Monday, May 20, 2024

ಚುನಾವಣೆಗೆ ಸುಮಲತಾ ಅಕ್ಕನ ಸಹಕಾರ ಕೇಳಲು ಬಂದಿದ್ದೆ: ಹೆಚ್​.ಡಿ ಕುಮಾರಸ್ವಾಮಿ

ಬೆಂಗಳೂರು: ಚುನಾವಣೆಗೆ ಸುಮಲತಾ ಅಕ್ಕನ ಸಹಕಾರ ಕೇಳಲು ಬಂದಿದ್ದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದರು. 

ಚರ್ಚೆ ಬಳಿಕ ಸುದ್ದಿಕಾರರೊಂದಿಗೆ ಮಾತನಾಡಿದ ಅವರು,ಇದೊಂದು ಸೌಹಾರ್ದಯುತ ಭೇಟಿ. ನಾನು 4ನೇ ತಾರೀಕು ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ. ಇದಕ್ಕೆ ಸಹಕಾರ ಕೇಳಲು ಬಂದಿದ್ದೇನೆ. ಸುಮಲತಾ ಅವರಿಗೆ ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಇದೆ ಎಂದರು.

ನಿನ್ನೆಯಷ್ಟೇ ಸುಮಲತಾ ಅವರು ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದಾರೆ. ಮಂಡ್ಯಕ್ಕೆ ಭೇಟಿ ನೀಡಿದ ಬಳಿಕ ಈ ಬಗ್ಗೆ ಒಂದು ತೀರ್ಮಾನಕ್ಕೆ ಬರಲಿದ್ದಾರೆ. ಎಲ್ಲಾ ಮುಕ್ತವಾಗಿ ಚರ್ಚಿಸಿದ್ದೇವೆ. 3ನೇ ತಾರೀಕು ಈ ಬಗ್ಗೆ ತೀರ್ಮಾನ ಮಾಡ್ತಾರೆ. ನಾವು ಏನು ಚರ್ಚೆ ಮಾಡಿದೀವಿ ಎಂದು ಇಲ್ಲಿ ಹೇಳಲು ಆಗಲ್ಲ ಎಂದರು.

ಸುಮಲತಾ ‌ವೈರಿಯಲ್ಲ, ನಾನು ವೈರಿನ ಎಂಬ ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಡಿಕೆಶಿ ವೈರಿಯಲ್ಲ ನನಗೆ ಅವರು ನನ್ನ ದೊಡ್ಡ ಹಿತೈಷಿ.ಐದು ವರ್ಷ ಸರ್ಕಾರ ಸಂಪೂರ್ಣ ನಡೆಸಲಿ, 39 ಶಾಸಕರಿರುವ ಪಕ್ಷಕ್ಕೆ ಸಿಎಂ ಸ್ಥಾನ ಕೊಟ್ವಿ ಅಂತ ಪದೇ ಪದೇ ಹೇಳ್ತಿದಾರೆ.ಐದು ವರ್ಷ ನಾಮಕಾವಸ್ತೆಯಾಗಿ ಅಧಿಕಾರ ಕೊಟ್ರು ಒಂದು ದಿನವೂ ಅಧಿಕಾರ ನೆಮ್ಮದಿಯಾಗಿ ನಡೆಸಲು ಬಿಡಲಿಲ್ಲ.ಅದಕ್ಕೇ ಸಮ್ಮಿಶ್ರ ಸರ್ಕಾರ ಹೋಗಿದ್ದು, ನನ್ನಿಂದ ಸರ್ಕಾರ ಹೋಗಲಿಲ್ಲ ಎಂದು ಡಿ.ಕೆ ಶಿವಕುಮಾರ್​ಗೆ ತಿರುಗೇಟು ಕೊಟ್ಟರು.

 

RELATED ARTICLES

Related Articles

TRENDING ARTICLES