Saturday, May 4, 2024

ಮುಂಬೈಗೆ 169 ರನ್ ಟಾರ್ಗೆಟ್ : ಇಶಾನ್ ಕಿಶನ್ ಡಕೌಟ್‌

ಬೆಂಗಳೂರು : ಮುಂಬೈ ಇಂಡಿಯನ್ಸ್​ ವಿರುದ್ಧ ಗುಜರಾತ್ ಟೈಟಾನ್ಸ್ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ. ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್​ ಗಳಿಸಿದೆ.

ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಗುಜರಾತ್ ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕ ಆಟಗಾರರಾದ ನಾಯಕ ಶುಭ್​ಮನ್ ಗಿಲ್ ಹಾಗೂ ವೃದ್ಧಿಮಾನ್ ಸಹಾ 31 ರನ್​ ಜೊತೆಯಾಟ ನೀಡಿದರು.

ಸಹಾ 19 ರನ್​ ಗಳಿಸಿ ಔಟಾದರು. ಶುಭ್​ಮನ್ ಗಿಲ್ 31 ರನ್​ ಗಳಿಸಿ ನಿರಾಸೆ ಮೂಡಿಸಿದರು. ಸಂಕಷ್ಟದಲ್ಲಿದ್ದ ತಂಡಕ್ಕೆ ಸಾಯಿ ಸುದರ್ಶನ್​ (45) ಆಸರೆಯಾದರು. ಡೇವಿಡ್ ಮಿಲ್ಲರ್ 12, ಅಜ್ಮತುಲ್ಲಾ ಒಮರ್ಜಾಯ್ 17 ರನ್​ ಗಳಿಸಿ ಪೆವಿಲಿಯನ್ ಸೇರಿದರು. ರಾಹುಲ್ ತೆವಾಟಿಯಾ 22 ರನ್ ಕಾಣಿಕೆ ನೀಡಿದರು.

ವಿಜಯ್ ಶಂಕರ್ ಅಜೇಯ 6, ರಶೀದ್ ಖಾನ್ ಅಜೇಯ 4 ರನ್ ಗಳಿಸಿದರು. ಮುಂಬೈ ಇಂಡಿಯನ್ಸ್ ಪರ ಜಸ್ಪ್ರೀತ್ ಬುಮ್ರಾ 3, ಜೆರಾಲ್ಡ್ ಕೋಟ್ಜಿ 2, ಪಿಯೂಷ್ ಚಾವ್ಲಾ ಒಂದು ವಿಕೆಟ್ ಪಡೆದರು. ಮುಂಬೈ ಗೆಲ್ಲಲು 169 ರನ್​ ಗಳಿಸಬೇಕಿದೆ.

RELATED ARTICLES

Related Articles

TRENDING ARTICLES