Monday, May 20, 2024

ನಿಮ್ಮನ್ನು ಕೈ ಬಿಡಲ್ಲ ಎಂದು ಹೈಕಮಾಂಡ್​ ಹೇಳಿದೆ: ಸುಮಲತಾ ಅಂಬರೀಶ್

ನವದೆಹಲಿ: ನಿಮ್ಮನ್ನು ಕೈ ಬಿಡಲ್ಲ ಎಂದು ಸ್ವತಃ ಪ್ರಧಾನಿಯವರೇ ಹೇಳಿದ್ದಾರೆ ಅಂತಾ ಜೆ.ಪಿ ನಡ್ಡಾ ಹೇಳಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. 

ಜೆ.ಪಿ. ನಡ್ಡಾ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುದೀರ್ಘವಾದ ಚರ್ಚೆಯಲ್ಲಿ ನನ್ನ ಸಲಹೆಗಳನ್ನು ನಾನು ಕೊಟ್ಟಿದ್ದೇನೆ. ಅವರು ಕೂಡ ಸಲಹೆ ನೀಡಿದ್ದಾರೆ.ಮೈತ್ರಿ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ ಅಂತಾ ಹೇಳಿದ್ಧಾರೆ.ನಿಮ್ಮ ಬಗ್ಗ ಪಕ್ಷದ ಹೈ ಕಮಾಂಡ್ ಗೆ ಗೌರವ ಇದೆ ಅಂತಾ ಹೇಳಿದ್ದಾರೆ.ಯಾವುದೇ ಕಾರಣಕ್ಕೂ ಕಾರ್ಯಕರ್ತರನ್ನು ಬಿಟ್ಟು ಕೊಡುವುದಿಲ್ಲ ಎಂದು ಸ್ವತಃ ಪ್ರಧಾನಿಯವರೇ ಹೇಳಿದ್ದಾರೆ ಅಂತಾ ನಡ್ಡಾ ಹೇಳಿದ್ದಾರೆ ಎಂದರು.

ಮಂಡ್ಯದಲ್ಲಿ ಯಾರು ಸ್ಪರ್ಧೆ ಮಾಡ್ತಾರೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ನಾನು ಅನ್ನುವುದಕ್ಕಿಂದ ಬಿಜೆಪಿ ಪಕ್ಷ ಮುಖ್ಯ ಮಂಡ್ಯವನ್ನು ಬಿಜೆಪಿ ಉಳಿಸಿಕೊಂಡ್ರೆ ಬೇಸ್ ಮಾಡಬಹುದು.ಮೊದಲ ಸಂಸದೆಯಾಗಿ ಸ್ಪರ್ಧೆ ಮಾಡಬಹುದು ಎಂಬ ನಿರೀಕ್ಷೆಯಿದೆ.ಕ್ಷೇತ್ರ ಬದಲಾವಣೆ ಬಗ್ಗೆ ಯಾವುದು ಸತ್ಯ ಅಲ್ಲಕಳೆದ ಬಾರಿ ಸ್ಪರ್ಧೆ ಮಾಡಿದ್ದು ನನ್ನ ಸ್ವಂತ ನಿರ್ಧಾರ ಆಗಿರಲಿಲ್ಲ.ಕಳೆದ ಸಲ ಅಂಬರೀಶ್ ಅಭಿಮಾನಿಗಳ ಒಪ್ಪಿಗೆ ಮೇರೆಗೆ ನಾನು ಸ್ಪರ್ಧೆ ಮಾಡಿದ್ದೇಕಳೆದ ಸಲ ಬಿಜೆಪಿಗೆ ಬಾಹ್ಯ ಬೆಂಬಲ ಕೊಟ್ಟಿದ್ದು ಕೂಡ ಬೆಂಬಲಿಗರ ಸಲಹೆ ಮೇರೆಗೆ ಎಂದರು.

ಬಿಜೆಪಿಗೆ ಸುಮಲತಾ ಸೇರುವ ವಿಚಾರವಾಗಿ ಮಾತನಾಡಿದ ಅವರು ಪಕ್ಷಕ್ಕೆ ಸೇರಲೇಬೇಕು, ಸಂಸತ್ ಅವದಿ ಬಳಿಕನಾ ಹೇಗೆ ಅಂತಾ ಪಕ್ಷ ನಿರ್ಧಾರ ಮಾಡುತ್ತೆ ಎಂದರು.

ಮಂಡ್ಯ ಅನ್ನೋದು ಇಬ್ಬರಿಗೂ ಸವಾಲಾಗಿತ್ತು ಹಾಗಾಗಿ, ಅವರು ಕೂಡ ಬಿಟ್ಟು ಕೊಡಲು ಒಪ್ಪಿಲ್ಲ.ಜೆಡಿಎಸ್ ಗೆ ಬೆಂಬಲ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಹೈ ಕಮಾಂಡ್ ಕರೆ ಹಿನ್ನೆಲೆ ದೆಹಲಿಗೆ ಬಂದಿದ್ದೇನೆ ಮುಂದಿನ ದಿನಗಳಲ್ಲಿ ಪಕ್ಷ ಹೇಗೆ ನಡೆಸಿಕೊಳ್ಳುತ್ತೆ ಅನ್ನೊದು ಮುಖ್ಯ ನಂತರ ಬೆಂಬಲಿಗರ ಸಭೆ ಮಾಡಿ ನಿರ್ಧಾರ ಮಾಡ್ತೇನೆ ಅಮಿತ್ ಶಾ ಭೇಟಿಗೂ ಕೂಡ ಪ್ರಧಾನಿ ಕಚೇರಿಯಿಂದ ಸೂಚಿಸಿದ್ದಾರೆ.ಅಮಿತ್ ಶಾ ಸಮಯ ಕೇಳಿದ್ದೇನೆ ,ನಾಳೆಯೊಳಗೆ ಭೇಟಿಯಾಗಬಹುದು ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES