Sunday, May 19, 2024

ಬಿಜೆಪಿಯ ಎಲೆಕ್ಟ್ರೋ ಬಾಂಡ್ ಸೀಜ್ ಮಾಡಬೇಕು: ಮಲ್ಲಿಕಾರ್ಜನ್ ಖರ್ಗೆ

ಬೆಂಗಳೂರು: ಬಿಜೆಪಿಯವರ ಎಲೆಕ್ಟ್ರೋ ಬಾಂಡ್ ಸೀಜ್ ಮಾಡಬೇಕು ಅವಾಗ ಎಷ್ಟಿದೆ ಅನ್ನೋ ಸತ್ಯಾಂಶ ಹೊರಗೆ ಬರುತ್ತದೆ ಇದರ ಬಗ್ಗೆ ಸಮಗ್ರ ತನಿಖೆಯಾಗುಬೇಕು ಎಂದು ಎಐಸಿಸಿ ಅಧ್ಯಕ್ಷೆ ಮಲ್ಲಿಕಾರ್ಜನ್​ ಖರ್ಗೆ ಕಿಡಿಕಾರಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಎಲೆಕ್ಟ್ರೋ ಬಾಂಡ್ ಬಗ್ಗೆ ಜನರಿಗೆ ಮಾಹಿತಿ ಕೊಡಬೇಕು. ಮಹತ್ವದ ವಿಷಯ ದೇಶದ ಜನರಿಗೆ ಗೊತ್ತಾಗಬೇಕು. ಪ್ರಧಾನಿಯವರು ಇಲ್ಲಸಲ್ಲದ ಹೇಳಿಕೆ ಕೊಡ್ತಿದ್ದಾರೆ ನಾ ಕಾವೂಂಗಾ ಕಾನೇದೂಂಗಾ ಅಂತಾರೆ ಎಲೆಕ್ಟ್ರೋ ಬಾಂಡ್ ಕಲೆಕ್ಟ್ ಬಗ್ಗೆ ಸುಪ್ರೀಂ ಹೇಳಿದೆ.5೦% ಬಿಜೆಪಿ ಬಾಂಡ್ ಪಡೆದಿದೆ
ಕಾಂಗ್ರೆಸ್11% ಬಾಂಡ್ ಪಡೆದಿದೆ.ವಾರ್ಷಿಕವಾಗಿ ಡೊನೇಶನ್ ಸಂಗ್ರಹ ಮಾಡಲಾಗ್ತಿದೆ.ಇಷ್ಟೊಂದು ಹಣ ಹೇಗೆ ಸಂಗ್ರಹ ಅನ್ನೋ ಪ್ರಶ್ನೆ ಎದ್ದಿದೆ ಎಂದರು.

ಹಲವು ಕಂಪನಿಗಳಿಂದ ಡೊನೇಶನ್ ಪಡೆಯಲಾಗಿದೆ.ಇಡಿ,ಐಟಿ ರೇಡ್ ಗಳನ್ನ ಮಾಡುತ್ತೆ.ಇಲ್ಲಿಂದಲೇ ಹಣವನ್ನ ಡೊನೇಶನ್ ರೂಪದಲ್ಲಿ ಪಡೆಯುತ್ತಿದೆ ಇದರ ಬಗ್ಗೆ ಸುಪ್ರೀಂ ಪ್ರಶ್ನಿಸಿದೆ.ಕಾಂಗ್ರೆಸ್ ಅಕೌಂಟ್ ಗಳನ್ನ ರದ್ಧುಪಡಿಸಲಾಗಿದೆ ಎಂದರು.

3೦೦ ಕೋಟಿ ಹಣವನ್ನ ಸೀಜ್ ಮಾಡಿದೆ. ಕೋಟಿ ಕೋಟಿ ಬಾಂಡ್ ಗಳನ್ನ ಪಡೆಯಲಾಗಿದೆ ಕಾಂಗ್ರೆಸ್ ಕಾರ್ಯಕರ್ತರಿಂದ ಡೊನೇಶನ್ ಪಡೆದಿತ್ತು.ಅಂತಹ ಅಕೌಂಟ್ ಗಳನ್ನ ಸೀಜ್ ಮಾಡಲಾಗಿದೆ. ಆದರೆ ಬೇರೆ ಅಕೌಂಟ್ ಗಳನ್ನ ಹಾಗೆ ಬಿಡಲಾಗಿದೆ.ಬರಿ ಪ್ರತಿಪಕ್ಷಗಳ ಅಕೌಂಟ್ ಮಾತ್ರ ಸೀಜ್ ಮಾಡಿದ್ದೇಕೆ
ಇದರ ಬಗ್ಗೆ ನಾವು ಕೇಳ್ತಿದ್ದೇವೆ. ಇದರ ಬಗ್ಗೆ ತನಿಖೆಯಾಗಬೇಕು ಬೇರೆ ಅಕೌಂಟ್ ಗಳು ಸೀಜ್ ಮಾಡಬೇಕು
ಜನರಿಗೆ ಸತ್ಯಾಂಶ ಗೊತ್ತಾಗಬೇಕು ಎಂದು ಹೇಳಿದ್ದರು.

ಹರಾಸ್ ಮೆಂಟ್ ಮಾಡಿ ಡೊನೇಶನ್ ಸಂಗ್ರಹ ಬಿಜೆಪಿ ಹಣ ಸಂಗ್ರಹಣೆ ಮಾಡಿದೆ.ಬಿಜೆಪಿ ಮಾತ್ರ ಕ್ಲೀನ್ ಅಂತ ತೋರಿಸಿಕೊಳ್ತಿದೆ. ಬೇರೆ ಪಕ್ಷಗಳು ಮಾತ್ರ ಅಪರಾಧಿ ಅಂತ ನೋಡ್ತಿದೆ.ಸುಪ್ರೀಂಕೋರ್ಟ್ ಎಲ್ಲವನ್ನೂ ಸೀಜ್ ಮಾಡುವಂತೆ ಹೇಳಿದೆ.ಎಲ್ಲಾ ಸತ್ಯಾಂಶ ಹೊರಗೆ ತರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES