Saturday, May 11, 2024

ಬಿಬಿಎಂಪಿ ತೆರಿಗೆ ಪಾವತಿದಾರರಿಗೆ ಸಿಹಿಸುದ್ದಿ: ಶೇ 5ರ ಆಸ್ತಿ ತೆರಿಗೆ ರಿಯಾಯಿತಿ ಜುಲೈವರೆಗೆ ವಿಸ್ತರಣೆ

ಬೆಂಗಳೂರು: ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ಸಾಮಾನ್ಯವಾಗಿ 2 ತಿಂಗಳ ಅವಧಿಗೆ ಆಸ್ತಿ ತೆರಿಗೆ ಪಾವತಿಸುವವರಿಗೆ ಶೇ 5ರಷ್ಟು ರಿಯಾಯಿತಿಯನ್ನು BBMP ನೀಡುತ್ತಾ ಬಂದಿದೆ. ಆದರೆ, ಈ ವರ್ಷ ಶೇ 5ರ ರಿಯಾಯಿತಿ ಜುಲೈ ಅಂತ್ಯದವರೆಗೆ ಜಾರಿಯಲ್ಲಿರಲಿದೆ. ಈ ಸಂಬಂಧ ಬಿಬಿಎಂಪಿ ಗುರುವಾರ ಸುತ್ತೋಲೆ ಹೊರಡಿಸಿದ್ದು, ಮಾದರಿ ನೀತಿ ಸಂಹಿತೆ ಜಾರಿಯಾಗುವ ನಿರೀಕ್ಷೆ ಇದೆ.

ರಿಯಾಯಿತಿಯು 2024ರ ಜುಲೈ 31ರವರೆಗೆ ಇರುತ್ತದೆ ಎಂದು ಬಿಬಿಎಂಪಿ ತಿಳಿಸಿದೆ. ಬಿಬಿಎಂಪಿ ಕಾಯ್ದೆಯ 2020 ರ ಸೆಕ್ಷನ್ 144ರ ಅಡಿಯಲ್ಲಿ, ಹಣಕಾಸಿನ ವರ್ಷದ ಆರಂಭದಲ್ಲಿ ತೆರಿಗೆ ಪಾವತಿ ಮಾಡುವ ಆಸ್ತಿ ಮಾಲೀಕರಿಗೆ ಸಂಸ್ಥೆಯು ಶೇ 5ರ ರಿಯಾಯಿತಿಯನ್ನು ನೀಡಲು ಅವಕಾಶವಿದೆ. ರಾಜ್ಯ ಸರ್ಕಾರ ಹೊಸ ಆಸ್ತಿ ತೆರಿಗೆ ವ್ಯವಸ್ಥೆಯ ಬಗ್ಗೆ ಇನ್ನಷ್ಟೇ ಅಧಿಕೃತ ಅಧಿಸೂಚನೆ ಬರಬೇಕಿದೆ. ಹೀಗಾಗಿ ಸ್ವಯಂ-ಮೌಲ್ಯಮಾಪನ ಯೋಜನೆಯ ಮೂಲಕ ಆಸ್ತಿ ತೆರಿಗೆ ಲೆಕ್ಕಾಚಾರವನ್ನು ಮುಂದುವರಿಸಬಹುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ: ನಾಳೆ ಮಧ್ಯಾಹ್ನ 3 ಗಂಟೆಗೆ ಚುನಾವಣಾ ಆಯೋಗದಿಂದ ವೇಳಾಪಟ್ಟಿ ಬಿಡುಗಡೆ

ವಾರ್ಷಿಕ ತೆರಿಗೆಯಲ್ಲಿ ಗಣನೀಯ ಹೆಚ್ಚಳದ ಬಗ್ಗೆ ನಿವಾಸಿಗಳು, ರಾಜಕೀಯ ಪಕ್ಷಗಳು ಮತ್ತು ವ್ಯಾಪಾರಿಗಳು ಕಳವಳ ವ್ಯಕ್ತಪಡಿಸಿದ ನಂತರ ಹೊಸ ತೆರಿಗೆ ವ್ಯವಸ್ಥೆಯನ್ನು ಸರ್ಕಾರ ತಡೆಹಿಡಿದಿದೆ.

RELATED ARTICLES

Related Articles

TRENDING ARTICLES