Tuesday, May 14, 2024

4, 6, 4, 4, 6.. ಪಂಜಾಬ್​ಗೆ 175 ರನ್ ಟಾರ್ಗೆಟ್ ನೀಡಿದ ಡೆಲ್ಲಿ

ಬೆಂಗಳೂರು : 4, 6, 4, 4, 6.. ಅಂತಿಮ ಓವರ್​ನಲ್ಲಿ 25 ರನ್​ಗಳಿಸುವ ಮೂಲಕ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 175 ರನ್​ಗಳ ಸವಾಲಿನ ಮೊತ್ತ ಕಲೆಹಾಕಿದೆ.

ಮುಲ್ಲನ್‌ಪುರದ ಮಹಾರಾಜ ಯದ್ವೇಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಡೆಲ್ಲಿ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು.

ಇನ್ನಿಂಗ್ಸ್​ ಆರಂಭಿಸಿದ ಡೆಲ್ಲಿಗೆ ಉತ್ತಮ ಆರಂಭ ಸಿಗಲಿಲ್ಲ. ಮಿಚೆಲ್ ಮಾರ್ಷ್ 20 ರನ್ ಗಳಿಸಿ ಬೇಗ ನಿರ್ಗಮಿಸಿದರು. ಡೇವಿಡ್ ವಾರ್ನರ್ 29 ರನ್, ಹೋಪ್ 33 ರನ್, ನಾಯಕ ರಿಷಬ್ ಪಂತ್ 18 ಮತ್ತು ಸ್ಟಬ್ಸ್ 5ರನ್ ಗಳಿಸಲಷ್ಟೇ ಶಕ್ತರಾದರು.

ಸಂಕಷ್ಟದಲ್ಲಿದ್ದ ತಂಡಕ್ಕೆ ಅಕ್ಷರ್ ಪಟೇಲ್ ಹಾಗು ಇಂಪ್ಯಾಕ್ಟ್​ ಪ್ಲೇಯರ್​ ಅಭಿಷೇಕ್ ಪೊರೆಲ್ ಆಸರೆಯಾದರು. ಅಕ್ಷರ್ ಪಟೇಲ್ 13 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 21 ರನ್ ಬಾರಿಸಿದರು. ಅಭಿಷೇಕ್ ಪೊರೆಲ್ 10 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನೊಂದಿಗೆ 32 ರನ್​ ಸಿಡಿಸಿದರು.

ಅಭಿಷೇಕ್ ಪೊರೆಲ್ ಆರ್ಭಟ

ಹರ್ಷಲ್ ಪಟೇಲ್​ ಎಸೆದ ಅಂತಿಮ ಓವರ್​ನಲ್ಲಿ ಅಭಿಷೇಕ್ ಪೊರೆಲ್ 4, 6, 4, 4, 6 ಸಹಿತ 25 ರನ್ ಗಳಿಸಿ, ತಂಡದ ಮೊತ್ತ 170 ಗಡಿ ದಾಡಿಸಿದರು. ಪಂಜಾಬ್​ ಕಿಂಗ್ಸ್​ ಪರ ಹರ್ಷಲ್ ಪಟೇಲ್ ಹಾಗೂ ಅರ್ಶದೀಪ್ ತಲಾ 2, ರಬಾಡ, ಬ್ರಾರ್, ಚಹಾರ್ ತಲಾ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES