Friday, May 17, 2024

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಪತ್ನಿ ಕಾರು ಕಳ್ಳತನ!

ನವದೆಹಲಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಪತ್ನಿಯ ಟೊಯೋಟಾ ಫಾರ್ಚುನರ್ ಕಾರು ದೆಹಲಿಯಲ್ಲಿ ಕಳ್ಳತನವಾಗಿದೆ.

ಮಾರ್ಚ್ 19ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸರ್ವೀಸ್​ ಸೆಂಟರ್​ನಲ್ಲಿ ಕಾರು ನಿಲ್ಲಿಸಿ, ಊಟಕ್ಕೆ ಹೋದ ಸಂದರ್ಭದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.

ಈ ಸಂಬಂಧ ಕಾರು ಚಾಲಕ ಜೋಗಿಂದರ್ ಅವರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾವು ಸರ್ವೀಸ್​ ಸೆಂಟರ್​ನಲ್ಲಿ ಕಾರು ನಿಲ್ಲಿಸಿ ಊಟಕ್ಕೆಂದು ಹೋಗಿದ್ದೆವು. ವಾಪಸ್ ಬಂದಾಗ ಕಾರು ಕಳ್ಳತನವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಚಾಲಕನ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಾರು ಗುರುಗ್ರಾಮ ಕಡೆಗೆ ಹೋಗುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳವಾಗಿರುವ ಕಾರು ಹಿಮಾಚಲ ಪ್ರದೇಶದ ನೋಂದಣಿ ಸಂಖ್ಯೆಯನ್ನು ಹೊಂದಿದೆ.

RELATED ARTICLES

Related Articles

TRENDING ARTICLES