Sunday, May 12, 2024

‘ಮಂಡಿ ಸೇ ರ*ಡಿ’ : ಕಂಗನಾ ವಿರುದ್ಧ ‘ಕೈ’ ನಾಯಕರಿಂದ ಕೆಟ್ಟ ಕಾಮೆಂಟ್

ಬೆಂಗಳೂರು : ನಟಿ ಕಂಗನಾ ರಣಾವತ್ ಮೇಲೆ ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಘೋಷಿಸಿದ ನಂತರ ಕಂಗನಾ ಫೋಟೋ ಪೋಸ್ಟ್ ಮಾಡಿ ಅವಮಾನ ಮಾಡಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನೇಟ್ ಅವರು ಇನ್​​ಸ್ಟಾಗ್ರಾಮ್​​ನಲ್ಲಿ ಕಂಗನಾ ರಣಾವತ್ ಅವರ ಹಾಟ್ ಫೋಟೊವೊಂದನ್ನು ಪೋಸ್ಟ್ ಮಾಡಿ ‘ಕ್ಯಾ ಭಾವ್ ಚಲ್ ರಹಾ ಹೈ ಮಂಡಿ ಮೆ ಕೋಯಿ ಬತಾಯೇಗಾ?’ ಎಂದು ಬರೆದಿದ್ದಾರೆ. ಜನಾಕ್ರೋಶ ನಂತರ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

‘ಮಂಡಿ ಸೇ ರ*ಡಿ’ ಎಂದು ನಿಂದನೆ

ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಚ್‌.ಎಸ್ ಅಹಿರ್, ನಟಿ ಕಂಗನಾ ರಣಾವತ್ ಅವರು ಮಂಡಿಯಿಂದ ಅಭ್ಯರ್ಥಿಯಾಗಿರುವುದನ್ನು ಉಲ್ಲೇಖಿಸಿ, ‘ಮಂಡಿ ಸೇ ರ*ಡಿ’ ಎಂದು ನಿಂದಿಸಿದ್ದಾರೆ. ಕಂಗನಾ ರಣಾವತ್‌ ಬಗ್ಗೆ ವಿಪಕ್ಷಗಳ ನಿಂದನೀಯ ಟ್ವೀಟ್‌ಗಳ ವಿರುದ್ಧ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್‌ಸ್ಟಾದಿಂದ ಪೋಸ್ಟ್ ಡಿಲೀಟ್

ಮಹಿಳೆಯ ಮೇಲೆ ಲೈಂಗಿಕ ಅವಹೇಳನಕಾರಿ ದಾಳಿಯನ್ನು ನೆಟ್ಟಿಗರು ಖಂಡಿಸಿದ್ದಾರೆ. ಜನಾಕ್ರೋಶ ಕಂಡುಬರುತ್ತಿದ್ದಂತೆ ಶ್ರಿನೇಟ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಅನ್ನು ಅಳಿಸಿದ್ದು, ತನ್ನ ಮೆಟಾ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES