Monday, May 20, 2024

ಪ್ರಜ್ವಲ ರೇವಣ್ಣ ಎದುರಾಳಿ ಶ್ರೇಯಸ್ ಪಟೇಲ್‌ 41 ಕೋಟಿ ಒಡೆಯ

ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಶ್ರೇಯಸ್​ ಪಟೇಲ್​ ಇಂದು ನಾಮಪತ್ರ ಸಲ್ಲಿಸಿದ್ದಾರೆ.ಈ ವೇಳೆ ಅವರು 41 ಕೋಟಿ ಆಸ್ತಿಯನ್ನು ಘೋಷಣೆ ಮಾಡಿದ್ದಾರೆ. 

ಹೌದು, ಇವರ ಬಳಿ ಕೈಯಲ್ಲಿ 1.25 ಲಕ್ಷ ನಗದು ಹೊಂದಿದ್ದಾರೆ.ಪತ್ನಿ ಅಕ್ಷತಾ ಹೆಸರಿನಲ್ಲೂ ಕೋಟಿ ಬೆಲೆಬಾಳೋ ಸ್ಥಿರ ಚರಾಸ್ಥಿ ಹಾಗೂ 3.94 ಲಕ್ಷ ನಗದು ಇದೆ.

ವಿವಿದ ಬ್ಯಾಂಕ್ ನಲ್ಲಿ 6.23 ಲಕ್ಷ ಠೇವಣಿ ಹೊಂದಿರುವ ಇವರು, ಸ್ನೇಹಿತರು ಹಾಗೂ ಬಂಧುಗಳಿಂದ 50 ಲಕ್ಷ ಸಾಲ ತಾಯಿಯಿಂದ 3.64 ಲಕ್ಷ ಹಾಗು ವ್ಯಕ್ತಿಯೊಬ್ಬರಿಂದ 88 ಲಕ್ಚ ಸಾಲ‌ವನ್ನು ಇವರ ಪತ್ನಿ ಪಡೆದಿದ್ದಾರೆ.

ಪತ್ನಿಗಿಂತ ಹೆಚ್ಚು ಚಿನ್ನಾಭರಣ ಹೊಂದಿರೊ ಶ್ರೇಯಸ್ ಪಟೇಲ್

ಶ್ರೇಯಸ್ ಬಳಿ ಇದೆ 59 ಲಕ್ಷದ 65 ಸಾವಿರ ಬೆಲೆ ಬಾಳೋ ಚಿನ್ನಾಭರಣ.ಪತ್ನಿ ಬಳಿ 22 ಲಕ್ಷ ಬೆಲೆ ಬಾಳೊ 450 ಗ್ರಾಮ್ ಚಿನ್ನಾಭರಣ ಹಾಗು 1 kg ಬೆಳ್ಳಿ ಇದೆ.

ಚರಾಸ್ಥಿ

ಒಟ್ಟು 1ಕೋಟಿ 40 ಲಕ್ಷದ 96 ಸಾವಿರದ 246 ರೂ ಮೌಲ್ಯದ ಚರಾಸ್ಥಿಯನ್ನು ಶ್ರೇಯಸ್ ಪಟೇಲ್​ ಹೊಂದಿದ್ದಾರೆ. ಪತ್ನಿ ಹೆಸರಿನಲ್ಲಿ 31 ಲಕ್ಷದ 14 ಸಾವಿರದ 917 ರೂ ಮೌಲ್ಯದ ಚರಾಸ್ಥಿ ಇದೆ.

20 ಎಕರೆ ಕೃಷಿ ಭೂಮಿ ಒಡೆಯ ಶ್ರೇಯಸ್

ಬೆಂಗಳೂರು ಹಾಗೂ ಹೊಳೆನರಸೀಪುರ ದ ವಿವಿದೆಡೆ ಕೃಷಿಯೇತರ ಭೂಮಿ ಹೊಂದಿರೊ ಶ್ರೇಯಸ್ ಪಟೇಲ್ ಒಟ್ಟು 39. ಕೋಟಿ 58 ಲಕ್ಷದ 6 ಸಾವಿರದ 482 ರೂ ಮೌಲ್ಯದ ಕೃಷಿಯೇತರ ಭೂಮಿ ಹಾಗು ವಾಣಿಜ್ಯ ಕಟ್ಟಡವನ್ನು ಹೊಂದಿದ್ದಾರೆ.

ಪತ್ನಿ ಹೆಸರಿನಲ್ಲಿ ಬೆಂಗಳೂರಿನಲ್ಲಿ 1.36 ಕೋಟಿ ಬೆಲೆಬಾಳೋ ಒಂದು ನಿವೇಶನ ಹಾಗೂ ಮನೆಯನ್ನು ಶ್ರೇಯಸ್ ಪಟೇಲ್ ಬಳಿ ಇದೆ.

ಒಟ್ಟು ಚರ ಸ್ಥಿರಾಸ್ತಿ ಸೇರಿ 40 ಕೋಟಿ 99 ಲಕ್ಷದ 02 ಸಾವಿರದ 728 ರೂ ಮೌಲ್ಯದ ಆಸ್ತಿ ಹೊಂದಿರೊ ಶ್ರೇಯಸ್ ಪತ್ನಿ ಹೆಸರಿನಲ್ಲಿ ಒಟ್ಟು 1.68 ಕೋಟಿ ಚರ ಮತ್ತು ಸ್ಥಿರಾಸ್ಥಿ ಇದೆ.

ಇನ್ನೋವ ಕಾರು ಒಂದು ಟ್ರ್ಯಾಕ್ಟರ್ ಇದೆ

ತನ್ನ ಹೆಸರಿನಲ್ಲಿ ಒಂದು ಇನ್ನೋವ ಕಾರು ಒಂದು ಟ್ರ್ಯಾಕ್ಟರ್ ಹೊಂದಿದ್ದಾರೆ.

ತಮ್ಮ ಬಳಿ 65 ಸಾವಿರದ ಮೊಬೈಲ್ ಹಾಗು ಪತ್ನಿ ಬಳಿ 55 ಸಾವಿರದ ಮೊಬೈಲ್ ಹೊಂದಿರೊ ಬಗ್ಗೆ ಆಸ್ತಿ ವಿವರದಲ್ಲಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES