Monday, May 20, 2024

RRಗೆ ಹ್ಯಾಟ್ರಿಕ್ ಗೆಲುವು.. ಪಾಂಡ್ಯ ನಾಯಕತ್ವದಲ್ಲಿ ಮುಂಬೈಗೆ ಹ್ಯಾಟ್ರಿಕ್ ಸೋಲು

ಬೆಂಗಳೂರು : 5 ಬಾರಿ ಚಾಂಪಿಯನ್ಸ್​ ಪಟ್ಟ ಮುಡಿಗೇರಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೀನಾಯ ಸೋಲು ಕಂಡಿತು. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈಗೆ ಇದು ಹ್ಯಾಟ್ರಿಕ್ ಸೋಲು.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 125 ರನ್​ ಪೇರಿಸಿತು. 126 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ರಾಜಸ್ಥಾನ 15.3 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ರಾಜಸ್ಥಾನ್ ರಾಯಲ್ಸ್ ಪರ ಮತ್ತೊಮ್ಮೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಪರಾಗ್ ಅಜೇಯ 54 ರನ್ ಸಿಡಿಸಿದರು. ಇದು ಅವರ ಸತತ ಎರಡನೇ ಅರ್ಧಶತಕವಾಗಿದೆ. ಆರ್. ಅಶ್ವಿನ್ 16, ಬಟ್ಲರ್ 13, ಜೈಸ್ವಾಲ್ 10, ಸಂಜು ಸ್ಯಾಮ್ಸನ್ 12 ರನ್ ಗಳಿಸಿದರು. ಮುಂಬೈ ಪರ ಆಕಾಶ್ ಮಧ್ವಲ್ 3 ವಿಕೆಟ್ ಪಡೆದರು.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಪರ ನಾಯಕ ಹಾರ್ದಿಕ್ ಪಾಂಡ್ಯ 34, ತಿಲಕ್ ವರ್ಮಾ 32, ಟೀಮ್ ಡೇವಿಡ್ 17, ಇಶಾನ್ ಕಿಶನ್ 16 ರನ್ ಗಳಿಸಿದರು. ರೋಹಿತ್ ಶರ್ಮಾ, ನಮನ್ ಧೀರ್ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಬ್ರೇವಿಸ್ ಗೋಲ್ಡನ್ ಡಕ್​ ಆದರು. ರಾಜಸ್ಥಾನ್ ಪರ ಟ್ರೆಂಟ್ ಬೌಲ್ಟ್ 3, ಚಹಾಲ್ 3, ಬರ್ಗರ್ 2 ಹಾಗೂ ಆವೇಶ್ ಖಾನ್ ಒಂದು ವಿಕೆಟ್ ಪಡೆದರು.

ಮುಂಬೈಗೆ ಹ್ಯಾಟ್ರಿಕ್ ಸೋಲು

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಮೊದಲ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಇಂದು ತವರು ಮೈದಾನದಲ್ಲಿ ರಾಜಸ್ಥಾನ ತಂಡದ ವಿರುದ್ಧವೂ ಸೋಲಿನ ಖಾತೆ ಹಾಗೆಯೇ ಉಳಿಸಿಕೊಂಡಿತು. ರಾಜಸ್ಥಾನ ಆಡಿರುವ ಮೂರು ಪಂದ್ಯಗಳನ್ನು ಗೆದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿತು.

RELATED ARTICLES

Related Articles

TRENDING ARTICLES