Tuesday, May 14, 2024

Power TV Survey : ಕೊಪ್ಪಳ ಕ್ಷೇತ್ರದಲ್ಲಿ ಯಾರಿಗೆ ಜಯ? ಯಾರಿಗೆ ಸೋಲು?

ಬೆಂಗಳೂರು : ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ದಿನಾಂಕ ಘೋಷಣೆ ಮಾಡಿದ ಬೆನ್ನಲ್ಲೇ, ರಾಜ್ಯ ರಾಜಕಾರಣದಲ್ಲಿ ಚುನಾವಣಾ ಕಣ ರಂಗೇರಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಮತ್ತು ಜೆಡಿಎಸ್​ ತಮ್ಮ ಅಭ್ಯರ್ಥಿಗಳ ಹೆಸರುಗಳ ಘೊಷಣೆ ಕಾರ್ಯ ಮುಗಿಸಿದ್ದು, ಕಾಂಗ್ರೆಸ್​ ಪಕ್ಷವು ಕೂಡ ಟಿಕೆಟ್​ ಹಂಚಿಕೆ ಗೊಂದಲಗಳ ನಡುವೆ ತಮ್ಮ ಎಲ್ಲಾ 28 ಕ್ಷೇತ್ರಗಳಿಗೂ ಸಮರ್ಥ ಅಭ್ಯರ್ಥಿಗಳ ಆಯ್ಕೆ ಮಾಡಿ ಮುಗಿಸಿದೆ.

ನಿಮ್ಮ ಪವರ್ ಟಿವಿಯೂ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಲೋಕಸಭಾ ಕ್ಷೇತ್ರಗಳ ಹಿನ್ನೆಲೆ, ಅಭಿವೃದ್ದಿ,  ಪಕ್ಷಗಳ ಬಲಾಬಲ, ರಾಜಕೀಯ ಬೆಳವಣಿಗೆಗಳ ಆಧಾರವಾಗಿಟ್ಟುಕೊಂಡು ಮತದಾರರಿಗೆ ಫೋನ್​ ಮಾಡಿ ಓಟ್​ ಮಾಡಿ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಸಮೀಕ್ಷೆ ನಡೆಸಿದೆ. ಪ್ರತಿನಿತ್ಯ ಒಂದೊಂದು ಕ್ಷೇತ್ರದ ಮತದಾರರು ಕರೆ ಮಾಡಿ ತಮ್ಮ ಅಭಿಪ್ರಾಯ ತಿಳಿಸುವ ಅವಕಾಶವನ್ನು ಮಾಡಿಕೊಟ್ಟಿತ್ತು. ಈ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ದೊರೆತಿದೆ.

ಕೊಪ್ಪಳ ಲೋಕಸಭಾ ಕ್ಷೇತ್ರದ ಪರಿಚಯ:

ಲೋಕಸಭಾ ಕ್ಷೇತ್ರ: ಕೊಪ್ಪಳ

ಹಾಲಿ ಸಂಸದ: ಸಂಗಣ್ಣ ಕರಡಿ

=======================

2024 ಬಿಜೆಪಿ ಅಭ್ಯರ್ಥಿ  :    ಡಾ. ಬಸವರಾಜ್​ ಕೆ.

2024 ಕಾಂಗ್ರೆಸ್​ ಅಭ್ಯರ್ಥಿ :   ಕಾಂಗ್ರೆಸ್  ರಾಜಶೇಖರ ಹಿಟ್ನಾಳ

================================

2019ಬಲಾಬಲ

ಸಂಗಣ್ಣ ಕರಡಿ :           ಬಿಜೆಪಿ :          5,84,997     –        ಶೇ. 49.25

ರಾಜಶೇಖರ್ ಹಿಟ್ನಾಳ್ :  ಕಾಂಗ್ರೆಸ್          5,47,573     –        ಶೇ. 46.10

ನೋಟ  ಯಾರಿಗೂ ಮತವಿಲ್ಲ                  10,800      –        ಶೇ. 0.91

 

