Sunday, May 12, 2024

ರಾಮ ಏನು ಅವರೊಬ್ಬರ ಆಸ್ತಿನಾ? : ಸಿದ್ದರಾಮಯ್ಯ

ಬೆಂಗಳೂರು : ರಾಮನ‌ ಹೆಸರಲ್ಲಿ ಮತ್ತು ಮೊದಿ ಹೆಸರಲ್ಲಿ ಚುನಾವಣೆ ಎದುರಿಸ್ತೇವೆ ಎಂಬ ಬಿಜೆಪಿಗರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಏನು ಅವರೊಬ್ಬರ ಆಸ್ತಿನಾ? ಸೀತಾ ರಾಮ್ ನಮಗೂ ದೇವರೇ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ‌ ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ರಾಜ್ಯಕ್ಕೆ ಬಂದಿದ್ರು. ಆಗ ಏನಾಯ್ತು ? ನಾವು 136 ಸೀಟು ಗೆದ್ದೆವು. ಪ್ರಧಾನಿ ಮೋದಿ ಎಲ್ಲಿ ಕ್ಯಾಂಪೇನ್ ಮಾಡಿದ್ರೋ, ಅಲ್ಲಿ ಹೆಚ್ಚಿನ ಅಂತರದಲ್ಲಿ ನಮ್ಮ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ಕುಟುಕಿದರು.

ಪ್ರಧಾನಿ ಮೋದಿ ಸುಳ್ಳು ಹೇಳ್ತಾ ಇದ್ದಾರೆ

40 ಪರ್ಸೆಂಟ್ ಆರೋಪ ಯಾರ ಮೇಲೆ ಮಾಡಿದ್ದು? ನನ್ನ ಮೇಲೆ ಆರೋಪ ಮಾಡೋದಾದ್ರೆ ನಾಗಮೋಹನ್ ದಾಸ್ ಕಮಿಟಿಗೆ ಹೊಗಿ ಕೊಡಿ. ನೀವು ಕಮಿಷನ್ ಮಾಡಿದ್ರಾ ಹಾಗಾದ್ರೆ? ಯಾವ ಆಧಾರದ ಮೇಲೆ ಆರೋಪ ಮಾಡ್ತಾರೆ? ನರೇಂದ್ರ ಮೋದಿ ಸುಳ್ಳು ಹೇಳ್ತಾ ಇದ್ದಾರೆ ಎಂದು ಚಾಟಿ ಬೀಸಿದರು.

ಬರಗಾಲದಲ್ಲಿ ಬರಲಿಲ್ಲ, ಈಗ ಬಂದಿದ್ದಾರೆ

ಕಾನೂನು ಸುವ್ಯವ್ಯಸ್ಥೆ ಎಲ್ಲಿ ಹದಗೆಟ್ಟಿದೆ? ಇದು ಚೆನ್ನಾಗಿ ಇರೋದಕ್ಕೆನೇ ಜನ ಸುಭಿಕ್ಷವಾಗಿ ಇರೋದು. ಹಣ ಇಲ್ಲದೆ ಒಂದು ಲಕ್ಷ ಬಜೆಟ್ ಮಂಡಣೆ ಮಾಡಿರೋದಾ..? ಬರಗಾಲದಲ್ಲಿ ಬರಲಿಲ್ಲ ಇವರು, ಈಗ ಬಂದಿದ್ದಾರೆ. ಐದು ತಿಂಗಳಾದ್ರೂ ಒಂದು ರೂಪಾಯಿ ಕೊಟ್ರಾ? ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡಿ, ನ್ಯಾಯಯುತ ಪಾಲನ್ನ ಕೊಟ್ಟಿಲ್ಲ ಇವರು. ಇವರಿಗೆ ಯಾವ ನೈತಿಕತೆ ಇದೆ, ದುಡ್ಡಿಲ್ಲ ಅಂತ ಹೇಳೋಕೆ? ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES