Tuesday, May 21, 2024

ನನ್ನ ಹೆಸರು ವಿರಾಟ್ ಕೊಹ್ಲಿಗೆ ಗೊತ್ತು : ಶ್ರೇಯಾಂಕಾ ಟ್ವೀಟ್

ಬೆಂಗಳೂರು : ಆರ್​ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಭೇಟಿ ಬಳಿಕ ಅವರ ಜೊತೆ ಕಳೆದ ಕ್ಷಣಗಳ ಬಗ್ಗೆ ಕನ್ನಡತಿ ಶ್ರೇಯಾಂಕಾ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಶ್ರೇಯಾಂಕಾ, ವಿರಾಟ್ ಕೊಹ್ಲಿ ಅವರಿಂದ ನಾನು ಕ್ರಿಕೆಟ್ ನೋಡಲು ಆರಂಭಿಸಿದೆ. ನಾನು ಈಗಲೂ ವಿರಾಟ್ ಕೊಹ್ಲಿ ಅವರ ಮಹಿಳಾ ಅಭಿಮಾನಿ ಹಾಗೂ ಅವರು ನನ್ನ ರೋಲ್ ಮಾಡೆಲ್ ಎಂದು ಹೇಳಿದ್ದಾರೆ.

ನಾನು ವಿರಾಟ್ ಕೊಹ್ಲಿ ಅವರಂತೆ ಕ್ರಿಕೆಟರ್​ ಆಗಬೇಕು ಎಂದು ಕನದು ಕಾಣುತ್ತಾ ಬೆಳೆದೆ. ನಿನ್ನೆ ರಾತ್ರಿ ಅವರನ್ನು ಭೇಟಿಯಾದ ಕ್ಷಣ ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿಗೆ ನನ್ನ ಹೆಸರು ಗೊತ್ತು

ವಿರಾಟ್ ಕೊಹ್ಲಿ ಅವರು, ಹಾಯ್ ಶ್ರೇಯಾಂಕಾ ಎಂದು ಮಾತನಾಡಿಸಿದರು. ನೀವು ಉತ್ತಮವಾಗಿ ಬೌಲಿಂಗ್ ಮಾಡಿದ್ದೀರಿ ಎಂದು ಹೊಗಳಿದರು. ವಾಸ್ತವವಾಗಿ ವಿರಾಟ್ ಕೊಹ್ಲಿ ಅವರಿಗೆ ನನ್ನ ಹೆಸರು ಗೊತ್ತು ಎಂದು ಶ್ರೇಯಾಂಕಾ ಪಾಟೀಲ್ ಪೋಸ್ಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES