Sunday, June 2, 2024

‘ಎದ್ದೇಳು ಮಂಜುನಾಥ’ ಅಂತ ಸುಪ್ರಭಾತ ಹಾಕಿದ್ರೂ, ಯಾರೂ ಧೈರ್ಯ ಮಾಡಲಿಲ್ಲ : ಅಶೋಕ್ ಲೇವಡಿ

ಬೀದರ್ : ಬಿಜೆಪಿ ವಿರುದ್ಧ ಸ್ಪರ್ಧೆ ಮಾಡಲು ಯಾವೊಬ್ಬ ಕಾಂಗ್ರೆಸ್​ ಸಚಿವರು ಧೈರ್ಯ ಮಾಡಲಿಲ್ಲ. ‘ಎದ್ದೇಳು ಮಂಜುನಾಥ’ ಅಂತ ಸುಪ್ರಭಾತ ಹಾಕಿದ್ರೂ, ಯಾರೂ ಧೈರ್ಯ ಮಾಡಲಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಜರಿದರು.

ಬೀದರ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಹಲವು ಕ್ಷೇತ್ರಗಳು ಬಾಕಿ ಇವೆ. ನಾಳೆ ನಾವು 28ಕ್ಕೆ 28 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಕ್ಲಿಯರ್ ಮಾಡ್ತೇವೆ ಎಂದರು.

ನಮ್ಮ ವಿರುದ್ಧ ಸ್ಪರ್ಧೆ ಮಾಡಲು ಯಾವೊಬ್ಬ ಸಚಿವರು ಮುಂದೆ ಬಂದಿಲ್ಲ. ಬೀದರ್‌ನಿಂದ ಚಾಮರಾಜನಗರದವರೆಗೆ ಯಾವೊಬ್ಬ ಮಂತ್ರಿಯೂ ಧೈರ್ಯ ಮಾಡಲಿಲ್ಲ. ಕೈ ಅಭ್ಯರ್ಥಿಗಳೆಲ್ಲರಿಗೂ ಸಚಿವ ಸ್ಥಾನದ ಟಾರ್ಗೆಟ್ ಕೊಟ್ಟಿದೆ. ಕಾಂಗ್ರೆಸ್ ಟಿಕೆಟ್‌ಗಳನ್ನ ಸಚಿವರ ಮನೆಯಲ್ಲಿ ಕೆಲಸ ಮಾಡೊರಿಗೆ ಕೊಟ್ಟಿದ್ದಾರೆ ಎಂದು ಕುಟುಕಿದರು.

ಸದಸ್ಯತ್ವ ಪಡೆಯದೇ ಇದ್ದೋರಿಗೆಲ್ಲ ಟಿಕೆಟ್ ನೀಡಿದ್ದಾರೆ

ಮನೆಯಲ್ಲಿ ಹೆಂಡತಿಯಾಗಿ, ಮಕ್ಕಳಾಗಿ, ಸಹೋದರರಾಗಿ, ಬಾಮೈದನಾಗಿ ಕೆಲಸ ಮಾಡಿದವರಿಗೆ ಟಿಕೆಟ್ ನೀಡಿದ್ದಾರೆ. ಒಂದೋ, ಎರಡೋ ಆದರೆ ಪರವಾಗಿಲ್ಲ. ಆದ್ರೆ, ಎಲ್ಲವನ್ನೂ ಕುಟುಂಬಕ್ಕೆ ನೀಡಿದ್ದಾರೆ. ಪ್ರಾಥಮಿಕ ಸದಸ್ಯತ್ವ ಪಡೆಯದೇ ಇದ್ದೋರಿಗೆಲ್ಲ ಟಿಕೆಟ್ ನೀಡಿದ್ದಾರೆ. ನಮ್ಮ ಪಕ್ಷದಲ್ಲಿ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಅಂತ ಕೈ ಕಾರ್ಯಕರ್ತರೇ ಹೇಳ್ತಿದ್ದಾರೆ ಎಂದು ಚಾಟಿ ಬೀಸಿದರು.

ಕೈನಲ್ಲಿ ಕ್ಯಾಪ್ಟನ್ ಆಗೋಕೆ ಯಾರೂ ಲಾಯಕ್ ಇಲ್ಲ

ಈಗ 400 ಸ್ಥಾನ ಟಾರ್ಗೆಟ್ ಕೊಟ್ಟಿದ್ದಾರೆ. ಟಾರ್ಗೆಟ್ ರೀಚ್ ಮಾಡಿದ ನಾಯಕ ಅಂದ್ರೆ ನರೇಂದ್ರ ಮೋದಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷ ಆಗೋಕು ಕಾಂಗ್ರೆಸ್​ಗೆ ಯೋಗ್ಯತೆ ಇರಲಿಲ್ಲ. ಈ ಬಾರಿ ಅದಕ್ಕಿಂತ ಹೀನಾಯ ಸ್ಥಿತಿಗೆ ಕಾಂಗ್ರೆಸ್ ಹೋಗುತ್ತೆ. ನಮ್ಮ‌ ನಾಯಕ ಯಾರು ಅಂತ ಘೋಷಣೆ ಮಾಡಿದ್ದೇವೆ. ಆದ್ರೆ, ಕಾಂಗ್ರೆಸ್‌ನಲ್ಲಿ ಯಾರೂ ನಾಯಕ ಇಲ್ಲ. ‘ಕೈ’ನಲ್ಲಿ ಕ್ಯಾಪ್ಟನ್ ಆಗೋಕೆ ಯಾರೂ ಲಾಯಕ್ ಇಲ್ಲ. ಇನ್ನು ಮೈದಾನದಲ್ಲಿ ಕಾಂಗ್ರೆಸ್‌ನವರು ಕ್ರಿಕೆಟ್ ಹೇಗೆ ಆಡ್ತಾರೆ? ಎಂದು ಅಶೊಕ್ ವ್ಯಂಗ್ಯವಾಡಿದರು.

RELATED ARTICLES

Related Articles

TRENDING ARTICLES