Saturday, June 1, 2024

‘ಕೈ’ ಸಿಇಸಿ ಸಭೆ ಅಂತ್ಯ : ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಬಹುತೇಕ ಫೈನಲ್, ಇಲ್ಲಿದೆ ಅಂತಿಮ ಪಟ್ಟಿ

ಬೆಂಗಳೂರು : ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಸಿಇಸಿ ಸಭೆಯಲ್ಲಿ ಕರ್ನಾಟಕದ ಚರ್ಚೆ ಅಂತ್ಯವಾಗಿದೆ. ಈ ಸಭೆಯಲ್ಲಿ ರಾಜ್ಯ ಅಭ್ಯರ್ಥಿಗಳ ಹೆಸರು ಬಹುತೇಕ ಫೈನಲ್ ಆಗಿದೆ.

2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. 39 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕರ್ನಾಟಕದ 7 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿತ್ತು.

ಬೆಂಗಳೂರು ಗ್ರಾಮಾಂತರ, ತುಮಕೂರು, ವಿಜಯಪುರ, ಶಿವಮೊಗ್ಗ, ಹಾಸನ ಹಾಗೂ ಮಂಡ್ಯ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿತ್ತು. ಇದೀಗ ಕರ್ನಾಟಕದ ಎರಡನೇ ಪಟ್ಟಿ ಬಹುತೇಕ ಫೈನಲ್ ಆಗಿದೆ. ಪವರ್ ಟಿವಿಗೆ ಎಐಸಿಸಿ ಉನ್ನತ ಮೂಲಗಳಿಂದ ಸಂಭಾವ್ಯರ ಪಟ್ಟಿ ಲಭ್ಯವಾಗಿದೆ.

ಯಾರು? ಎಲ್ಲಿಂದ? ಸ್ಪರ್ಧೆ

  • ಚಿತ್ರದುರ್ಗ : ಬಿ.ಎನ್. ಚಂದ್ರಪ್ಪ
  • ಬೆಳಗಾವಿ : ಮೃನಾಲ್ ಹೆಬ್ಬಾಳ್ಕರ್
  • ಚಿಕ್ಕೋಡಿ : ಪ್ರಿಯಾಂಕಾ ಜಾರಕಿಹೊಳಿ
  • ಬಾಗಲಕೋಟೆ : ಸಂಯುಕ್ತ ಶಿವಾನಂದ ಪಾಟೀಲ್
  • ಹುಬ್ಬಳ್ಳಿ ಧಾರವಾಡ : ವಿನೋದ್ ಅಸೂಟಿ
  • ದಾವಣಗೆರೆ : ಡಾ. ಪ್ರಭಾ ಮಲ್ಲಿಕಾರ್ಜುನ್
  • ಕೊಪ್ಪಳ : ರಾಜಶೇಖರ್ ಹಿಟ್ನಾಳ್
  • ಕಲ್ಬುರ್ಗಿ : ರಾಧಾಕೃಷ್ಣ ದೊಡ್ಡಮನಿ
  • ಬೀದರ್ : ರಾಜಶೇಖರ್ ಪಾಟೀಲ್
  • ದಕ್ಷಿಣ ಕನ್ನಡ : ಪದ್ಮ ರಾಜ್
  • ಉಡಪಿ : ಜಯಪ್ರಕಾಶ್ ಹೆಗಡೆ
  • ಬೆಂಗಳೂರು ದಕ್ಷಿಣ : ಸೌಮ್ಯರೆಡ್ಡಿ

ಪೆಂಡಿಂಗ್ ಇರುವ ಕ್ಷೇತ್ರಗಳು 

  • ಬಳ್ಳಾರಿ
  • ಚಾಮರಾಜನಗರ
  • ಚಿಕ್ಕಬಳ್ಳಾಪುರ
  • ಕೋಲಾರ

ಈ ಸುದ್ದಿ ಓದಿದ್ದೀರಾ? : ಲೋಕಸಭಾ ಚುನಾವಣೆ: ಮಾ.19 ರಂದು ಕಾಂಗ್ರೆಸ್​​ ನ 2ನೇ ಪಟ್ಟಿ ರಿಲೀಸ್

ಮೊದಲ ಪಟ್ಟಿಯಲ್ಲಿ ಟಿಕೆಟ್ ಪಡೆದವರು

  • ಬೆಂಗಳೂರು ಗ್ರಾಮಾಂತರ : ಡಿ.ಕೆ. ಸುರೇಶ್
  • ಶಿವಮೊಗ್ಗ : ಗೀತಾ ಶಿವರಾಜ್ ಕುಮಾರ್
  • ತುಮಕೂರು : ಎಸ್‌.ಪಿ. ಮುದ್ದಹನುಮೇಗೌಡ
  • ಹಾಸನ : ಎಂ. ಶ್ರೇಯಸ್ ಪಟೇಲ್
  • ವಿಜಯಪುರ : ರಾಜು ಅಲಗೂರ್ (ಎಚ್‌.ಆರ್. ಅಲಗೂರ್)
  • ಮಂಡ್ಯ : ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
  • ಹಾವೇರಿ : ಅನಂತಸ್ವಾಮಿ ಗಡ್ಡೇವರಮಠ

RELATED ARTICLES

Related Articles

TRENDING ARTICLES