ರಾಟೆಕ್‌ ಮೇಲೆ ಮಾಡಿರುವ ಬರೋಬ್ಬರಿ 176.44 ಕೋಟಿ ರೂ. ಹಣವೂ ಸೇರಿದೆ. ಪತ್ನಿ ಬಳಿಯಲ್ಲಿ 4.2 ಕೆಜಿ ಚಿನ್ನ, 25.6 ಕೆಜಿ ಬೆಳ್ಳಿಯೂ ಇದೆ.

ಸ್ಟಾರ್‌ ಚಂದ್ರು ಬಳಿ ಕಾರಿಲ್ಲ

ಸ್ಟಾರ್‌ ಚಂದ್ರು ಇಷ್ಟೊಂದು ಶ್ರೀಮಂತರಾದರೂ ಅವರ ಬಳಿಯಲ್ಲಿ ಯಾವುದೇ ಕಾರುಗಳಿಲ್ಲ. ಮೂರು ಟ್ರ್ಯಾಕ್ಟರ್‌ಗಳನ್ನು ಮಾತ್ರ ಅವರು ಹೊಂದಿದ್ದಾರೆ.

96 ಭೂಮಿ, 9 ಮನೆ, 410.18 ಕೋಟಿ ರೂ. ಸ್ಥಿರಾಸ್ತಿ

ವೆಂಕಟರಮಣೇಗೌಡ ಅವರ ಬಳಿ ಬರೋಬ್ಬರಿ 237.11 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಅವರ ಪತ್ನಿ ಬಳಿ 146.99 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಇನ್ನು ಕುಟುಂಬದ ಹೆಸರಲ್ಲೂ 26.08 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇರುವುದಾಗಿ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಸ್ಥಿರಾಸ್ತಿಯಲ್ಲಿ ಅವರ ಪತ್ನಿ ಹೆಸರಲ್ಲಿ 5 ಕೃಷಿ ಜಮೀನು, ಹಿಂದೂ ಅವಿಭಜಿತ ಕುಟುಂಬದ ಹೆಸರಲ್ಲಿ 49 ಕೃಷಿ ಜಮೀನು, ಸ್ಟಾರ್‌ ಚಂದ್ರು ಹೆಸರಲ್ಲಿ 13 ಕೃಷಿಯೇತರ ಭೂಮಿ ಇದೆ. ಇದರಲ್ಲಿ ವೆಂಕಟರಮಣೇಗೌಡರ ಹೆಸರಲ್ಲಿರುವ ಕೃಷಿಯೇತರ ಜಮೀನಿನ ಮೌಲ್ಯ 99.36 ಕೋಟಿ ರೂ. ಆಗಿದೆ. ಅವರ ಪತ್ನಿ ಕುಸುಮ ಹೆಸರಲ್ಲಿ 29 ಕೃಷಿಯೇತರ ಜಮೀನುಗಳಿದ್ದು, ಇದರ ಮೌಲ್ಯ 90.29 ಕೋಟಿ ರೂ. ಆಗಿದೆ.

ಪತಿ-ಪತ್ನಿ ಹೆಸರಲ್ಲಿ 9 ಮನೆಗಳು

ಇನ್ನು ತಮ್ಮ ಹೆಸರಲ್ಲಿ 80.72 ಕೋಟಿ ರೂ. ಮೌಲ್ಯದ 5 ವಾಣಿಜ್ಯ ಸಂಕೀರ್ಣ, ಪತ್ನಿ ಹೆಸರಲ್ಲಿ 36.39 ಕೋಟಿ ರೂ. ಮೌಲ್ಯದ 3 ವಾಣಿಜ್ಯ ಸಂಕೀರ್ಣ, ಪತಿ-ಪತ್ನಿ ಹೆಸರಲ್ಲಿ 9 ಮನೆಗಳಿವೆ.

15.66 ಕೋಟಿ ರೂ. ಸಾಲ

15.66 ಕೋಟಿ ರೂ. ಸಾಲವನ್ನೂ ಸ್ಟಾರ್‌ ಚಂದ್ರು ಹೊಂದಿದ್ದಾರೆ. ಪತ್ನಿ 2.21 ಕೋಟಿ ರೂ. ಸಾಲಗಾರರಾಗಿದ್ದಾರೆ. ಇದರಲ್ಲಿ ವಿವಿಧ ಸಂಸ್ಥೆಗಳಿಂದ ಪಡೆದ ಮುಂಗಡವೂ ಸೇರಿದೆ. 4.46 ಲಕ್ಷ ರೂ. ಆದಾಯ ತೆರಿಗೆಗೆ ಸಂಬಂಧಿಸಿದಂತೆ ವಿವಾದವಿದೆ ಎಂದೂ ಅಫಿಡವಿಟ್‌ನಲ್ಲಿ ಅವರು ತಿಳಿಸಿದ್ದಾರೆ.

ವೆಂಕಟರಮಣೇಗೌಡ ಬಿಎಸ್‌ಸಿ ಪದವೀಧರರಾಗಿದ್ದು, ಉದ್ಯಮ ಮತ್ತು ಸಾಮಾಜಿಕ ಚಟುವಟಿಕೆಗಳು ತಮ್ಮ ಉದ್ಯೋಗ ಎಂದು ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ. ಇವರ ಮೇಲೆ ಯಾವುದೇ ಕ್ರಿಮಿನಲ್‌ ಪ್ರಕರಣಗಳಿಲ್ಲ  ಪತ್ನಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಪತಿ-ಪತ್ನಿಯ ಆದಾಯದ ಮೂಲ ಉದ್ಯಮ, ಬಾಡಿಗೆ ಹಾಗೂ ಬಡ್ಡಿ ಆದಾಯ.

RELATED ARTICLES

Related Articles

TRENDING ARTICLES