Monday, May 20, 2024

W, W, W.. ರೋಹಿತ್, ನಮನ್, ಬ್ರೆವಿಸ್ ಗೋಲ್ಡನ್ ಡಕ್ : ಟ್ರೆಂಟ್ ಬೌಲ್ಟ್ ಬೆಂಕಿ ಬೌಲಿಂಗ್

ಬೆಂಗಳೂರು : ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಮಾಜಿ ನಾಯಕ ರೋಹಿತ್ ಶರ್ಮಾ ಗೋಲ್ಡನ್ ಡಕ್ ಆದರು.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್ ಸೋತಿರುವ ಮುಂಬೈ ಇಂಡಿಯನ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಆರಂಭದಲ್ಲೇ ರಾಜಸ್ಥಾನ ನಾಯಕ ಸಂಜು ಸ್ಯಾಮ್ಸನ್ ರಣತಂತ್ರ ವರ್ಕೌಟ್ ಆಯಿತು.

ಮುಂಬೈ ಪರ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸಿದರು. ಟ್ರೆಂಟ್ ಬೌಲ್ಟ್ ಇನ್ನಿಂಗ್ಸ್‌ನ ಮೊದಲ ಓವರ್‌ ಬೌಲಿಂಗ್ ಮಾಡಿದರು. ಈ ಓವರ್​ನಲ್ಲಿ ಬೌಲ್ಟ್ ಸತತ ಎರಡು ಎಸೆತಗಳಲ್ಲಿ 2 ವಿಕೆಟ್ ಪಡೆದರು.

ಮುಂಬೈ ಇಂಡಿಯನ್ಸ್​ಗೆ ಮೊದಲ ಓವರ್​ನಲ್ಲೇ ಆಘಾತ ಎದುರಾಗಿದೆ. ರೋಹಿತ್ ಶರ್ಮಾ ಮತ್ತು ನಮನ್ ಧೀರ್ ಅವರು ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಬ್ರೂವಿಸ್ ಸಹ ಬೌಲ್ಟ್ ಓವರ್​ನಲ್ಲಿ ಡಕ್ ಆದರು. ಉತ್ತಮವಾಗಿ ಆಡುತ್ತಿದ್ದ ಇಶಾನ್ ಕಿಶನ್ (16) ನಾಂದ್ರೆ ಬರ್ಗರ್ ಎಸೆತದಲ್ಲಿ ಔಟಾದರು. ಸದ್ಯ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಕ್ರೀಸ್‌ನಲ್ಲಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಆರಂಭಿಕ ಓವರ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದವರಲ್ಲಿ ಬೌಲ್ಟ್​ ಭುವನೇಶ್ವರ್ ದಾಖಲೆ ಸರಿಗಟ್ಟಿದರು.

ಟ್ರೆಂಟ್ ಬೌಲ್ಟ್ : 25 (80 ಇನ್ನಿಂಗ್ಸ್)*

ಭುವನೇಶ್ವರ್ ಕುಮಾರ್ : 25 (116 ಇನ್ನಿಂಗ್ಸ್)

RELATED ARTICLES

Related Articles

TRENDING ARTICLES