Friday, May 3, 2024

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅರೆಸ್ಟ್ : 9 ಬಾರಿ ವಿಚಾರಣೆಗೆ ಗೈರು, ಏನಿದು ಮದ್ಯದ ಹಗರಣ?

ನವದೆಹಲಿ : ಮದ್ಯ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

ದೆಹಲಿಯ ನಿವಾಸದಲ್ಲಿ ಕೇಜ್ರಿವಾಲ್ ಅವರನ್ನು ಇಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಈ ಪ್ರಕರಣದಲ್ಲಿ ಮಾರ್ಚ್ 15ರಂದು ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಪುತ್ರಿ, ಎಂಎಲ್​ಸಿ ಕವಿತಾ ಅವರನ್ನು ಅರೆಸ್ಟ್ ಮಾಡಲಾಗಿತ್ತು.

ಇದಕ್ಕೂ ಮುನ್ನ ಈ ಪ್ರಕರಣದಲ್ಲಿ ಇಡಿ ಬಂಧನದಿಂದ ವಿನಾಯಿತಿ ನೀಡುವಂತೆ ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.

ಏನಿದು ಮದ್ಯದ ಹಗರಣ?

ಎಎಪಿ ಸರ್ಕಾರವು 2021ರಲ್ಲಿ ಹೊಸ ಮಧ್ಯ ನೀತಿಯನ್ನು ಜಾರಿಗೆ ತಂದಿತ್ತು. ದೆಹಲಿ ಸರ್ಕಾರದ ಅವಧಿಯಲ್ಲಿ ನಡೆಸಲಾಗಿದ್ದ ಮದ್ಯ ಮಾರಾಟವನ್ನು ಖಾಸಗಿ ಕಂಪನಿಗಳಿಗೆ ವಹಿಸಿ ಈ ನೀತಿಯನ್ನು ರಚಿಸಲಾಗಿತ್ತು. 2022ರಲ್ಲಿ ಬಂದ ನೂತನ ಮುಖ್ಯ ಕಾರ್ಯದರ್ಶಿ ಹಗರಣ ನಡೆದಿದೆ ಎಂದು ವರದಿಯನ್ನು ಲೆಫ್ಟಿನೆಂಟ್ ಗವರ್ನರ್​ಗೆ ಹಸ್ತಾಂತರಿಸಿದ್ದರು. ಬಳಿಕ ಅವರು ಸಿಬಿಐ ತನಿಖೆಗೆ ಆದೇಶಿಸಿದ್ದರು.

9 ಬಾರಿ ವಿಚಾರಣೆಗೆ ಗೈರು

ದೆಹಲಿ ಮದ್ಯ ಹಗರಣದಲ್ಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಮತ್ತು ಸಂಸದ ಸಂಜಯ್ ಸಿಂಗ್ ಈಗಾಗಲೇ ಜೈಲಿನಲ್ಲಿದ್ದಾರೆ. ಕಳೆದ ವರ್ಷ ಈ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್​ ಅವರನ್ನು ಸಿಬಿಐ ವಿಚಾರಣೆ ನಡೆಸಿತ್ತು. ಇಡಿ ದಾಖಲಿಸಿರುವ ಪ್ರಕರಣದಲ್ಲಿ ಸತತವಾಗಿ ಸಮನ್ಸ್​ಗಳು ನೀಡಲಾಗಿತ್ತು. 9 ಬಾರಿ ಸಮನ್ಸ್​ ನೀಡಿದರೂ ಅರವಿಂದ್ ಕೇಜ್ರೀವಾಲ್ ಮಾತ್ರ ವಿಚಾರಣೆಗೆ ಹಾಜರಾಗಿರಲಿಲ್ಲ.

RELATED ARTICLES

Related Articles

TRENDING ARTICLES