Sunday, May 12, 2024

ಈ ಬಾರಿ ಕಾಂಗ್ರೆಸ್ ಗೆಲ್ಲುತ್ತೆ, ದೇಶದಲ್ಲಿ ಬಿಜೆಪಿ ಸೋಲುತ್ತೆ: ಸಚಿವ ಸಂತೋಷ ಲಾಡ್ 

ಧಾರವಾಡ: ಈ ಬಾರಿ ಧಾರವಾಡದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ, ದೇಶದಲ್ಲಿ ಬಿಜೆಪಿ ಸೋಲುತ್ತೆ ಎಂದು ಸಚಿವ ಸಂತೋಷ ಲಾಡ್ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನೆನ್ನೆಯಿಂದ ಲೋಕಸಭಾ ಚುನಾವಣೆ ಪ್ರಚಾರ ಆರಂಭವಾಗಿದೆ.
ಮೇ 7ರವರೆಗೆ ಪಕ್ಷದ ಮುಖಂಡರು ಸೇರಿ ಯಾವ ರೀತಿ ಚುನಾವಣೆ ಎದುರಿಸಬೇಕು ಅನ್ನೋದರ ಬಗ್ಗೆ ಚರ್ಚೆ ಮಾಡ್ತಿದ್ದೀವಿ ಈ ಬಾರಿ ಧಾರವಾಡದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ, ದೇಶದಲ್ಲಿ ಬಿಜೆಪಿ ಸೋಲುತ್ತೆಕರ್ನಾಟಕದಲ್ಲಿ ಹೆಚ್ಚಿನ ಸೀಟ್ ಗಳನ್ನು ನಾವು ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

4 ಲಕ್ಷ ಅಂತರದಿಂದ ಗೆಲುತ್ತೀವೆ ಎಂಬಜೋಶಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು,ಅವರಿಗೆ ಗೆದ್ದು ಗೆದ್ದು ಅಭ್ಯಾಸ ಇದೆ, 4 ಲಕ್ಷ ಎಲ್ಲಿಂದ ಗೆಲ್ತಾರೋ ಗೊತ್ತಿಲ್ಲ ಅವರು ಓವರ್ ಕಾಂಫಿಡೆಂಟ್​ನಲ್ಲಿದ್ದಾರೆನೋ ಗೊತ್ತಿಲ್ಲ ಎಂದರು.

ಟಿಕೆಟ್ ಕೈ ತಪ್ಪಿದಕ್ಕೆ ಅಸಮಾದಾನವಾದವರ ಬಗ್ಗೆ ಮಾತನಾಡಿದ ಅವರು,ಒಂದೆರಡು ಕಡೆಗಳಲ್ಲಿ ಅಸಮಾಧಾನ ಆಗಿದೆ.ವಿನಯ್ ಕುಲಕರ್ಣಿ ಸೇರಿ ನಮ್ಮ ಪಕ್ಷದ ಮುಖಂಡರು ಮಾತನಾಡ್ತಿದ್ದಾರೆ.ಅವರಿಗೆ ಸಹಜವಾಗಿ ನೋವಾಗಿದೆ ಎಂದು ಹೇಳಿದ್ದರು.

ಶೆಟ್ಟರ್ ಬೆಳಗಾವಿ ಸ್ಪರ್ಧೆಯಿಂದ ಕಾಂಗ್ರೆಸ್​ಗೆ ಲಾಭವಾಗುವುದೇ ಎಂಬ ವಿಚಾರವಾಗಿ ಮಾತನಾಡಿದ ಅವರು,ನರೇಂದ್ರ ಮೋದಿ ಚರ್ಚೆಗೆ ಬರೋದೇ ಇಲ್ಲಾ10 ವರ್ಷದಲ್ಲಿ ಮಾಡಿದ್ದು ಹೇಳೋದನ್ನ ಬಿಟ್ಟು ಮುಂದಿನ 5 ವರ್ಷದ ಬಗ್ಗೆ ಚರ್ಚೆ ಮಾಡ್ತಾರೆ.ಇವರ ಒಂದು ಆಶ್ವಾಸನೆ ನೆರವೇರಿಸಿದ್ದಾರಾ?ಅಧಿಕಾರವನ್ನು ಮಿಸ್ ಯೂಸ್ ಮಾಡ್ಕೊಳ್ತಿದ್ದಾರೆ.ಯಾವ ರೀತಿ ಅಧಿಕಾರಕ್ಕೆ ಬರಬೇಕು ಅನ್ನೋದರ ಬಗ್ಗೆ ಅವರು ಪ್ರಾಯೋಗಿಕವಾಗಿ ಕಂಡಿದ್ದಾರೆ.ಜಿಡಿಪಿಯಲ್ಲಿ ಬಾಂಗ್ಲಾದೇಶಕ್ಕಿಂತ ನಾವು ಹಿಂದೆ ಇದ್ದೇವೆ.

