Friday, May 17, 2024

ಸೋಮವಾರದಿಂದಲೇ 5,8,9ನೇ ತರಗತಿ ಪಬ್ಲಿಕ್ ಪರೀಕ್ಷೆ : ಇಲ್ಲಿದೆ ವೇಳಾಪಟ್ಟಿ

ಬೆಂಗಳೂರು : 5,8,9ನೇ ತರಗತಿಯ ಬಾಕಿ ಉಳಿದಿರುವ ಪಬ್ಲಿಕ್ (ಮೌಲ್ಯಾಂಕನ ಪರೀಕ್ಷೆ) ಪರೀಕ್ಷೆಗಳು ಸೋಮವಾರದಿಂದಲೇ (ಮಾರ್ಚ್ 25) ನಡೆಯಲಿವೆ. ಈ ಬಗ್ಗೆ ನ್ಯಾಯಾಲಯಕ್ಕೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

5,8,9ನೇ ತರಗತಿ ಪಬ್ಲಿಕ್ ಪರೀಕ್ಷೆ ನಡೆಸಲು ಹೈಕೋರ್ಟ್ ಗ್ರೀನ್ ಸಿಗ್ನಲ್ ಹಿನ್ನಲೆ, ಉಳಿದ ವಿಷಯಗಳ ಪರೀಕ್ಷೆಗೆ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟ ಮಾಡಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಇಲ್ಲದ ದಿನ ಮಾತ್ರ ಬೆಳಗ್ಗೆ ಪರೀಕ್ಷೆ ನಡೆಯಲಿದೆ. ಉಳಿದ ದಿನ ಮಧ್ಯಾಹ್ನದ ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ.

ಈಗಾಗಲೇ 5ನೇ ತರಗತಿಗೆ 4 ವಿಷಯಗಳ ಪರೀಕ್ಷೆ ಮುಗಿದಿದೆ. 8 ಹಾಗೂ 9ನೇ ತರಗತಿಗಳಿಗೆ ಎರಡೆರಡು ವಿಷಯಗಳ ಪರೀಕ್ಷೆ ಮುಗಿದಿವೆ. 11ನೇ ತರಗತಿಯ ಪರೀಕ್ಷೆಗಳೆಲ್ಲ ಮುಕ್ತಾಯವಾಗಿದ್ದು, ಫಲಿತಾಂಶ ಮಾತ್ರ ಬಾಕಿಯಿದೆ.

ಇಲ್ಲಿದೆ ಪರೀಕ್ಷಾ ವೇಳಾಪಟ್ಟಿ

5ನೇ ತರಗತಿ ವೇಳಾಪಟ್ಟಿ

  • ಮಾರ್ಚ್ 25 : ಪರಿಸರ ಅಧ್ಯಯನ
  • ಮಾರ್ಚ್ 26 : ಗಣಿತ

8ನೇ ತರಗತಿ ವೇಳಾಪಟ್ಟಿ

  • ಮಾರ್ಚ್ 25 : ತೃತೀಯ ಭಾಷೆ
  • ಮಾರ್ಚ್ 26 : ಗಣಿತ
  • ಮಾರ್ಚ್ 27 : ವಿಜ್ಞಾನ
  • ಮಾರ್ಚ್ 28 : ಸಮಾಜ ವಿಜ್ಞಾನ

9ನೇ ತರಗತಿ ವೇಳಾಪಟ್ಟಿ

  • ಮಾರ್ಚ್ 25 : ತೃತೀಯ ಭಾಷೆ
  • ಮಾರ್ಚ್ 26 : ಗಣಿತ
  • ಮಾರ್ಚ್ 27 : ವಿಜ್ಞಾನ
  • ಮಾರ್ಚ್ 28 : ಸಮಾಜ ವಿಜ್ಞಾನ

ವಿಶೇಷ ಸೂಚನೆ

  • ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುವ ದಿನ ಮಧ್ಯಾಹ್ನ 2.30 ಗಂಟೆಗೆ ಪರೀಕ್ಷೆ
  • ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಲ್ಲದ ದಿನ ಬೆಳ್ಳಗೆ 10 ಗಂಟೆಗೆ ಪರೀಕ್ಷೆ

RELATED ARTICLES

Related Articles

TRENDING ARTICLES