Friday, May 17, 2024

ಮಾಜಿಯಾದ ಮೇಲೂ ಕೈಲಾದ ಕೆಲಸ ಮಾಡಿಕೊಡ್ತೀನಿ : ಪ್ರತಾಪ್ ಸಿಂಹ ಮತ್ತೊಂದು ಪೋಸ್ಟ್

ಮೈಸೂರು : ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಸಂಸದ ಪ್ರತಾಪ್ ಸಿಂಹ ಮತ್ತೊಂದು ಪೋಸ್ಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ಫೇಸ್​ಬುಕ್​ ಹಾಗೂ ಎಕ್ಸ್​ ಖಾತೆಯಲ್ಲಿ ಪೋಟ್ಸ್​ ಮಾಡಿರುವ ಅವರು, ಮಾಜಿ ಸಂಸದನಾದ ಮೇಲೂ ಕೈಲಾದ ಕೆಲಸ ಮಾಡಿಕೊಡ್ತೀನಿ ಎಂದು ಜನತೆಗೆ ಭರವಸೆ ನೀಡಿದ್ದಾರೆ.

‘ನನ್ನ ಪ್ರೀತಿಯ ಕಾರ್ಯಕರ್ತರೇ ಮತ್ತು ಕೊಡಗು-ಮೈಸೂರಿನ ಬಂಧುಗಳೇ, ಬಿಜೆಪಿ ಟಿಕೆಟ್ ಕೈತಪ್ಪಿದೆ, ಇವನ ಬಳಿ ಹೇಗೆ ಕೆಲಸಕ್ಕಾಗಿ ಕರೆ ಮಾಡುವುದು ಎಂದು ಅಂಜಬೇಡಿ. ಈಗಲೂ ಮತ್ತು ಮಾಜಿಯಾದ ಮೇಲೂ ಕೈಲಾದ ಕೆಲಸ ಮಾಡಿಕೊಡುತ್ತೇನೆ. ಸೋಮವಾರದಿಂದ ಪ್ರಚಾರ ಕಾರ್ಯಕ್ಕೆ ಬರುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಇನ್ನೆರಡು ದಿನದಲ್ಲಿ ಪ್ರಚಾರ ಆರಂಭಿಸುವೆ

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆದಿರುವ ಮಹಾರಾಜ ಯದುವೀರರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದೇನೆ. ಇನ್ನೆರಡು ದಿನಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗುತ್ತೇನೆ. ಎಲ್ಲರಿಗೂ ಧನ್ಯವಾದಗಳು ಎಂದು ನಿನ್ನೆ ಪೋಸ್ಟ್ ಮಾಡಿದ್ದರು.

ಮಂತ್ರಿಯಾಗಿ ನೋಡುವ ಭರವಸೆ ಇದೆ

ಇನ್ನೂ ಬಿಜೆಪಿ ಟಿಕೆಟ್ ಪಡೆದ ತೇಜಸ್ವಿ ಸೂರ್ಯರಿಗೆ ಪ್ರತಾಪ್ ಸಿಂಹ ಅಭಿನಂದನೆ ತಿಳಿಸಿದ್ದಾರೆ. ಟಿಕೆಟ್ ಪಡೆದ ನನ್ನ ಸಹೋದರ ತೇಜಸ್ವಿ ಸೂರ್ಯ ಅವರಿಗೆ ಅಭಿನಂದನೆಗಳು ಮತ್ತು ನಿಮ್ಮನ್ನು ಭಾರತ ಸರ್ಕಾರದಲ್ಲಿ ಮಂತ್ರಿಯಾಗಿ ನೋಡುವ ಭರವಸೆ ಇದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES