Friday, May 17, 2024

ಸಿದ್ದರಾಮಯ್ಯ ಒಬ್ಬ ಮೋಸಗಾರ, ಹೋಗಿ ಹುತ್ತ ಸೇರಿಕೊಂಡಿದ್ದಾರೆ : ಅಶೋಕ್ ವಾಗ್ದಾಳಿ

ಬೀದರ್ : ಸಿದ್ದರಾಮಯ್ಯ ಒಬ್ಬ ಮೋಸಗಾರ. ಪಕ್ಷ ಕಟ್ಟಿರುವುದು ಯಾರೋ? ಇವರು ಹೋಗಿ ಹುತ್ತ ಸೇರಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಅರ್. ಅಶೋಕ್ ವಾಗ್ದಾಳಿ ನಡೆಸಿದರು.

ಬೀದರ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸಬೇಕು ಅಂತ ನಾವೇನು ಪ್ರಯತ್ನ ಮಾಡ್ತಾ ಇಲ್ಲ. ಕಾಂಗ್ರೆಸ್‌ನಲ್ಲಿರುವ ಗುಂಪುಗಳೇ ಅದನ್ನ ಮಾಡ್ತಾ ಇವೆ. ಮಹದೇವಪ್ಪ, ಜಾರಕಿಹೊಳಿ, ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರ ಗುಂಪು ಇದೆ ಎಂದು ಕುಟುಕಿದರು.

ಡಾ.ಜಿ. ಪರಮೇಶ್ವರ್ ಅವರು ಒಮ್ಮೆಯೂ ಸಿಎಂ ಅಗಲಿಲ್ಲ. ಎಲ್ಲಾ ಪಾರ್ಟಿ ಮಾಡಿಕೊಂಡು ಈಗ ಕಾಂಗ್ರೆಸ್ ಸೇರಿದ್ದಾರೆ. ಸಿದ್ದರಾಮಯ್ಯ ಸುಳ್ಳು ಹೇಳಿಕೊಂಡೇ ಎಲ್ಲಾ ಅಧಿಕಾರ ನಡೆಸಿದ್ರು. ಸಿದ್ದರಾಮಯ್ಯ ಒಬ್ಬ ಸುಳ್ಳು ಸಿದ್ದರಾಮಯ್ಯ. ಗುಬ್ಬಿ ಶಾಸಕ ಶ್ರೀನಿವಾಸ್ ಅವರೇ ಹೇಳಿದ್ದಾರೆ. ಲೋಕಸಭೆಯಲ್ಲಿ 20ಕ್ಕಿಂತ ಕಡಿಮೆ ಸೀಟು ಬಂದ್ರೆ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡ್ತಾರೆ ಅಂತ ಅವರೇ ಹೇಳಿದ್ದಾರೆ ಎಂದು ಚಾಟಿ ಬೀಸಿದರು.

ಈಶ್ವರಪ್ಪ 100% ಬಿಜೆಪಿ ಜೊತೆ ಇರ್ತಾರೆ

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಬಂಡಾಯ ಸ್ಪರ್ಧೆ ಬಗ್ಗೆ ಮಾತನಾಡಿದ ಅವರು, ಈಶ್ವರಪ್ಪ ಒಬ್ಬ ಅಪ್ಪಟ ಬಿಜೆಪಿ ಕಾರ್ಯಕರ್ತ. ಈಶ್ವರಪ್ಪ 100% ಬಿಜೆಪಿ ಜೊತೆ ಇರ್ತಾರೆ, ಯಾವುದೇ ಭಿನ್ನಮತ ಇರಲ್ಲ. ಈಶ್ವರಪ್ಪ ಅವರು ಯಡಿಯೂರಪ್ಪ ಕೋಣೆಯಲ್ಲಿ ಕೂತುಕೊಂಡು ಮಾತನಾಡಿದ್ದಾರೆ. ಅವರೇ ಮಾತನಾಡಿ ಬಗೆಹರಿಸಿಕೊಳ್ತಾರೆ. ಎರಡ್ಮೂರು ದಿನಗಳಲ್ಲಿ ಶಿವಮೊಗ್ಗ ಅಸಮಾಧಾನ ಶಮನ ಮಾಡ್ತೇವೆ ಎಂದು ಹೇಳಿದರು.

ಸುಮಲತಾ ಭಿನ್ನಮತ ಖಂಡಿತ ಶಮನ ಆಗುತ್ತೆ

ಡಿ.ವಿ ಸದಾನಂದಗೌಡ ಅವರು ಯಡಿಯೂರಪ್ಪ ವಿರುದ್ಧ ಆರೋಪ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ವಿಚಾರ. ನಾಳೆ ಜನಾರ್ದನ ರೆಡ್ಡಿ ಬಿಜೆಪಿಗೆ ಸೇರ್ಪಡೆ ಆಗ್ತಾ ಇದ್ದಾರೆ. ಸುಮಲತಾ, ಕರಡಿ ಸಂಗಣ್ಣ ಇಬ್ಬರ ಜೊತೆ ಬೆಂಗಳೂರಿನಲ್ಲಿ ಮಾತನಾಡ್ತಿನಿ. ಸುಮಲತಾ ಚುನಾವಣೆಯಲ್ಲಿ ನಾನು ಪ್ರಚಾರದಲ್ಲಿ ಭಾಗಿಯಾಗಿದ್ದೆ. ನಾಳೆ ಕರಡಿ ಸಂಗಣ್ಣ ಹಾಗೂ ಸುಮಲತಾ ಭಿನ್ನಮತ ಖಂಡಿತ ಶಮನ ಆಗುತ್ತೆ ಎಂದು ಆರ್. ಅಶೋಕ್ ತಿಳಿಸಿದರು.

RELATED ARTICLES

Related Articles

TRENDING ARTICLES