Saturday, May 4, 2024

ಮೋದಿ ವಿರುದ್ಧ ನಿಲ್ಲೋಕೆ ನಮಗ್ಯಾಕೆ ಭಯ? : ಹೆಚ್.ಕೆ. ಪಾಟೀಲ್

ಹಾವೇರಿ : ಪ್ರಧಾನಿ ಮೋದಿ ವಿರುದ್ಧ ನಿಲ್ಲಲು ಕಾಂಗ್ರೆಸ್ ನಾಯಕರು ಹಿಂದೇಟು ಹಾಕ್ತಿದ್ದಾರೆ ಎಂಬ ಬಿಜೆಪಿಗರ ಹೇಳಿಕೆಗೆ ಸಚಿವ ಹೆಚ್​.ಕೆ. ಪಾಟೀಲ್ ತಿರುಗೇಟು ನೀಡಿದರು.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ವಿರುದ್ಧ ನಿಲೋಕೆ ನಾವು ಹಿಂದೇಟು ಹಾಕ್ತಿಲ್ಲ. ನಮ್ಮ ವಿರುದ್ಧ ನಿಲ್ಲೋಕೆ ಬಿಜೆಪಿಯವರು ಹಿಂದೇಟು ಹಾಕ್ತಿದ್ದಾರೆ ಎಂದು ಕಟುಕಿದರು.

ಶಿವಮೊಗ್ಗ, ಕೊಪ್ಪಳ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ನಾಯಕರ ಅಸಮಾಧಾನ ಹೆಚ್ಚಾಗಿದೆ. ಬಿಜೆಪಿಯವರು ಹತಾಶಭಾವದಿಂದ ಹೀಗೆ ಹೇಳ್ತಾರೆ. 1.10 ಕೋಟಿ ಕುಟುಂಬಗಳು ಬಡತನ ರೇಖೆಯಿಂದ ಅಭಿವೃದ್ಧಿ ಆಗಿದೆ. ಬಡವವರ ಬದುಕು ಮತ್ತು ಭಾವನಗಳ ಜೊತೆ ಬಿಜೆಪಿ ಚುನಾವಣೆ ಮಾಡ್ತಿದೆ. ಬದುಕು ಹಾಗೂ ಭಾವನೆ ಜೊತೆ ಬಿಜೆಪಿ ಆಡಳಿತ ಮಾಡ್ತಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಡವರ ಬದುಕು ಗೆಲ್ಲುತ್ತದೆ ಎಂದು ಹೇಳಿದರು.

ನಾವು 18 ರಿಂದ 20 ಸೀಟು ಗೆಲ್ಲುತ್ತೇವೆ

ಹಾವೇರಿ ಲೋಕಸಭೆ ಮತಕ್ಷೇತ್ರದ ಮೊದಲ ಜಿಲ್ಲಾ ಕಾಂಗ್ರೆಸ್ ಸಭೆ ನಡೆಯುತ್ತಿದೆ. ಪ್ರಚಾರದ ಶೈಲಿ ಬಗ್ಗೆ ನಾಯಕರ ಜೊತೆ ಮಾತನಾಡಿ ರೂಪುರೇಷೆ ಮಾಡ್ತೇವೆ. ಹಾವೇರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಅಂತಿಮವಾಗಿದೆ. ಸರ್ವಾನು ಮತದಿಂದ ಆನಂದಗಡ್ಡದೇವರಮಠ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಯುವಕ ನಾಯಕ ಕಣಕ್ಕೆ ಇಳಿದ ಕಾರಣ ಯುವಕರಲ್ಲಿ ಹುಮ್ಮಸು ಹೆಚ್ಚಾಗಿದೆ. ರಾಜ್ಯದಲ್ಲಿ ನಾವು ಈ ಬಾರಿ 18 ರಿಂದ 20 ಸೀಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹನುಮಾನ್ ಚಾಲಿಸ್ ಮಾಧ್ಯಮ ಸೃಷ್ಟಿ

ಹನುಮಾನ್ ಚಾಲಿಸ್ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಅದು ಮಾಧ್ಯಮ ಸೃಷ್ಟಿಯಾಗಿದೆ ಎಂದು ಮಾಧ್ಯಮದವರ ಮೇಲೆಯೇ ಹೆಚ್.ಕೆ ಪಾಟೀಲ್ ಗೂಬೆ ಕೂರಿಸಿದರು.

RELATED ARTICLES

Related Articles

TRENDING ARTICLES