Monday, May 20, 2024

ದಿನ ಭವಿಷ್ಯ : ಮಕರ ರಾಶಿಯವರಿಗೆ ಪ್ರೇಯಸಿಯಿಂದ ಸಂಕಟ! ಈ ರಾಶಿಯವರು ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ಬೆಂಗಳೂರು : ನಿತ್ಯ ಭವಿಷ್ಯ ನೋಡಿ ದಿನಚರಿ ಆರಂಭಿಸುವುದು ಹಲವರ ಅಭ್ಯಾಸ. ಮೇಷ, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಈ ದಿನ ಯಾವ ರಾಶಿಯವರಿಗೆ ಶುಭ? ಯಾರಿಗೆ ಆಶುಭ? ಇಲ್ಲಿದೆ ನೋಡಿ ಮಾಹಿತಿ.

ಮೇಷ ರಾಶಿ

ಇಂದಿನ ನಿಮ್ಮ ಪ್ರಯಾಣ ಲಾಭದಾಯವಾಗಿರಲಿದೆ. ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ.

ವೃಷಭ ರಾಶಿ

ವ್ಯವಹಾರದಲ್ಲಿ ಸಹೋದ್ಯೋಗಿಗಳಿಂದ ಘರ್ಷಣೆ ಸಾಧ್ಯತೆ. ಕುಟುಂಬದವರು ಆತಂಕಕ್ಕೆ ಒಳಗಾಗಬಹುದು.

ಮಿಥುನ ರಾಶಿ

ಮನೆಯಿಂದಲೇ ಕಚೇರಿ ಕೆಲಸ ಮಾಡಬೇಕಾದ ಸಾಧ್ಯತೆ. ಪ್ರಭಾವಿ ವ್ಯಕ್ತಿಗಳೊಂದಿಗೆ ಸೌಹಾರ್ದ ಸಂಬಂಧ.

ಕರ್ಕ ರಾಶಿ

ಸೋಮಾರಿ ತನವು ನಿಮ್ಮ ಕೆಲಸವನ್ನು ಹಾಳುಮಾಡುತ್ತದೆ. ದಿನದ ಆರಂಭ ಸ್ವಲ್ಪ ಆಯಾಸದಿಂದ ಕೂಡಿರುತ್ತದೆ.

ಸಿಂಹ ರಾಶಿ

ನಿಮ್ಮ ಆಪ್ತರ ಬಳಗದಲ್ಲಿ ನೀವು ಜನಪ್ರಿಯತೆ ಹೆಚ್ಚಾಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗುವ ಸಾಧ್ಯತೆ.

ಕನ್ಯಾ ರಾಶಿ

ಕೆಲಸದ ಸ್ಥಳದಲ್ಲಿ ಸ್ಪರ್ಧೆ ವಾತಾವರಣ. ಎಲ್ಲಾ ಕೆಲಸಗಳನ್ನು ಶ್ರದ್ಧೆಯಿಂದ ಮಾಡುವುದು ಒಳ್ಳೆಯದು.

ತುಲಾ ರಾಶಿ

ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದಂತೆ ದೊಡ್ಡ ವ್ಯವಹಾರ ನಡೆಯುವ ಸಾಧ್ಯತೆ. ಭಾವನೆಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ವೃಶ್ಚಿಕ ರಾಶಿ

ಇತರರಿಗೆ ಅನಗತ್ಯ ಸಲಹೆ ನೀಡುವುದನ್ನು ನಿಲ್ಲಿಸಿ. ಕಠಿಣ ಪರಿಶ್ರಮದಿಂದಾಗಿ ಆಯಾಸ ಮತ್ತು ದೇಹ ನೋವು ಅನುಭವಿಸಬಹುದು.

ಧನು ರಾಶಿ

ಕೆಲಸದ ಸ್ಥಳದಲ್ಲಿ ನಿಮಗೆ ಜವಾಬ್ದಾರಿಯುತ ಕೆಲಸವನ್ನು ವಹಿಸಿಕೊಡಬಹುದು. ಅಪರಿಚಿತರನ್ನು ಅತಿಯಾಗಿ ನಂಬಬೇಡಿ. ಇತರರ ಮೇಲೆ ನೀವು ಹೆಚ್ಚು ಕಾಳಜಿ ವಹಿಸುತ್ತೀರಿ.

ಮಕರ ರಾಶಿ

ಹಿತೈಷಿಗಳಿಂದ ಮನಸ್ಸಿಗೆ ಸಂತೋಷ. ಪ್ರೇಯಸಿಯ ಮಾತು ಸಂಕಟ ತರಬಹುದು. ತುರ್ತು ಪ್ರಯಾಣ ಸಾಧ್ಯತೆ. ಶತ್ರುಗಳ ಯೋಜನೆಗಳು ವಿಫಲ.

ಕುಂಭ ರಾಶಿ

ಸಂಗಾತಿಯ ಬಗ್ಗೆ ಸಿಂಪತಿ ಬರುವುದು. ಹಿತೈಷಿಗಳ ಮೇಲೆ ಸುಖಾಸುಮ್ಮನೆ ಅನುಮಾನ ಬೇಡ. ವ್ಯವಹಾರದಲ್ಲಿ ಸಹೋದ್ಯೋಗಿಗಳಿಂದ ಘರ್ಷಣೆ ಸಾಧ್ಯತೆ.

ಮೀನ ರಾಶಿ

ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಿಮ್ಮ‌ ಕಷ್ಟ ಆಪ್ತರ ಜೊತೆ ಹಂಚಿಕೊಳ್ಳುವುದರಿಂದ ಕಷ್ಟ. ಶುಭ ಕಾರ್ಯಗಳಿಗೆ ಹಣವ್ಯಯ ಆಗಬಹುದು.

RELATED ARTICLES

Related Articles

TRENDING ARTICLES