Monday, May 20, 2024

ರಾಜಸ್ಥಾನ್ ರಾಯಲ್ಸ್​ಗೆ ಸುಲಭ ಗುರಿ : ಪಾಂಡ್ಯಗೆ ಹ್ಯಾಟ್ರಿಕ್ ಸೋಲಿನ ಭೀತಿ

ಬೆಂಗಳೂರು : ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಸಾಧಾರಣ ಟಾರ್ಗೆಟ್ ಕಲೆಹಾಕಿತು.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 125 ರನ್​ ಪೇರಿಸಿತು.

ಮುಂಬೈ ಪರ ನಾಯಕ ಹಾರ್ದಿಕ್ ಪಾಂಡ್ಯ 34, ತಿಲಕ್ ವರ್ಮಾ 32, ಟೀಮ್ ಡೇವಿಡ್ 17, ಇಶಾನ್ ಕಿಶನ್ 16 ರನ್ ಗಳಿಸಿದರು. ಹಿಟ್ ಮ್ಯಾನ್ ರೋಹಿತ್ ಶರ್ಮಾ, ನಮನ್ ಧೀರ್ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಬ್ರೇವಿಸ್ ಗೋಲ್ಡನ್ ಡಕ್​ ಆದರು. ಮೂವರು ಮೊದಲ ಬಾಲಿನಲ್ಲೇ ಟ್ರೆಂಟ್ ಬೌಲ್ಟ್​ಗೆ ವಿಕೆಟ್ ಒಪ್ಪಿಸಿದರು.

ರಾಜಸ್ಥಾನ್ ರಾಯಲ್ ಪರ ಟ್ರೆಂಟ್ ಬೌಲ್ಟ್ ಮಾರಕ ದಾಳಿ ನಡೆಸಿದರು. ಮೊದಲ ಓವರ್​ನಲ್ಲೇ ಸತತ ಎರಡು ವಿಕೆಟ್ ಸಹಿತ ಒಟ್ಟು 2 ವಿಕೆಟ್ ಪಡೆದು ಮಿಂಚಿದರು. ಚಹಾಲ್ 3, ಬರ್ಗರ್ 2 ಹಾಗೂ ಆವೇಶ್ ಖಾನ್ ಒಂದು ವಿಕೆಟ್ ಪಡೆದರು. ರಾಜಸ್ಥಾನ್ ರಾಯಲ್ಸ್ ಗೆಲ್ಲಲು 126 ರನ್​ ಗಳಿಸಬೇಕಿದೆ.

ಮುಂಬೈಗೆ ಹ್ಯಾಟ್ರಿಕ್ ಸೋಲಿನ ಭೀತಿ

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಇಂದು ತವರು ಮೈದಾನದಲ್ಲಿ ರಾಜಸ್ಥಾನ ತಂಡವನ್ನು ಮಣಿಸಿ, ಗೆಲುವಿನ ಖಾತೆ ತೆರೆಯುವ ನಿರೀಕ್ಷೆಯಲ್ಲಿದೆ. ರಾಜಸ್ಥಾನ ಆಡಿರುವ ಎರಡು ಪಂದ್ಯ ಗೆದ್ದಿದೆ. ಇಂದಿನ ಪಂದ್ಯದಲ್ಲಿ ಮುಂಬೈ ಬಗ್ಗುಬಡಿದು ಹ್ಯಾಟ್ರಿಕ್ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದೆ.

RELATED ARTICLES

Related Articles

TRENDING ARTICLES