ಚಲಾವಣೆಯಾದ ಒಟ್ಟು ಮತಗಳು :      11,90,627       _      ಶೇ. 68.56

ಸಂಗಣ್ಣ ಕರಡಿ ಗೆಲುವಿನ ಅಂತರ :        38,397           _      ಶೇ. 03.23

============================

ಮತದಾರರ ವಿವಿರ

ಪುರುಷರು                   9,12,818

ಮಹಿಳೆಯರು               9,38,750

ಒಟ್ಟು ಮತದಾರರು       18,51,700

(ತೃತೀಯ ಲಿಂಗಿಗಳು 132 )

=================================

ಜಾತಿವಾರು ಲೆಕ್ಕಾಚಾರ

ಲಿಂಗಾಯತ                    5.18 ಲಕ್ಷ

ಕುರುಬ                          4.21 ಲಕ್ಷ

ಮುಸ್ಲಿಂ                         3.05 ಲಕ್ಷ

ಪರಿಶಿಷ್ಟ  ಜಾತಿ                3.10 ಲಕ್ಷ

ಪರಿಶಿಷ್ಟ ಪಂಗಡ              2.21 ಲಕ್ಷ

ಹಿಂದುಳಿದ ವರ್ಗ              01 ಲಕ್ಷ

ಆಂಧ್ರ ಬಲಿಜ                   75,000

==========================

ಬಿಜೆಪಿ ಪ್ಲಸ್ :

ಪ್ರಧಾನಿ ನರೇಂದ್ರ ಮೋದಿ ಅಲೆ ಜೊತೆ ಹಿಂದೂತ್ವದ ವೋಟ್ ಬ್ಯಾಂಕ್ರಾ

ರಾಮ ಮಂದಿರದ ಜೊತೆ ಅಂಜನಾದ್ರಿಯ ಭಾವನಾತ್ಮಕ ನಂಟು

ಜನಾರ್ದನ ರೆಡ್ಡಿ ಬಿಜೆಪಿಗೆ ಮರಳಿ ಸೇರ್ಪಡೆ ಆಗಿರುವುದು ಆನೆಬಲ

ಕರಡಿ ಸಂಗಣ್ಣ ಬದಲು ಉತ್ಸಾಹಿ ಡಾ. ಬಸವರಾಜ್​ಗೆ ಮಣೆ ಹಾಕಿದ್ದು

ಬಿಜೆಪಿ ಮೈನಸ್ :

ಕರಡಿ ಸಂಗಣ್ಣಗೆ ಟಿಕೆಟ್​ ತಪ್ಪಿಸಿದ್ದು ಅಸಮಾಧಾನ ಸಾಧ್ಯತೆ

ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಭಾರಿ ಹಿನ್ನಡೆ ಅನುಭವಿಸಿದ್ದು

ಮೈತ್ರಿ ಆಗಿದ್ರೂ ಜೆಡಿಎಸ್ ಮುಖಂಡರ ಜೊತೆ ವೈಮನಸ್ಸು ಇರುವುದು

ಕಾಂಗ್ರೆಸ್ ಪ್ಲಸ್ 

ಕಳೆದ ಅಸೆಂಬ್ಲಿ ಎಲೆಕ್ಷನ್​ನಲ್ಲಿ ಭರ್ಜರಿ ಜಯ, 6 ಕ್ಷೇತ್ರದಲ್ಲಿ ಕಾಂಗ್ರೆಸ್

ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿಯಿಂದ ಜನರಲ್ಲಿ ವಿಶ್ವಾಸ

ಸಿಎಂ ಸಿದ್ದರಾಮಯ್ಯ ಪರ ಕ್ಷೇತ್ರದಲ್ಲಿ ಒಲವು ಹೆಚ್ಚಾಗಿರುವುದು

ಜಾತಿ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ ಗೆಲುವಿಗೆ ಹೆಚ್ಚು ಸಾಧ್ಯತೆಗಳು

