Friday, May 17, 2024

ಅರಮನೆ ಎಸಿ ರೂಂ ಬಿಟ್ಟು ಬರೋದು ದೊಡ್ಡ ವಿಚಾರ ಅಲ್ಲ : ಪ್ರತಾಪ್ ಸಿಂಹಗೆ ಯದುವೀರ್ ತಿರುಗೇಟು

ಮೈಸೂರು : ಅರಮನೆ ಎಸಿ ಕೊಠಡಿಯಿಂದ ಹೊರ ಬರುವುದು ದೊಡ್ಡ ವಿಚಾರ ಅಲ್ಲ ಎಂದು ಸಂಸದ ಪ್ರತಾಪ್ ಸಿಂಹರಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿರುಗೇಟು ಕೊಟ್ಟರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ ಪ್ರಭುತ್ವ ಎನ್ನುವುದೆಲ್ಲ ಬೇರೆ. ಸಂವಿಧಾನದಲ್ಲಿ, ಕಾನೂನಿನಲ್ಲಿ, ದೇವರ ಮುಂದೆ ಎಲ್ಲರೂ ಒಂದೇ ಎಂದು ಯದುವೀರ್ ಹೇಳಿದರು.

ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡೇ ರಾಜಕೀಯಕ್ಕೆ ಬಂದಿದ್ದೇನೆ. ರಾಜಕಾರಣವೇ ದೊಡ್ಡ ಚಾಲೆಂಜ್. ರಾಜಕೀಯದಲ್ಲಿ ಅಂತಹ ಸಂದರ್ಭಗಳು ಹೆಚ್ಚಿರಬಹುದು. ಅದನ್ನು ನಾವು ಜೀರ್ಣಿಸಿಕೊಳ್ಳಬೇಕು. ರಾಜಕೀಯಕ್ಕೆ ಬಂದಾಗ ಅದೆಲ್ಲವೂ ಸಹಜ. ಎಲ್ಲದಕ್ಕೂ ಸಿದ್ದವಾಗಿದ್ದೇನೆ ಎಂದು ತಿಳಿಸಿದರು.

ತಾಯಿ ಅನುಮತಿ, ಆಶೀರ್ವಾದ ಪಡೆದೇ ಬಂದಿದ್ದೇನೆ

ಳೆದ ಒಂದು ವರ್ಷದಿಂದ ರಾಜಕೀಯಕ್ಕೆ ಬರುವ ಬಗ್ಗೆ ತೀರ್ಮಾನ ಮಾಡಿದ್ದೆ. ರಾಜಸ್ಥಾನದ ಮೂಲ, ರಾಜಸ್ಥಾನದ ಪ್ರಭಾವ ಇದ್ಯಾವುದು ಇಲ್ಲ. ನನ್ನ ತಾಯಿಯ ಅನುಮತಿ ಹಾಗೂ ಆಶೀರ್ವಾದ ಪಡೆದು ಚುನಾವಣೆಗೆ ಬಂದಿದ್ದೇನೆ. ನನಗೆ ಮೈಸೂರಿನ ಅಭಿವೃದ್ಧಿ ವಿಚಾರವಾಗಿ ನನ್ನದೆ ಆದ ಕನಸುಗಳಿದೆ ಎಂದು ಹೇಳಿದರು.

ಸುದ್ದಿ ಓದಿದ್ದೀರಾ? : ಅರಮನೆ ಎಸಿ ರೂಂ ಬಿಟ್ಟು ಬಂದ್ರೆ ಸ್ವಾಗತ : ಯದುವೀರ್​ಗೆ ಟಾಂಗ್ ಕೊಟ್ರಾ ಪ್ರತಾಪ್ ಸಿಂಹ

ದಕ್ಷಿಣ ಭಾರತದ ಪ್ರವಾಸೋದ್ಯಮ ಕೇಂದ್ರ ಮಾಡ್ತೀನಿ

ದಕ್ಷಿಣ ಭಾರತದ ಪ್ರವಾಸೋದ್ಯಮ ಕೇಂದ್ರವಾಗಿ ಮೈಸೂರು ಮಾಡಬೇಕೆಂಬ ಆಸೆ ಇದೆ. ಆ ಕೆಲಸಗಳನ್ನ ಮಾಡುತ್ತೇನೆ. ನಮ್ಮ ಕುಟುಂಬದ ವ್ಯಾಜ್ಯಗಳು ಅವು ಕಾನೂನಿನ ವ್ಯಾಪ್ತಿಯಲ್ಲಿದೆ. ಅವುಗಳ ಅನುಸಾರ ಅದು ನಡೆಯುತ್ತದ. ಅದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ ಎನ್ನುವ ಮೂಲಕ ಯದುವೀರ್ ಕೃಷ್ಣದತ್ತ ಒಡೆಯರ್ ಜಾಣ್ಮೆಯ ನಡೆ ಪ್ರದರ್ಶಿಸಿದರು.

RELATED ARTICLES

Related Articles

TRENDING ARTICLES