Sunday, May 12, 2024

ಕುಟುಂಬ ರಾಜಕಾರಣ ಬಗ್ಗೆ ಬಿ.ವೈ ವಿಜಯೇಂದ್ರ ಸ್ಪಷ್ಟನೆ

ಬೆಂಗಳೂರು: ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲಇದನ್ನು ಹೇಳಲು ಸಂಕೋಚವೂ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಯಾವುದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಬರಲು ಸಾಧ್ಯವಿಲ್ಲ. ಇದಕ್ಕೆ‌ ಮೋದಿ ಅವರ ಜನಪ್ರಿಯತೆ ಕಾರಣ.ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಎಲ್ಲಿಗೆ ಬಂದಿದೆ ಅಂದ್ರೆ ಚುನಾವಣೆಗೆ ಸಚಿವರನ್ನೇ ಕಣಕ್ಕಿಳಿಸಲು ನಿರ್ಧರಿಸಿದರು. ಈ ಮೂಲಕ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಕನಸು ಇತ್ತು.ಆದ್ರೆ,BJP ಅಲೆ ಇದೆ, ಸ್ಪರ್ಧಿಸಿದ್ರೆ ಸೋಲ್ತೇವೆಂದು ಸತ್ಯಾಂಶ ಗೊತ್ತಾಗಿದೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.

ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಸೇರಿ ನಮ್ಮ ಮೈತ್ರಿ ಅಭ್ಯರ್ಥಿಗಳನ್ನ ಗೆಲ್ಲಿಸ್ತೇವೆ.ಎಲ್ಲವೂ ಶಾಂತಿಯುತವಾಗಲಿದೆ. ಎಲ್ಲಾ ಸಮಸ್ಯೆ ಶಮನವಾಗಲಿದೆ, ತಿಳಿಯಾಗಲಿದೆ. ಎಲ್ಲಾ 28 ಕ್ಷೇತ್ರದಲ್ಲಿ ಮೋದಿ ಪರವಾದ ಅಲೆ ಇದೆ. ಕರ್ನಾಟಕದಲ್ಲಿ ಸುಭದ್ರವಾಗಿದೆ ಅಂತ ತಿಳಿಸಬೇಕಿದೆ. ನಮ್ಮ ಮುಂದೆ ಎರಡು ಗುರಿ ಇದೆ. ಲೋಕಸಭಾ ಚುನಾವಣೆಯಲ್ಲಿ ಎಲ್ಲೆಡೆ ವಿಜಯಪತಾಕೆ ಹಾರಿಸಬೇಕಿದೆ.

ನಾನು ಈ ಹಿಂದೆ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧಾರ ಮಾಡಿದ್ದೆ.ಆಗ ಚುನಾವಣೆಯಲ್ಲಿ ನನ್ನ ಸ್ಪರ್ಧೆಗೆ ಹೈಕಮಾಂಡ್ ಒಪ್ಪಲಿಲ್ಲ. ಬೊಮ್ಮಾಯಿ ಸಿಎಂ‌ ಆಗಿದ್ದಾಗ ಎಂಎಲ್​ಸಿ ಮಾಡಲು ತೀರ್ಮಾನ ಮಾಡಿದ್ರು. ನನ್ನನ್ನು ಎಂಎಲ್​ಸಿ ಮಾಡಲು ಕೋರ್ ಕಮಿಟಿ ತೀರ್ಮಾನಿಸಿತ್ತು. ಆದರೆ, ಅದಕ್ಕೂ ನಮ್ಮ ಹೈಕಮಾಂಡ್ ಒಪ್ಪಲಿಲ್ಲ. ನಮ್ಮ ಪಕ್ಷದ ತೀರ್ಮಾನವೆಂದು ನಾನು ಆಗಲೂ ಒಪ್ಪಿಕೊಂಡೆ. ಜೆ.ಪಿ.ನಡ್ಡಾರವರು ವಿಜಯೇಂದ್ರ ಆಯ್ಕೆ ಏಕೆ ಅಂತಾ ತಿಳಿಸಿದ್ದಾರೆ ಎಂದರು.

RELATED ARTICLES

Related Articles

TRENDING ARTICLES