Friday, May 17, 2024

ಮಾವು ನೋಡಿದ್ರೆ ಸಿಹಿ, ಬೆಲೆ ಕೇಳಿದ್ರೆ ಕಹಿ : ವೆರೈಟಿ ವೆರೈಟಿ ಮಾವಿಗೆ ಮುಗಿಬಿದ್ದ ಗ್ರಾಹಕರು

ಬೆಂಗಳೂರು : ಹಣ್ಣುಗಳ ರಾಜ ಅಂತಲೇ ಫೇಮಸ್​ ಆಗಿರೋ ಮಾವಿನ ಹಣ್ಣು ಸಿಲಿಕಾನ್ ಸಿಟಿಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ವಿವಿಧ ತಳಿಯ, ರುಚಿಯಾದ ಮಾವಿನ ಹಣ್ಣುಗಳು ಕಣ್ಮನ ಸೆಳೆದು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ. ಆದರೆ, ದರ ಮಾತ್ರ ಮುಗಿಲು ಮುಟ್ಟಿದೆ.

ಪ್ರತಿ ವರ್ಷ ಯುಗಾದಿಯ ಮಾಗಿ ಚಳಿ ಬಳಿಕ ಮಾರುಕಟ್ಟೆಗೆ ಆಗಮಿಸುವ ವಿವಿಧ ತಳಿಯ ಮಾವಿನ ಹಣ್ಣುಗಳು ತನ್ನದೇ ಆದ ಬಣ್ಣ ಹಾಗೂ ರುಚಿಯನ್ನ ಹೊಂದಿವೆ. ಮಕ್ಕಳು, ಯುವಕರು, ವೃದ್ಧರು, ಸೇರಿದಂತೆ ಎಲ್ಲ ವಯೋಮಾನದವರು ಇಷ್ಟ ಪಡುವ ಹಣ್ಣು ಇದಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಮಲ್ಲಿಕಾ, ಆಪೂಸ್‌ ತಳಿಯ ಮಾವಿನ ಹಣ್ಣುಗಳು ದೊರೆಯುತ್ತಿದ್ದು, ಬೇಸಿಗೆಯಲ್ಲಿ ಬಸವಳಿದ ದೇಹಕ್ಕೆ ಚೈತನ್ಯ ನೀಡಲು ತಯಾರಾಗಿವೆ. ಇನ್ನು ಮಾವಿನ ಸೀಸನ್ ಆರಂಭದಲ್ಲೇ ಮಾರ್ಕೆಟ್​​ನಲ್ಲಿ ಮಾವಿನಹಣ್ಣು ಎಂಟ್ರಿಕೊಟ್ಟಿದೆ.

ಅಲ್ಫನ್ಜೋ, ಮಲ್ಲಿಕಾ, ಬಾದಾಮಿ, ರಸ್ಪುರಿ ಮತ್ತು ಇತರ ತಾಜಾ ತಾಜಾ ಮಾವಿನ ಹಣ್ಣಿಗೆ ಮಾವು ಪ್ರಿಯರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.‌ ಪ್ರತಿ ಕೆಜಿ ಮಾವಿಗೆ 150 ರೂ. ರಿಂದ 800 ರೂ. ವರೆಗೂ ದರ ನಿಗದಿ ಆಗಿದೆ.

ಒಟ್ನಲ್ಲಿ,  ಮಾವಿನ ಸೀಸನ್ ಆರಂಭದಲ್ಲೇ ಈ ಬಾರಿ ಇಷ್ಟೊಂದು ಡಿಮ್ಯಾಂಡ್ ಶುರುವಾಗಿದೆ. ಇನ್ನು ಮುಂದೆ  ಹೋಗ್ತಾ ಹೋಗ್ತಾ ಎಷ್ಟು ವೆರೈಟಿ ಮಾವು ಮಾರ್ಕೆಟ್​ಗೆ ಲಗ್ಗೆ ಇಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಮಾವಿನ ಹಣ್ಣಿನ ಬೆಲೆ

  • ರಸಪುರಿ : 120
  • ಹಿಮಾಯತ್ : 220
  • ಬಾದಾಮಿ : 180
  • ಮಲ್ಲಿಕಾ : 180
  • ಅಲ್ಫಾ : 160
  • ಬಾಗೇನ್ಪಲ್ಲಿ : 140
  • ಅಲ್ಫಾನ್ಸೋ : 320
  • ಮಾಲ್ಗೋವಾ : 350
  • ತೋತಾಪುರಿ : 100
  • ಕುದಾದಾದ್ : 240
  • ಶುಗರ್‌ಬೇಬಿ : 250
  • ಸೇಂಧೂರ : 100

RELATED ARTICLES

Related Articles

TRENDING ARTICLES