Monday, May 13, 2024

ರಾಜ್​ಕುಮಾರ್​ಗೂ ರಾಜಕೀಯ ಬೇಕಾಗಿತ್ತು : ಶಿವಣ್ಣ

ಬೆಂಗಳೂರು : ನಮ್ಮ ತಂದೆ ರಾಜ್​ಕುಮಾರ್ ಅವರಿಗೂ ರಾಜಕೀಯ ಪಾಲಿಟಿಕ್ಸ್ ಬೇಕಾಗಿತ್ತು ಎಂದು ಶಿವರಾಜ್​ಕುಮಾರ್ ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಸಿಎಂಗಳು ಮನೆಗೆ ಬರುತ್ತಿದ್ರು. ಅವರು ರಾಜಕೀಯ ತಪ್ಪು ಅಂತ ಹೇಳಲಿಲ್ಲ ಎಂದು ಹೇಳಿದರು.

ನಾನು ಬೇರೆ, ಗೀತಾ ಬೇರೆ. ಗೀತಾಗೆ ಒಂದು ಜವಾಬ್ದಾರಿ ಇದೆ. ರಾಜಕೀಯದಲ್ಲಿ ಹೆಂಗಸರು ಕಡಿಮೆ ಇದ್ದಾರೆ. ನಾನು ಯಾವಾಗಲೂ ಗೀತಾ ಜೊತೆಗೇ ಇರುತ್ತೇನೆ. ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು ಎಂದು ತಿಳಿಸಿದರು.

ತಮಿಳುನಾಡಿನಲ್ಲಿ ಕೇಳ್ತಾರೆ ಯಾಕೆ ಕರ್ನಾಟಕದಲ್ಲಿ ಹೆಣ್ಣುಮಕ್ಕಳು ಕಡಿಮೆ ಮಂದಿ ಪಾಲಿಟಿಕ್ಸ್​ಗೆ ಬರ್ತಾರೆ ಅಂತ. ಮದರ್ ಲ್ಯಾಂಡ್ ಅಂತ ಕರೀತಾರೆ, ಫಾದರ್ ಲ್ಯಾಂಡ್ ಅನ್ನಲ್ಲ. ಮನಸಿದ್ದರೆ ಮಾರ್ಗ. ನಾನು ಸದಾ ಗೀತಾ ಜೊತೆ ಇರ್ತೀನಿ ಎಂದು ತಿಳಿಸಿದರು.

ನಾನು ಗೀತಾಗೆ ಹೇಳೋದು ಒಂದೇ..!

ಸಿನಿಮಾರಂಗಕ್ಕೆ ಧನ್ಯವಾದ ಹೇಳ್ತೀನಿ. ಇವತ್ತು ಅನಿಸ್ತಿದೆ. ಅಪ್ಪಾಜಿ ಹೇಳ್ತಿದ್ರು ನಾವೆಲ್ಲಾ ಒಂದು ಕುಟುಂಬ ಅಂತ. ನಮಗೆ ನಿರ್ಮಾಪಕರ ಪ್ರೀತಿ ಹೆಮ್ಮೆ ಅನಿಸುತ್ತಿದೆ. ನಾನು ಗೀತಾಗೆ ಹೇಳೋದು ಒಂದೇ, ಇಲ್ಲಿ ಅನುಭವ ಮುಖ್ಯವಲ್ಲ. ಹೊಸ ರೂಪ ಕೊಡೋಕೆ ಪಳಗಬೇಕಿಲ್ಲ. ಅನುಭವಕ್ಕಿಂತ ಹೃದಯ ದೊಡ್ಡದು ಎಂದು ಹೇಳಿದರು.

RELATED ARTICLES

Related Articles

TRENDING ARTICLES