ಇಲೆಕ್ಟ್ರಾ ಬಾಂಡ್ ಬಗ್ಗೆ ಜೋಶಿ ಅವರು ಯಾಕೆ ಮಾತನಾಡಲ್ಲ ನಾ ಕಾವುಂಗಾ, ನಾ ಕಾಣೆ ದುಂಗಾ ಅಂತಾರೆ, ಆರುವರೆ ಸಾವಿರ ಕೋಟಿ ಬಿಜೆಪಿಗೆ ಫಂಡಿಂಗ್ ಬಂದಿದೆ.ಎಲ್ಲಿಂದ ಬಂದಿದೆ.ಯಾಕೆ ತಗೊಂಡ್ರಿ ಕಂಪನಿಗಳನ್ನು ನೀವೇ ರೇಡ್ ಮಾಡಿ ದುಡ್ಡು ತಗೋತೀರಿ, ಯಾಕೆ ತಗೋಬಾರದಿತ್ತು ನಾವು ರೇಡ್ ಮಾಡಿದ ಕಂಪನಿಗಳಿಂದ ನಾವು ದುಡ್ಡು ತಗೋಬೇಕಾ ಇಲೆಕ್ಟ್ರಾ ಬಾಂಡ್ ಯಾರಿಗೂ ಕೊಡಬಾರದಿತ್ತು. ಪಿಎಂ ರಿಲೀಫ್ ಫಂಡನಲ್ಲಿ 30 ಸಾವಿರಾರು ಕೋಟಿ ತಗೊಂಡಿದ್ದೀರಾ, ಅದರ ಬಗ್ಗೆ ನೀವು ಯಾಕೆ ಹೇಳ್ತಿಲ್ಲ? ಎಂದು ಪ್ರಶ್ನೆ ಮಾಡಿದ್ದರು.

10 ವರ್ಷದಲ್ಲಿ ನೀವು ಮಾಡಿರೋ ಅಭಿವೃದ್ಧಿ ಬಗ್ಗೆ ಚರ್ಚೆಗೆ ಬನ್ನಿ ಬೇರೆ ದೇಶಗಳೊಂದಿಗೆ ನಾವು ಹೋಲಿಸಿ ನೋಡೋಣ್ವಾ? ಬರ ಪರಿಹಾರ ಕೇಂದ್ರ ಕೊಡಲಿಲ್ಲ, ಸುಪ್ರೀಂ ಕೋರ್ಟ್ ಗೆ ಹೋಗಲೇ ಬೇಕಿತ್ತು ಎಂದು ಕಿಡಿಕಾರಿದ್ದರು.

ಯಾವುದೇ ಬ್ಯಾಲೆನ್ಸ್ ಇಲ್ಲ ಎಂಬ ನಿರ್ಮಲ ಸೀತಾರಾಮನ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು,ನಾವು ಯಾಕೆ ಸುಳ್ಳು ಹೇಳೋಣ, ಬರಗಾಲದ ದುಡ್ಡು ಬರದೇ ಹೋದ್ರು ಅದಕ್ಕೂ ಸುಳ್ಳಿ ಹೇಳೋಣ? ಬಿಜೆಪಿ ಅವರು ಹೇಳಿದ್ದೆ ವೇದ ವಾಕ್ಯ ಅನ್ನೋವಂತಾಗಿದೆ. ಕೇಜ್ರಿವಾಲ್ ಅವರನ್ನ ಅರೆಸ್ಟ್ ಮಾಡಿದ್ದಾರೆ, ಯಾಕೆ ಅರೆಸ್ಟ್ ಮಾಡಿದ್ದಾರೆ? ಅಪ್ರುವಲ್ ಆದ ರೆಡ್ಡಿಯವರೇ ಬಿಜೆಪಿಗೆ ದುಡ್ಡು ಕೊಟ್ಟಿದ್ದು ನೇರವಾಗಿದೆ, ಯಾರು ಅರೆಸ್ಟ್ ಆಗಬೇಕು. ಬಿಜೆಪಿ ಅವರು ಅಧಿಕಾರಕ್ಕೆ ಬರಲು ಏನೇನು ಮಾಡ್ಬೇಕೊ ಮಾಡ್ತಾ ಇದ್ದಾರೆ. ಬಿಜೆಪಿ ಇಂದ ಜನಸಾಮಾನ್ಯರಿಗೆ, ಅವರ ಕಾರ್ಯಕರ್ತರಿಗೆ ಏನು ಅನುಕೂಲ ಆಗಿಲ್ಲ ಏನಾದ್ರೂ ಆಗಿದ್ರೆ ಅದು ಕೇವಲ ಮುಖಂಡರಿಗೆ ಆಗಿದೆ.

ಈ ಬಾರಿ ಬಿಜೆಪಿ ಅಧಿಕಾರದಿಂದ ಹೊರಹೋಗುತ್ತೆ ಅನ್ನೋ ನಂಬಿಕೆ ಇದೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES