Friday, May 17, 2024

ಇಂದು ಸೂಪರ್ ಹಿಟ್ ‘ಜಾಕಿ’ ರೀ-ರಿಲೀಸ್: ಅಭಿಮಾನಿಗಳ ಸಂಭ್ರಮಾಚರಣೆ

ಬೆಂಗಳೂರು : ಇದೇ ಮಾರ್ಚ್​ 17 ರಂದು ರಾಜರತ್ನ ಡಾ. ಪುನೀತ್ ರಾಜ್​ಕುಮಾರ್ ಜನ್ಮದಿನದ ಪ್ರಯುಕ್ತ ಇಂದು ರಾಜ್ಯಾದ್ಯಂತ ಜಾಕಿ ಸಿನಿಮಾ ರೀ- ರಿಲೀಸ್ ಆಗಿದೆ. ಹದಿನಾಲ್ಕು ವರ್ಷಗಳ ನಂತರ ಅಪ್ಪು ಅಭಿನಯದ ಬ್ಲಾಕ್ ಬಸ್ಟರ್ ಹಿಟ್ ಮೂವಿ ಮತ್ತೆ ರಿಲೀಸ್ ಆಗಿದೆ, ಅಭಿಮಾನಿಗಳಿಗೆ ಪರಮಾತ್ಮನನ್ನ ಮಗದೊಮ್ಮೆ ಬೆಳ್ಳಿತೆರೆ ಮೇಲೆ ಕಣ್ತುಂಬಿಕೊಂಡಿದ್ದಾರೆ.

ಅಶ್ವಿನಿ ಪುನೀತ್ ರಾಜ್​ಕುಮಾರ್, ತಮ್ಮ ನೆಚ್ಚಿನ ಜಾಕಿ ಸಿನಿಮಾ ರೀ ರಿಲೀಸ್​ಗೆ ಮುಂದಾದಾಗ ಅವರಿಗೆ ಕೆಆರ್​ಜಿ ಸ್ಟುಡಿಯೋಸ್ ಸಾಥ್ ನೀಡಿದೆ. ಸುಮಾರು ಇನ್ನೂರಕ್ಕೂ ಅಧಿಕ ಸ್ಕ್ರೀನ್ಸ್​​ನಲ್ಲಿ ಜಾಕಿ ಚಿತ್ರ ತೆರೆ ಕಾಣುತ್ತಿದೆ.

ಇದನ್ನೂ ಓದಿ: ಬಿಎಸ್​ವೈ ವಿರುದ್ದ ಪೊಕ್ಸೋ ಪ್ರಕರಣ: ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ

ಅಪ್ಪು ನಟನೆಯ, ದುನಿಯಾ ಸೂರಿ ನಿರ್ದೇಶನದ ಬ್ಲಾಕ್ ಬಸ್ಟರ್ ಹಿಟ್ ಜಾಕಿ ಸಿನಿಮಾವು ಅಪ್ಪು ಸಿನಿಮಾಗಳ ರಿಲೀಸ್ ಡೇ ಸೆಲೆಬ್ರೇಷನ್ ರೀತಿಯಲ್ಲೇ ರೀ ರಿಲೀಸ್ ನಲ್ಲು​ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಮುಂಜಾನೆ 4:30ಕ್ಕೆ ಶೋ  ಆರಂಭವಾಗುತ್ತಿದ್ದಂತೆ
ಪಟಾಕಿ ಸಿಡಿಸಿ, ಜಾಕಿ ಸ್ಟೈಲ್ ನಲ್ಲಿ ಸೀಟಿ ಹೊಡೆದ ಅಭಿಮಾನಿಗಳು ಪ್ರತಿ ಹಾಡಿಗೂ ಸ್ಕ್ರೀನ್ ಮುಂದೆ ಕುಣಿದು ಕುಪ್ಪಳಿಸಿದ್ದಾರೆ.

RELATED ARTICLES

Related Articles

TRENDING ARTICLES