ಕಾಂಗ್ರೆಸ್ ಮೈನಸ್ 

ವಿಧಾನಸಭೆ ಒಗ್ಗಟ್ಟು ಲೋಕಸಭೆ ಎಲೆಕ್ಷನ್​​ಗೆ ಇಲ್ಲದೇ ಇರುವುದು

ಕಾಂಗ್ರೆಸ್ ಸ್ಥಳೀಯ ನಾಯಕರ ಮಧ್ಯೇನೆ ಇರುವ ವೈಮನಸ್ಸು

ಗ್ಯಾರಂಟಿ ಜಾರಿ ನೆಪದಲ್ಲಿ ಅಭಿವೃದ್ಧಿ ಕೆಲಸಗಳ ಕಡೆಗಣನೆ

ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ನಿಮ್ಮ ಪವರ್ ಟಿವಿಯ ಕಾಲ್ ಮಾಡಿ ವೋಟ್ ಮಾಡಿ ಸಮೀಕ್ಷೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಕೊಪ್ಪಳದಲ್ಲಿ ಮತದಾರ ಯಾವ ಪಕ್ಷಕ್ಕೆ ಹೆಚ್ಚು ವೋಟ್ ಹಾಕಿದ್ದಾನೆ ? ಈ ಬಾರಿ ಕಮಲದ ಓಟಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್​ ಪಕ್ಷ? ಹಿಟ್ನಾಳ್​​ ಜಯಭೇರಿ ಬಾರಿಸುತ್ತಾರಾ? ಡಾ.ಬಸವರಾಜ್​ ಗೆಲ್ತಾರಾ? ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಪವರ್​ ಟಿವಿ ಕಾಲ್ ಮಾಡಿ ವೋಟ್​ ಮಾಡಿ ಸಮೀಕ್ಷೆ ವಿವರ:

ಕೊಪ್ಪಳ ಅಸೆಂಬ್ಲಿ ಕ್ಷೇತ್ರದಿಂದ ಒಟ್ಟು ಕರೆಗಳು – 9380

ಪುರುಷ ಮತದಾರರಿಂದ 8860, ಮಹಿಳಾ ಮತದಾರರಿಂದ 520 ಕರೆಗಳು

ಬಿಜೆಪಿಗೆ ಅಭ್ಯರ್ಥಿಗೆ ಮತಗಳು – 4716, ಕಾಂಗ್ರೆಸ್​ ಅಭ್ಯರ್ಥಿಗೆ ಮತಗಳು​ – 4664

ಕೊಪ್ಪಳ ಕ್ಷೇತ್ರದಿಂದ ಇತರರಿಗೆ ಬಂದ ಮತಗಳು – 0

ಬಿಜೆಪಿಗೆ ಬಂದ ಶೇಕಡಾವಾರು ಮತಗಳು – 50%

ಕಾಂಗ್ರೆಸ್ ಪಕ್ಷಕ್ಕೆ ಬಂದ ಶೇಕಡಾವಾರು ಮತಗಳು – 50%

ಇತರರಿಗೆ ಬಂದ ಶೇಕಡಾವಾರು ಮತಗಳು – 0

ಕಾಂಗ್ರೆಸ್ ವಿರುದ್ಧ ಬಿಜೆಪಿಗೆ 52 ಮತಗಳ ಮುನ್ನಡೆ

ಕ್ಷೇತ್ರದಲ್ಲಿ ಸದ್ಯದ ಟ್ರೆಂಡ್​ :

ಕೊಪ್ಪಳ ಲೋಕಸಭಾ ಫೈಟ್​ನಲ್ಲಿ ಸಮಬಲದ ಹೋರಾಟ

ಕೊಪ್ಪಳ ಕದನದಲ್ಲಿ ಬಿಜೆಪಿ-ಕಾಂಗ್ರೆಸ್​ ನಡುವೆ ಭಾರೀ ಫೈಟ್

ಡಾ.ಬಸವರಾಜ್​ಗೆ ಭರ್ಜರಿ ಪೈಪೋಟಿ ನೀಡಿರುವ ರಾಜಶೇಖರ್ ಹಿಟ್ನಾಳ್​​

ಕೊಪ್ಪಳದಲ್ಲಿ ಫೋಟೋ ಫಿನಿಶ್ ಫಲಿತಾಂಶದ ಮುನ್ಸೂಚನೆ

ಸದ್ಯದ ಟ್ರೆಂಡ್ ಪ್ರಕಾರ ಕಾಂಗ್ರೆಸ್ ವಿರುದ್ಧ ಬಿಜೆಪಿಗೆ ಅಲ್ಪ ಮುನ್ನಡೆ

ಇದು ಪವರ್ ಟಿವಿ ಸರ್ವೆ ಮೂಲಕ ಕೊಪ್ಪಳ ಜನ ನೀಡಿರುವ ಸಂದೇಶ.

RELATED ARTICLES

Related Articles

TRENDING ARTICLES