Monday, May 20, 2024

ಸಂಜು ಸ್ಯಾಮ್ಸನ್ ಅಬ್ಬರ.. ಲಕ್ನೋಗೆ 194 ರನ್ ಟಾರ್ಗೆಟ್

ಬೆಂಗಳೂರು : ಲಕ್ನೋ ಸೂಪರ್ ಜೈಂಟ್ಸ್​ ವಿರುದ್ಧ ರಾಜಸ್ಥಾನ್ ರಾಯಲ್ಸ್​ ಬೃಹತ್ ಮೊತ್ತ ಕಲೆಹಾಕಿತು. ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 193 ರನ್‌ ಗಳಿಸಿತು.

ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ಮೊದಲು ಬ್ಯಾಟಿಂಗ್ ಮಾಡಿತು. ಆದರೆ, ಆರ್​ಆರ್​ಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಕೇವಲ 11 ರನ್​ಗೆ ಔಟಾದರು.

ಬಳಿಕ ಯಶಸ್ವಿ ಜೈಸ್ವಾಲ್ ಜೊತೆಯಾದ ನಾಯಕ ಸಂಜು ಸ್ಯಾಮ್ಸನ್ ಜವಾಬ್ದಾರಿಯುತ ಆಟವಾಡಿದರು. ಈ ವೇಳೆ 24 ರನ್​ ಗಳಿಸಿದ್ದ ಜೈಸ್ವಾಲ್ ಔಟಾದರು. ಬಳಿಕ ಒಂದಾದ ಸಂಜು ಹಾಗೂ ರಿಯಾನ್ ಪರಾಗ್ ಲಕ್ನೋ ಬೌಲರ್​ಗಳನ್ನು ಬೆಂಡೆತ್ತಿದರು. ಇಬ್ಬರೂ ಜೊತೆಗೂಡಿ 59 ಎಸೆತಗಳಲ್ಲಿ 93 ರನ್‌ಗಳ ಜೊತೆಯಾಟ ನೀಡಿದರು.

ಪರಾಗ್ 29 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 43 ರನ್ ಗಳಿಸಿ ಔಟಾದರು. ಬಳಿಕ ಬಂದ ಶಿಮ್ರಾನ್ ಹೆಟ್ಮೆಯರ್ 5 ರನ್​ಗೆ ಆಟ ಮುಗಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ನಾಯಕ ಸಂಜು ಲಕ್ನೋ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದರು.

ನಾಯಕ ಸಂಜು ಆಕರ್ಷಕ ಅರ್ಧಶತಕ

ರಾಜಸ್ಥಾನ ಪರ ಸಂಜು ಸ್ಯಾಮ್ಸನ್ 52 ಎಸೆತಗಳಲ್ಲಿ 82 ರನ್ ಗಳಿಸಿ ಅಜೇಯರಾಗಿ ಉಳಿದರು. ಧ್ರುವ್ ಜುರೆಲ್ ಅಜೇಯ 20, ಪರಾಗ್ 43, ಯಶಸ್ವಿ ಜೈಸ್ವಾಲ್ 24 ರನ್ ಗಳಿಸಿದರು. ಲಕ್ನೋ ಪರ ನವೀನ್-ಉಲ್-ಹಕ್ 2, ರವಿ ಬಿಷ್ಣೋಯ್ ಹಾಗೂ ಮೊಹ್ಸಿನ್ ಖಾನ್ ತಲಾ ಒಂದು ವಿಕೆಟ್ ಪಡೆದರು. ಲಕ್ನೋ ಗೆಲ್ಲಲು 194 ರನ್​ ಗಳಿಸಿದರು.

RELATED ARTICLES

Related Articles

TRENDING ARTICLES