Saturday, May 4, 2024

ದ್ವೇಷದ ಹೇಳಿಕೆ: ಸಿ.ಟಿ.ರವಿ ವಿರುದ್ಧ FIR ದಾಖಲು

ಚಿಕ್ಕಮಗಳೂರು: ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ದ್ವೇಷದ ಹೇಳಿಕೆ ಪ್ರಕಟಿಸಿದ ಆರೋಪದಲ್ಲಿ ಬಿಜೆಪಿ ಮುಖಂಡ ಸಿಟಿ.ರವಿ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ FIR ದಾಖಲಾಗಿದೆ.

ಚುನಾವಣಾ ಆಯೋಗದ ಸಾಮಾಜಿಕ ಜಾಲತಾಣ ಮೇಲ್ವಿಚಾರಣಾ ಸಮಿತಿಯ ನೋಡಲ್ ಅಧಿಕಾರಿಯ ಸೂಚನೆ ಮೇರೆಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಕೆ.ಜಯಲಕ್ಷ್ಮಮ್ಮ ನಗರ ಠಾಣೆಗೆ ದೂರು ನೀಡಿ FIR ದಾಖಲಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಬ್ಯಾಂಕ್‌ ಖಾತೆಗಳು ಸೀಜ್ : ಬಿಜೆಪಿ ವಿರುದ್ದ ಸೋನಿಯಾ ಗಾಂಧಿ ಕಿಡಿ

ಸಿ.ಟಿ.ರವಿ ತಮ್ಮ ಎಕ್ಸ್ ಖಾತೆಯಲ್ಲಿ ‘ಸಾಗರಗಳ ಆಳವನ್ನು ಅಳೆಯಬಹುದು. ಹಿಂದೂ ಮತ್ತು ಹಿಂದೂ ಧರ್ಮದ ವಿರುದ್ಧ ರಾಹುಲ್ ಗಾಂಧಿ ದ್ವೇಷವನ್ನು ಎಂದಿಗೂ ಕಂಡು ಹಿಡಿಯಲಾಗುವುದಿಲ್ಲ. ಹಿಂದೂ ಧರ್ಮದಲ್ಲಿ ಶಕ್ತಿ ಎಂಬ ಪದವಿದೆ, ನಮ್ಮ ಹೋರಾಟ ಶಕ್ತಿ ವಿರುದ್ಧ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ದುಷ್ಟ ಶಕ್ತಿಗಳ ದಾಳಿಯಿಂದ ನಮ್ಮ ಧರ್ಮವನ್ನು ರಕ್ಷಿಸಲು ಹಿಂದೂಗಳು ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ನಿರ್ದಯವಾಗಿ ತೆಗೆದು ಹಾಕಬೇಕು’ ಎಂದು ಪೋಸ್ಟ್ ಹಾಕಿದ್ದರು.

RELATED ARTICLES

Related Articles

TRENDING ARTICLES